ಮೊಹಮ್ಮದ್ ಆಮೀರ್
ಕ್ರೀಡೆ
ಆಮೀರ್ ಆಟಕ್ಕೆ ಕೋರ್ಟ್ ಅಸ್ತು
ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಜೈಲು ವಾಸ ಅನುಭವಿಸಿದ್ದಲ್ಲದೆ, ಐಸಿಸಿಯ ಐದು ವರ್ಷಗಳ ಅಮಾನತು ಶಿಕ್ಷೆ ಪೂರೈಸಿರುವ ಮೊಹಮದ್...
ಲಾಹೋರ್: ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಜೈಲು ವಾಸ ಅನುಭವಿಸಿದ್ದಲ್ಲದೆ, ಐಸಿಸಿಯ ಐದು ವರ್ಷಗಳ ಅಮಾನತು ಶಿಕ್ಷೆ ಪೂರೈಸಿರುವ ಮೊಹಮದ್ ಆಮೀರ್ ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳುವ ಕುರಿತು ಇದ್ದ ಅಡೆತಡೆಗಳನ್ನು ಪಾಕಿಸ್ತಾನದ ನ್ಯಾಯಾಲಯ ಮಂಗಳವಾರ ತೆರವುಗೊಳಿಸಿದೆ.
ರಾಷ್ಟ್ರೀಯ ತಂಡಕ್ಕೆ ಆಮೀರ್ ಮರಳದಂತೆ ತಡೆ ನೀಡಬೇಕೆಂದು ಮುನ್ಸೀಫ್ ಆವಾನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಶಾಹಿದ್ ಬಿಲಾಲ್ ಹಸನ್ ವಜಾಗೊಳಿಸಿದರು.
2010ರ ಲಾಡ್ರ್ಸ್ ಟೆಸ್ಟ್ ಪಂದ್ಯದ ವೇಳೆ ನಾಯಕ ಸಲ್ಮಾನ್ ಬಟ್ ಮತ್ತು ಮೊಹಮದ್ ಆಸೀಫ್ ಅವರ ಪ್ರಲೋಭನೆಗೆ ಬಿದ್ದಿದ್ದ ಆಮೀರ್ ಎರಡು ನೋ- ಬಾಲ್ ಎಸೆತಗಳಿಂದ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಪಾಲ್ಗೊಂಡು ಅದಕ್ಕೆ ತಕ್ಕ ಬೆಲೆಯನ್ನೂ ತೆತ್ತಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ