ಯೋಧಾಸ್ ಕೆಡವಿದ ದಿಲ್ಲಿ ವೀರ್

ಅತ್ಯಂತ ರೋಚಕತೆಯಿಂದ ಕೂಡಿದ್ದ ಅಂತಿಮ ಸೆಣಸಿನಲ್ಲಿ ಬೆಂಗಳೂರು ಯೋಧಾಸ್ ತಂಡದ ಪ್ರಮುಖ ಆಟಗಾರ ಬಜರಂಗ್ ಪುನಿಯಾ ಜಯ ಸಾಧಿಸುವಲ್ಲಿ...
ಪುರುಷರ 65 ಕೆ.ಜಿ ವಿಭಾಗದ ನಿರ್ಣಾಯಕ ಸೆಣಸಿನಲ್ಲಿ ಬೆಂಗಳೂರು ಯೋಧಾಸ್ ನ ಬಜರಂಗ್ ಪುನಿಯಾ (ನೀಲಿ ದಿರಿಸು) ಅವರನ್ನು ಕೆಡವಿದ ದಿಲ್ಲಿಯ ನವ್ರು ಜೊವ್ ಇಕ್ತಿಯಾರ್
ಪುರುಷರ 65 ಕೆ.ಜಿ ವಿಭಾಗದ ನಿರ್ಣಾಯಕ ಸೆಣಸಿನಲ್ಲಿ ಬೆಂಗಳೂರು ಯೋಧಾಸ್ ನ ಬಜರಂಗ್ ಪುನಿಯಾ (ನೀಲಿ ದಿರಿಸು) ಅವರನ್ನು ಕೆಡವಿದ ದಿಲ್ಲಿಯ ನವ್ರು ಜೊವ್ ಇಕ್ತಿಯಾರ್
Updated on

ಬೆಂಗಳೂರು: ಅತ್ಯಂತ ರೋಚಕತೆಯಿಂದ ಕೂಡಿದ್ದ ಅಂತಿಮ ಸೆಣಸಿನಲ್ಲಿ ಬೆಂಗಳೂರು  ಯೋಧಾಸ್ ತಂಡದ ಪ್ರಮುಖ ಆಟಗಾರ ಬಜರಂಗ್ ಪುನಿಯಾ ಜಯ ಸಾಧಿಸುವಲ್ಲಿ   ವಿಫಲರಾದ ಪರಿಣಾಮ ಆತಿಥೇಯ  ಬೆಂಗಳೂರು ಯೋಧಾಸ್ ತಂಡ ಪ್ರೊ. ರೆಸ್ಲಿಂಗ್ ನಲ್ಲಿ ಅದರಲ್ಲೂ ತವರಿನ ಅಭಿಯಾನದಲ್ಲಿ ಮುಗ್ಗರಿಸಿತು.

ಬುಧವಾರ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕುಸ್ತಿ ಸೆಣಸಾಟದಲ್ಲಿ ಬೆಂಗಳೂರು ಯೋಧಾಸ್ ತಂಡ 3-4 ಅಂತರದಲ್ಲಿ  ದಿಲ್ಲಿ ವೀರ್ ತಂಡದ ವಿರುದ್ಧ  ಪರಾಭವಗೊಂಡಿತು. ಪಂದ್ಯದ ಮೊದಲ ಸೆಣಸಿನಲ್ಲಿ ಬೆಂಗಳೂರಿನ ಸಂದೀಪ್ ತೋಮರ್  ಪುರುಷರ 57 ಕೆ.ಜಿ  ವಿಭಾಗದಲ್ಲಿ ದಿಲ್ಲಿಯ ಎರ್ಡೆನ್‍ಬೀಟ್ ಬೆಕ್ಬಯರ್ ವಿರುದ್ಧ 0-7  ಅಂತರದ ಹಿನ್ನಡೆಯೊಂದಿಗೆ ನಿರಾಸೆ ಮೂಡಿಸಿದರು. ಬಳಿಕ ಮಹಿಳೆಯರ 53 ಕೆ.ಜಿ ವಿಭಾಗದಲ್ಲಿ  ಯೋಧಾಸ್‍ನ ಲಲಿತಾ ಶೆರಾವತ್ 6-11ರಿಂದ ಮುಗ್ಗರಿಸಿದರು. ಆ ಮೂಲಕ ಆರಂಭಿಕ ಎರಡು  ಸೆಣಸಿನಲ್ಲಿ ಗೆದ್ದ ದಿಲ್ಲಿ ವೀರ್ ತಂಡ ಯೋಧಾಸ್ ಎದುರಿನ ಹಣಾಹಣಿಯಲ್ಲಿ ಬಿಗಿ ಹಿಡಿತ  ಸಾಧಿಸಿತು.

ಆನಂತರ ಬೆಂಗಳೂರು ಯೋಧಾಸ್ ತಂಡ ತೀವ್ರ ಹೋರಾಟಕಾರಿ ಪ್ರದರ್ಶನದ ಮೂಲಕ  ಪಂದ್ಯದಲ್ಲಿ  ಮತ್ತೆ ಸಮಬಲ ಸಾಧಿಸುವಲ್ಲಿ ಯಶ ಕಂಡಿತು.ಪುರುಷರ 125 ಕೆ.ಜಿ.ವಿಭಾಗದಲ್ಲಿ  ಯೋಧಾಸ್‍ನ ಮೊಮನವಿಲ್ ಡೇವಿಟ್ ತಮ್ಮ ಪ್ರತಿಸ್ಪರ್ಧಿ ಕ್ರಿಷನ್ ಕುಮಾರ್ ಅವರನ್ನು  0-0 ಅಂತರದಲ್ಲಿ ಮಣಿಸಿ ಪಾರಮ್ಯ ಮೆರೆದರು. ಬಳಿಕ ನಡೆದ ಮಹಿಳೆಯರ  58 ಕೆ.ಜಿ  ವಿಭಾಗದ ಸೆಣಸಾಟದಲ್ಲಿ ಯೋಧಾಸ್ ತಂಡದ ಭರವಸೆ ಆಟಗಾರ್ತಿ ಯುಲಿಯಾ ರಾಟ್ಕೆವೆಚ್ 3-1 ಅಂತರದಲ್ಲಿ ಮೇಲುಗೈ ಸಾಧಿಸುವ  ಮೂಲಕ ಯೋಧಾಸ್ ತಂಡ  ಪಂದ್ಯದಲ್ಲಿ 2-2 ಸಮಬಲ ಸಾಧಿಸಲು ನೆರವಾದರು. 

ತದನಂತರ ನಡೆದ ಪುರುಷರ 74 ಕೆ.ಜಿ ವಿಭಾಗದ ಪಂದ್ಯದಲ್ಲಿ ಯೋಧಾಸ್ ತಂಡದ   ನಾಯಕ ನರಸಿಂಗ್ ಯಾದವ್ ಆಕರ್ಷಕ ಪ್ರದರ್ಶನ ನೀಡಿದರು. ತಮ್ಮ ಪ್ರತಿಸ್ಪರ್ಧಿ ದಿಲ್ಲಿಯ ದಿನೇಶ್ ಕುಮಾರ್ ಅವರನ್ನು 8-4 ಅಂತರದಿಂದ ಮಣಿಸಿ ಯೋಧಾಸ್‍ಗೆ 3-2 ಮುನ್ನಡೆ ತಂದಿತ್ತರು. ನರಸಿಂಗ್ ಅವರ ಗೆಲುವಿನಿಂದಾಗಿ ಬೆಂಗಳೂರು ಯೋಧಾಸ್ ಪಾಳಯದಲ್ಲಿ ಜಯದ ಆಸೆ  ಚಿಗುರೊಡೆಯಿತು. 

ಇದೇ ಹುರುಪಿನಲ್ಲಿ ಅಖಾಡಕ್ಕಿಳಿದ ಅಲಿಸ್ಸಾ ಲ್ಯಾಂಪೆ, ಮಹಿಳೆಯರ 48.ಕೆ.ಜಿ ವಿಭಾಗದ  ಪಂದ್ಯದಲ್ಲಿ ದಿಲ್ಲಿಯ ನಾಯಕಿ ವಿನೇಶ್ ಪೋಗಟ್ ವಿರುದ್ಧ 0-10 ಅಂತರದಲ್ಲಿ ಹೀನಾಯ  ಸೋಲನುಭವಿಸಿದರು. ಆ ಮೂಲಕ ಮತ್ತೆ ಉಭಯ ತಂಡಗಳು ಸಮಬಲ ಸಾಧಿಸಿ ಪಂದ್ಯದ  ರೋಚಕತೆ ಹೆಚ್ಚಿಸಿದರು. ಇನ್ನು ಈ ಹಂತದಲ್ಲಿ ಬೆಂಗಳೂರಿನ ಭರವಸೆಯ ಕುಸ್ತಿಪಟು   ನಜರಂಗ್ ಪುನಿಯಾ ಹೆಗಲ ಮೇಲೆ ಬಹುದೊಡ್ಡ ಜವಾಬ್ದಾರಿ ಬಿದ್ದಿತು. ಆದರೆ, ತಮ್ಮ ಮೇಲಿನ   ಭಾರೀ ನಿರೀಕ್ಷೆಯನ್ನು ಹುಸಿಗೊಳಿಸಿದ ಪುನಿಯಾ, ದಿಲ್ಲಿ ತಂಡದ ನವ್ರುಜೊವ್ ಇಕ್ತಿಯಾರ್ ವಿರುದ್ಧ-10 ಅಂತರದ ಹಿನ್ನಡೆ ಅನುಭವಿಸಿದ  ಪರಿಣಾಮ ಯೋಧಾಸ್ ವಿರುದ್ಧ ದಿಲ್ಲಿ ವೀರ್ ವಿಜಯದ ಕೇಕೆ ಹಾಕಿತು.

ಇಂದಿನ ಪಂದ್ಯ  ಹರ್ಯಾಣ ಹ್ಯಾಮರ್ಸ್/ ಮುಂಬೈ ಗರುಡಾ  ಪಂದ್ಯ ಆರಂಭ: ರಾತ್ರಿ 7

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com