ವರವಾಗಿ ಬಂದ ವೈಜ್ಞಾನಿಕ ತಂತ್ರಜ್ಞಾನ

ಕ್ರಿಕೆಟ್ ರಂಗದಲ್ಲಿ ಹೊಸ ಶಕೆ ಶುರುವಾಗಿದ್ದು 1992ರ ವಿಶ್ವಕಪ್ ಎಂದಾದರೂ, ನಿಜವಾಗಿ ಹೇಳಬೇಕೆಂದರೆ, ಅದಕ್ಕೂ ಮೊದಲೇ ...
ಮಿನುಗುವ ಬೇಲ್ಸ್
ಮಿನುಗುವ ಬೇಲ್ಸ್
Updated on

ಕ್ರಿಕೆಟ್ ರಂಗದಲ್ಲಿ ಹೊಸ ಶಕೆ ಶುರುವಾಗಿದ್ದು 1992ರ ವಿಶ್ವಕಪ್ ಎಂದಾದರೂ, ನಿಜವಾಗಿ ಹೇಳಬೇಕೆಂದರೆ, ಅದಕ್ಕೂ ಮೊದಲೇ ದಕ್ಷಿಣ ಆಫ್ರಿಕಾ , ನ್ಯೂಜಿಲೆಂಡ್,ಆಸ್ಟ್ರೇಲಿಯಾ  ಕ್ರಿಕೆಟ್ ಮಂಡಳಿಗಳಲ್ಲಿದ್ದ ಕೆಲ ಪಂಡಿತರು, ತಜ್ಞರು ಅದರಲ್ಲೂ ವಿಶೇಷವಾಗಿ ದಿನೇದಿನೆ ಬೆಳೆಯುತ್ತಿದ್ದ ತಂತ್ರಜ್ಞಾನ , ವೈಜ್ಞಾನಿಕ ವಿಚಾರಗಳ ಬಗ್ಗೆ ನಿಖರ ಜ್ಞಾನವುಳ್ಳವರು ಕ್ರಿಕೆಟ್ ಕ್ರೀಡೆಯ ಕೆಲ ಪರಿಮಿತಿಗಳನ್ನು, ಲೋಪ ದೋಷಗಳನ್ನು ಸರಿಪಡಿಸಲು ಚಿಂತನೆ ನಡೆಸಿದ್ದರು. ಅದಲ್ಲದೆ, 90ರ ದಶಕದಲ್ಲಿ ಅದಾಗಲೇ ಅಗಾಧವಾಗಿ ಬೆಳೆಯುತ್ತಿದ್ದ ಈ ಕ್ರೀಡೆಯ ಜನಪ್ರಿಯತೆ, ಕ್ರಿಕೆಟನ್ನು ದೋಷ, ಲೋಪ ಮುಕ್ತವಾಗಿ ಮಾಡುವ ಅನಿವಾರ್ಯತೆಯನ್ನು ಸೃಷ್ಟಿಸಿದ್ದವು.ಹಾಗಾಗಿಯೇ , ರನೌಟ್, ನೋ ಬಾಲ್  ಸ್ಟಂಪ್ ಔಟ್, ಬೌಂಡರಿ ಕ್ಯಾಚ್ ಮುಂತಾದ ಸೂಕ್ಷ್ಮ  ಸನ್ನಿವೇಶಗಳಲ್ಲಿ ಖಚಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಮೈದಾನದಲ್ಲಿದ್ದ ಅಂಪೈರ್‍ಗಳಿಗೆ ಉಂಟಾಗುತ್ತಿದ್ದ ಗೊಂದಲಗಳನ್ನು ಸರಿಪಡಿಸಲು ಮೂರನೇ ಅಂಪೈರ್ ವ್ಯವಸ್ಥೆಯನ್ನು ಕ್ರಿಕೆಟ್‍ಗೆ ಅಳವಡಿಸಲಾ ಯಿತು. ಇನ್ನು, ಕ್ರೀಡಾಂಗಣ ಗಳಲ್ಲಿನ ಪ್ರೇಕ್ಷಕರಿಗೆ ಸ್ಕೋರು ಮುಂತಾದ ವಿಚಾರಗಳನ್ನು ಪ್ರಚುರಪಡಿಸುವುದ ಕ್ಕೋಸ್ಕರ ದೊಡ್ಡ ದೊಡ್ಡ ಎಲೆಕ್ಟ್ರಾನಿಕ್ ಡಿಸ್ ಪ್ಲೇ ಬೋರ್ಡ್‍ಗಳನ್ನು ಹಾಕಲಾಯಿತು. ಅದುವರೆಗೆ ದೊಡ್ಡ ಸ್ಕೋರ್ ಬೋರ್ಡ್ ಗಳು ಮ್ಯಾನುಲ್ ಆಗಿದ್ದವು. ಆ ಬೋರ್ಡ್ ಒಂದು ಗೂಡಿನಂತಿರುತ್ತಿತ್ತು. ಅದಕ್ಕಿಬ್ಬರು ವ್ಯಕ್ತಿಗಳನ್ನು ನೇಮಿಸಬೇಕಿರುತ್ತಿತ್ತು. ಅವರು, ಪಂದ್ಯ ಸ್ಕೋರ್‍ಗಳಿಗೆ ತಕ್ಕಂತೆ ಬೋರ್ಡ್ ಗಳಲ್ಲಿ ದೊಡ್ಡದೊಡ್ಡ ಅಂಕಿಗಳ ಫಲಕಗಳನ್ನು ಬದಲಾಯಿಸುತ್ತಾ ಜನರಿಗೆ ಪಂದ್ಯದ ಸ್ಕೋರ್‍ನ ಅರಿವು ಮೂಡಿಸುತ್ತಿದ್ದರು. ಎಲೆಕ್ಟ್ರಾನಿಕ್ ಡಿಸ್ ಪ್ಲೇ ವ್ಯವಸ್ಥೆ ಬಳಕೆಗೆ ಬಂದ ಮೇಲೆ ಸಾಂಪ್ರದಾಯಿಕವಾಗಿದ್ದ ಕಬ್ಬಿಣದಿಂದ ಮಾಡಲ್ಪಟ್ಟಿದ್ದ ಆ ದೊಡ್ಡ ಸ್ಕೋರ್ ಬೋರ್ಡ್ ಗೂಡುಗಳು ಮಾಯವಾದವು. ಈಗ ಬಹುತೇಕ ಎಲ್ಲಾ  ಕ್ರೀಡಾಂಗಣಗಳಲ್ಲೂ ಅಂಥದ್ದೇ ವ್ಯವಸ್ಥೆಗಳು ಜಾರಿಯಾಗಿವೆ. ಇನ್ನು ಎಲ್‍ಬಿಡಬ್ಲೂ ತೀರ್ಪು ಪರಿಶೀಲಿಸಲು ಹಾಕೈ, ಚೆಂಡು ಬ್ಯಾಟ್‍ಗೆ ತಾಗಿದಿಯೇ  ಎಂಬುದನ್ನು ಪರಿಶೀಲಿಸಲು ಹಾಟ್‍ಸ್ಪಾಟ್‍ನಂತಹ ತಂತ್ರಜ್ಞಾ ನಗಳನ್ನು ಕ್ರೀಡೆಯಲ್ಲಿ ಅಳವಡಿಸಲಾಯಿತು. ಈ ಎಲ್ಲಾ ತಂತ್ರಜ್ಞಾನವನ್ನು ಬಳಸಿಕೊಂಡು ಕ್ರೀಡೆಯಲ್ಲಿ ಅಂಪೈರ್ ಡಿಸಿಷನ್ ರಿವ್ಯೂ ಸಿಸ್ಟಮ್  (ಯುಡಿಆರ್‍ಎಸ್) ಅನ್ನು ಅಳವಡಿಸಲು ಪ್ರಮುಖ ಕ್ರಿಕೆಟ್ ಮಂಡಳಿಗಳು ಒಪ್ಪಿಕೊಂಡಿದ್ದರೂ, ಬಿಸಿಸಿಐ ಈ ನಿರ್ಧಾರವನ್ನು ಒಪ್ಪಲು ಸಿದ್ಧ ವಾಗುತ್ತಿಲ್ಲ. ಇನ್ನು ಈ ಬಾರಿಯ ವಿಶ್ವಕಪ್ ಆಸ್ಟ್ರೇಲಿಯಾ  ಹಾಗೂ ನ್ಯೂಜಿಲೆಂಡ್‍ನಲ್ಲಿ ನಡೆಯುತ್ತಿದ್ದು, ಈ ತಂತ್ರಜ್ಞಾ ನವನ್ನು ಅಳವಡಿಸಲು ಐಸಿಸಿ ನಿರ್ಧರಿಸಿದೆ. ಇನ್ನು ರನೌಟ್ ವೇಳೆ ವಿಕೆಟ್‍ಗಳ ಮೇಲಿನ ಬೇಲ್ಸಗಳು ಹಾರಿರುವ ನಿಖರತೆಯನ್ನು ಅಳೆಯಲು ಎಲ್‍ಇಡಿ ದೀಪಗಳ ಸ್ಟಂಪ್ ಗಳನ್ನು ಬಳಸಲಾಗುತ್ತಿದೆ. ಬೇಲ್ಸ್ ವಿಕೆಟ್ ನಿಂದ ಬೇರ್ಪಡುತ್ತಿದ್ದಂತೆ ಆ ದೀಪಗಳು ಮಿನುಗುತ್ತವೆ. ಈ ಬಾರಿಯ ವಿಶ್ವಕಪ್‍ನಲ್ಲಿ ಅತ್ಯಧುನಿಕ ಸ್ಟಂಪ್‍ಗಳನ್ನು ಬಳಸಲಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com