ಸಲಿಂಗಿ ರೆಫರಿ ಅಮಾನತು: ಟರ್ಕಿ ನ್ಯಾಯಾಲಯದಿಂದ ಸಂಸ್ಥೆಗೆ ದಂಡ

ಮಾನ್ಯತೆ ಪಡೆದ ರೆಫರಿಯೋಬ್ಬರನ್ನು ಅವರು ಸಲಿಂಗಿ ಎಂಬ ಕಾರಣಕ್ಕಾಗಿ ಫುಟ್ಬಾಲ್ ಮೈದಾನದಿಂದ ಅಮಾನತು ಮಾಡಿದ ಕ್ರಮಕ್ಕೆ ಟರ್ಕಿ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಸಲಿಂಗಿ ರೆಫರಿ ಅಮಾನತು: ಟರ್ಕಿ ನ್ಯಾಯಾಲಯದಿಂದ ಸಂಸ್ಥೆಗೆ ದಂಡ
ಸಲಿಂಗಿ ರೆಫರಿ ಅಮಾನತು: ಟರ್ಕಿ ನ್ಯಾಯಾಲಯದಿಂದ ಸಂಸ್ಥೆಗೆ ದಂಡ

ಇಸ್ತಾನ್ ಬುಲ್: ಮಾನ್ಯತೆ ಪಡೆದ ರೆಫರಿಯೋಬ್ಬರನ್ನು ಅವರು ಸಲಿಂಗಿ ಎಂಬ ಕಾರಣಕ್ಕಾಗಿ ಫುಟ್ಬಾಲ್ ಮೈದಾನದಿಂದ ಅಮಾನತು ಮಾಡಿದ ಕ್ರಮಕ್ಕೆ ಟರ್ಕಿ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
23 ,000 ಟರ್ಕಿಷ್ ಲಿರಾ(ಅಂದಾಜು 5 .25 ಲಕ್ಷ ರೂ) ಗಳನ್ನು ಪರಿಹಾರ ರೂಪವಾಗಿ ತೆರಬೇಕೆಂದು ಟರ್ಕಿ ಫುಟ್ಬಾಲ್ ಒಕ್ಕೂಟ(ಟಿಎಫ್ ಎಫ್) ಕ್ಕೆ ಆದೇಶಿಸಿದೆ. ಹಲೀಲ್ ಇಬ್ರಾಹಿಂ ಡಿನ್ ಕ್ಯಾಗ್ ಎಂಬ ಫುಟ್ಬಾಲ್ ರೆಫರಿ ಮೂಲತಃ ಸಲಿಂಗಿಯಾಗಿದ್ದರೂ ಅವರಿಗೆ ಪೂರ್ಣಪ್ರಮಾಣಾದ ರೆಫರಿ ಪಟ್ಟವನ್ನು ನೀಡಲಾಗಿದೆ. ಇದರ ಹೊರತಾಗಿಯೂ ಟಿಫ್ಎಫ್ ತಮ್ಮ ಕಕ್ಷಿದಾರರನ್ನು ಅಪಮಾನಿಸಿದೆ ಎಂಬ ವಾದಕ್ಕೆ ಮನ್ನಣೆ ಸಿಕ್ಕಿತು.
"ಈ ಮೊದಲು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಡಿನ್ ಕ್ಯಾಗ್ ಸಲಿಂಗಕಾಮಿಯಾಗಿದ್ದರಿಂದ ಅವರು ಉದ್ಯೋಗ ಕಳೆದುಕೊಂಡಿದ್ದರು. ಹೀಗಾಗಿ ಅವರು ರೆಫರಿಯಾಗಿ ಕಾರ್ಯನಿರ್ವಹಿಸಲು ಅನರ್ಹರು ಎಂದು ಅವರನ್ನು ಅಮಾನತುಗೊಳಿಸಲಾಗಿತ್ತು" ಎಂಬ ಟಿಎಫ್ ಎಫ್ ನ ವಾದವನ್ನು ನ್ಯಾಯಾಲಯ ಪುರಸ್ಕರಿಸಲಿಲ್ಲ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com