ಪಿಎಸ್ಎಲ್ ಹರಾಜು ಪ್ರಕ್ರಿಯೆ: ಗೇಲ್‍ಗೆ ಕೋಟಿ ಕೊಟ್ಟ ಲಾಹೋರ್

ಮುಂದಿನ ವರ್ಷ ನಡೆಯಲಿರುವ ಚೊಚ್ಚಲ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‍ಎಲ್) ಟಿ20 ಸರಣಿಗಾಗಿ ಆಟಗಾರರ ಆಯ್ಕೆ ಪ್ರಕ್ರಿಯೆ ಸೋಮವಾರ ಆರಂಭಗೊಂಡಿದೆ.
ಕ್ರಿಸ್ ಗೇಲ್
ಕ್ರಿಸ್ ಗೇಲ್

ಲಾಹೋರ್: ಮುಂದಿನ ವರ್ಷ ನಡೆಯಲಿರುವ ಚೊಚ್ಚಲ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‍ಎಲ್) ಟಿ20 ಸರಣಿಗಾಗಿ ಆಟಗಾರರ ಆಯ್ಕೆ ಪ್ರಕ್ರಿಯೆ ಸೋಮವಾರ ಆರಂಭಗೊಂಡಿದೆ.
ಲಾಹೋರ್ ವಿಶ್ವ ವಿದ್ಯಾಲಯದ ಸಭಾಂಗಣದಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಸ್ಫೋಟಕ ಬ್ಯಾಟ್ಸ್‍ಮನ್, ವೆಸ್ಟ್ ಇಂಡೀಸ್‍ನ ಕ್ರಿಸ್ ಗೇಲ್ ಅವರನ್ನು ಪಾಕಿಸ್ತಾನ ರುಪಾಯಿ ಲೆಕ್ಕಾಚಾರದಂತೆ 1 ಕೋಟಿ 46 ಲಕ್ಷ ರು. ಮೊತ್ತಕ್ಕೆ ಲಾಹೋರ್ ಕ್ವಲ್ಯಾಂಡರ್ಸ್ ಕೊಂಡುಕೊಂಡರೆ, ಮೊದಲ ದಿನದ ಆಯ್ಕೆಯಲ್ಲಿ ಪಾಕಿಸ್ತಾನದ ಹಿರಿಯ ಅಟಗಾರ ಯೂನಿಸ್ ಖಾನ್ ಯಾರಿಗೂ ಬೇಡವಾದರು.ಇತರ ಅಗ್ರ ಅಂತಾರಾಷ್ಟ್ರೀಯ ಟಿ20 ಆಟಗಾರರಾದ ಕೆವಿನ್ ಪೀಟರ್ಸನ್, ಶೇನ್ ವ್ಯಾಟ್ಸನ್, ಶೋಯೆಬ್ ಮಲಿಕ್ ಅವರೂ ತಲಾ 1 ಕೋಟಿ 46 ಲಕ್ಷ ರು. ಮೊತ್ತಕ್ಕೆ ಕ್ರಮವಾಗಿ ಕ್ವೆಟ್ಟಾ ಗ್ಲಾಡಿಯೇಟರ್ಸ್, ಇಸ್ಲಾಮಾಬಾದ್ ಯುನೈಟೆಡ್, ಕರಾಚಿ ಕಿಂಗ್ಸ್, ಪೆಶಾವರ್ ಝಲ್ಮಿ ತಂಡಗಳಿಗೆ ಸೇರ್ಪಡೆಗೊಂಡಿದ್ದಾರೆ.
ಆಯ್ಕೆ ಹೇಗೆ?: ಟೂರ್ನಿಗಾಗಿ ಆರಂಭಗೊಂಡಿರುವ ಆಟಗಾರರ ಹರಾಜು ಪಟ್ಟಿಯಲ್ಲಿ ಒಟ್ಟು 308  ಆಟಗಾರರಿದ್ದು, ಇವರಲ್ಲಿ 137 ಪಾಕಿಸ್ತಾನೀಯರು. ಈ ಎಲ್ಲರನ್ನೂ ಅವರವರ ಅಂತಾರಾಷ್ಟ್ರೀಯ ಮಾನ್ಯತೆ ಆಧಾರದಲ್ಲಿ ಪ್ಲಾಟಿನಂ, ಡೈಮಂಡ್, ಗೋಲ್ಡ್, ಸಿಲ್ವರ್ ಹಾಗೂ ಎಮರ್ಜಿಂಗ್ ಎಂಬ ಐದು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಪ್ಲಾಟಿನಂ ವಿಭಾಗಕ್ಕೆ 1 ಕೋಟಿ 46 ಲಕ್ಷ (ಡಾಲರ್ ವಿರುದ್ಧದ ಪಾಕಿಸ್ತಾನ ರುಪಾಯಿ ದರದಂತೆ) ನಿಗದಿಗೊಳಿಸಲಾಗಿದ್ದು ಈ ವಿಭಾಗದಿಂದ ಆಯ್ಕೆಯಾಗುವ ಎಲ್ಲಾ ಆಟಗಾರರೂ ಅದೇ ಮೊತ್ತಕ್ಕೆ ಹರಾಜಾಗಲಿದ್ದಾರೆ.ಡೈಮಂಡ್‍ಗೆ ರೂ. 73 ಲಕ್ಷ, ಗೋಲ್ಡ್‍ಗೆ  52 ಲಕ್ಷ, ಸಿಲ್ವರ್ ವಿಭಾಗದ ಆಟಗಾರರಿಗೆ 26 ಲಕ್ಷ, ಎಮರ್ಜಿಂಗ್ ಆಟಗಾರರಿಗೆ 10 ಲಕ್ಷ ರು. ನಿಗದಿಪಡಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com