
ನವದೆಹಲಿ: ಮೊನ್ನೆ ತಾನೆ ಗೂಗಲ್‍ನಲ್ಲಿ 2015ರ ಅತಿ ಹೆಚ್ಚು ಹುಡುಕಾಟ ನಡೆಸಿದ ಕ್ರೀಡಾಳು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರೀಗ ಮತ್ತೊಂದು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇತ್ತೀಚೆಗೆ ಬಿಡುಗಡೆಗೊಂಡ ವಿರಾಟ್ ಕ್ರಿಕೆಟ್ ಚಾಲೆಂಜ್ ಹೆಸರಿನ ಮೊಬೈಲ್ ಸ್ಪೋರ್ಟಿಂಗ್ ಆ್ಯಪ್ ಇದೀಗ, ಆ್ಯಂಡ್ರಾಯ್ಡ್ ನ ಗೂಗಲ್ ಪ್ಲೇನಲ್ಲಿ ಅತಿ ಹೆಚ್ಚು ಡೌನ್‍ಲೋಡ್ ಆದ ಕ್ರೀಡಾ ಆ್ಯಪ್ ಎಂಬ ಹಿರಿಮೆಗೆ ಭಾಜನವಾಗಿದೆಯಲ್ಲದೆ, ಕ್ಯಾಂಡಿ ಕ್ರಷ್, ಟೆಂಪಲ್ ರನ್, ಕ್ಲಾಷ್ ಆಫ್ ಕ್ಯಾನ್ಸ್, ಸಬ್‍ವೇ ಸರ್ಫರ್ಸ್ ಗೇಮ್ಸ್ಗಳನ್ನೂ ಅದು ಹಿಂದಿಕ್ಕಿದೆ. ನಝಾರಾ ಗೇಮ್ಸ್ ಕಂಪನಿಯು ಸಿದ್ಧಗೊಳಿಸಿರುವ ಈ ಆ್ಯಪ್ ಡಿ. 14ರಂದು ಬಿಡುಗಡೆಯಾಗಿತ್ತು.
Advertisement