ನೇರಪ್ರಸಾರ ಕೈಂಕರ್ಯಕ್ಕೆ ವೈಜ್ಞಾನಿಕ ಲೋಕದ ಕಾಣಿಕೆ
ಕ್ರಿಕೆಟ್ ವಿಶ್ವಕಪ್‍ಗಳ ಯಶಸ್ಸು, ಅವು ಭಾರತದಂತಹ ಅಭಿವೃದ್ಧಿಶೀಲ, ಏಷ್ಯನ್ ರಾಷ್ಟ್ರಗಳ ಮೇಲೆ ಬೀರಿದ ಛಾಯೆಗಳು - ಆ ಕ್ರೀಡೆಯನ್ನು ವಾಣಿಜ್ಯಮಯವನ್ನಾಗಿಸಿದ್ದು ತಿಳಿದಿದೆ. ಈ ಪರಿ ಜನಪ್ರಿಯತೆಗಳಿಸಲು ಆ ಕ್ರೀಡೆಯು ವೈಜ್ಞಾನಿಕ ಲೋಕದ ಕಡೆಗೆ ತನ್ನನ್ನು ತಾನು ತೆರೆದುಕೊಂಡಿದ್ದೂ ಕಾರಣ ಎಂಬುದೂ ಗೊತ್ತಿದೆ. ಆದರೆ, ಇದೇ ಕ್ರಿಕೆಟ್, ವೈಜ್ಞಾ ನಿಕ ಲೋಕಕ್ಕೂ ಕೆಲ ಕೆಲಸಗಳನ್ನು ಕೊಟ್ಟಿದೆ. ಅದೂ ಸಾಫ್ಟ್ ವೇರ್ ಲೋಕಕ್ಕೆ. ಹಾಗಾಗಿ, ಸಾಫ್ಟ್ ವೇರ್ ತಂತ್ರಜ್ಞಾ ನವು ಕ್ರಿಕೆಟ್ ನೇರಪ್ರಸಾರ ಕೈಂಕರ್ಯಕ್ಕೆ ತನ್ನದೇ ಆದ ಕಾಣಿಕೆಗಳನ್ನು ನೀಡಿದೆ. ಹಲವಾರು ಗ್ರಾಫಿಕ್ ತಂತ್ರಜ್ಞಾ ನಗಳು, ಸುದ್ದಿ ವಿಶ್ಲೇಷಣೆಗೆ ಬೇಕಾದ ಅಂಕಿ-ಅಂಶ ಕಲೆಹಾಕುವ, ಸ್ಕೋರ್ ಬೋಡ್ರ್ ಗೆ (ಟಿವಿ ಪರದೆ ಮೇಲಿನ) ಮಾಹಿತಿ ನೀಡುವ ಮುಂತಾದ ಅನೇಕ ಸಾಫ್ಟ್ ವೇರ್ ಗಳು ಈಗ ಚಾಲ್ತಿಯಲ್ಲಿವೆ. ಈ ಸಾಫ್ಟ್ ವೇರ್ ಗಳನ್ನು ಬಳಸಿ ಅನೇಕ ತಂತ್ರಜ್ಞಾನ ಸೃಷ್ಟಿಸಲಾಗಿದೆ. ಇವಿಲ್ಲದಿದ್ದಲೆ ಇಂದು ಕ್ರಿಕೆಟ್ ನೇರಪ್ರಸಾರವನ್ನು ಊಹಿಸಲೂ ಸಾಧ್ಯವಿಲ್ಲ. ಹಾಗಾಗಿ, ಈ ತಂತ್ರಜ್ಞಾನಗಳೇ ಕ್ರಿಕೆಟ್ ಪಂದ್ಯಗಳ ನೇರಪ್ರಸಾರದ ಬೆನ್ನೆಲುಬು ಎಂದರೆ ತಪ್ಪಾಗಲಾರದು. ಈ ಎಲ್ಲಾ ಬೆಳವಣಿಗೆಗೂ ಸಾಕ್ಷಿಯಾಗಿದ್ದು, 1992ರ ವಿಶ್ವಕಪ್ ಎಂದರೆ ಅದು ಅತಿಶಯೋಕ್ತಿ ಯಲ್ಲ.
ಸ್ನೈ ಕೋ ಮೀಟರ್
ಇದನ್ನು ಅಲಾನ್ ಪ್ಲಾಕೆಟ್ ಎಂಬ ತಂತ್ರಜ್ಞಾನ ಕಂಡುಹಿಡಿದ. ಇದು ಸ್ನೈಕೋ ಎಂದೇ ಇದು ಚಿರಪರಿಚಿತ. ಇದು ಬ್ಯಾಟನ್ನು ಚೆಂಡು ಸವರಿಕೊಂಡು ಹೋಗಿದ್ದನ್ನು ನಿಖರವಾಗಿ ಪತ್ತೆ ಹಚ್ಚುವ ತಂತ್ರಜ್ಞಾನ. ಸ್ಟಂಪ್‍ಗಳ ಹತ್ತಿರ ಇರಿಸಲಾಗುವ ಪುಟ್ಟ ಮೈಕ್ರೋಫೋನ್ ನಿಂದ ಚೆಂಡು ಬ್ಯಾಟನ್ನು ಸವರಿಕೊಂಡು ಹೋಗಿದ್ದನ್ನು ಪತ್ತೆಹಚ್ಚಲಾಗುತ್ತದೆ. ಇದು ಕೀಪರ್ ಹಿಡಿದ ಕ್ಯಾಚ್ ಗಳ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತದೆ. ಚೆಂಡು ವಿವಿಧ ಗಟ್ಟಿ ವಸ್ತುಗಳ ಮೇಲೆ ಬಿದ್ದಾಗ ಉಂಟು ಮಾಡುವ ವಿವಿಧ ಶಬ್ದಗಳ ತರಂಗಗಳನ್ನು ಆಧರಿಸಿ ಈ ತಂತ್ರಜ್ಞಾನ ತಯಾರಿಸಲಾಗಿದೆ. ಉದಾಹರಣೆಗೆ, ನೆಲದ ಮೇಲೆ ಚೆಂಡು ಬಿದ್ದಾಗ ಇದು ಒಂದು ರೀತಿಯ ಶಬ್ದ ತರಂಗಗಳನ್ನು ಉಂಟು ಮಾಡಿದರೆ, ಬ್ಯಾಟು ಅಥವಾ ಇನ್ಯಾವುದೇ ಮರದ ತುಂಡನ್ನು ಅಪ್ಪಳಿಸಿದಾಗ ಮತ್ತೊಂದು ರೀತಿಯ ತರಂಗ ಸಷ್ಟಿಸುತ್ತದೆ. ಇದೇ ಲಾಜಿಕ್‍ನ ಮೇಲೆ ಈ ತಂತ್ರಜ್ಞಾನ ಆವಿಷ್ಕರಿಸಲಾಗಿದೆ.
ಹಾಟ್ ಸ್ಪಾಟ್
ಇದೂ ಸಹ ಚೆಂಡಿನ ಗತಿಯನ್ನು ನಿರ್ಧರಿಸಬಲ್ಲ ತಂತ್ರಜ್ಞಾನ. ಇದರಲ್ಲಿ ಇನ್ ಫ್ರಾ ರೆಡ್ ಕ್ಯಾಮೆರಾಗಳನ್ನು ಬಳಲಾಗುತ್ತದೆ. ಹಾಗಾಗಿ, ಇದರ ಔಟ್ ಪುಟ್ ಎಕ್ಸ್ ರೇಚಿತ್ರಗಳ ಥರ ಇರುತ್ತದೆ. ಯಾವುದೇ ಭೌತ ವಸ್ತುಗಳು ಪರಸ್ಪರ ತಾಗಿದಾಗ, ಅಪ್ಪಳಿಸಿದ ಜಾಗದಲ್ಲಿ ಅಪ್ಪಳಿಸಿದ ವಸ್ತುವಿನಲ್ಲಿನ ಒಂದಷ್ಟು ಶಾಖ ವರ್ಗಾವಣೆಗೊಳ್ಳುತ್ತದೆ ಹಾಗೂ ಅದು ಕೆಲ ಕ್ಷಣಗಳ ಕಾಲ ಅಲ್ಲಿಯೇ ಇರುತ್ತದೆ. ಉದಾಹರಣೆಗೆ, ಪಿಚ್‍ನ ಮೇಲೆ ಬಿದ್ದು ಪುಟಿಯುವ ಚೆಂಡು ಬ್ಯಾಟ್ಸ್‍ಮನ್ ಪ್ಯಾಡ್ ಅನ್ನು ಅಪ್ಪಳಿಸಿದಾಗ ಚೆಂಡಿನಲ್ಲಿದ್ದ ಒಂದಂಶದಷ್ಟು ಶಾಖ ಪ್ಯಾಡ್‍ಗೆ ಬಡಿದ ಜಾಗಕ್ಕೆ ವರ್ಗಾವಣೆಯಾಗುತ್ತದೆ. ಅಲ್ಲಿ ಹಾಟ್ ಸ್ಪಾಟ್ ಉಂಟಾಗುತ್ತದೆ. ಇದನ್ನು ಇನ್ ಫ್ರಾ ರೆಡ್ ಕ್ಯಾಮೆರಾಗಳಿಂದ ದಾಖಲಿಸಬಹುದು. ಆದರೆ, ಇದೊಂದು ದುಬಾರಿ ತಂತ್ರಜ್ಞಾನ.
ಸ್ಪೀಡ್ ಗನ್
ಇದೊಂದು ಪುಟ್ಟ ಡಾಪ್ಲರ್ ರಾಡಾರ್ ಯೂನಿಟ್. ಹೆಚ್ಚು ವೇಗವಾಗಿ ಸಾಗುವ ಭೌತ ವಸ್ತುಗಳ ಕರಾರುವಾಕ್ ವೇಗವನ್ನು ಪತ್ತೆಹಚ್ಚುವ ತಂತ್ರಜ್ಞಾನವಿದು. ಇದು ಬೌಲರ್‍ಗಳು ಎಸೆದ ಚೆಂಡಿನ ವೇಗವನ್ನು ಲೆಕ್ಕ ಹಾಕಲು ಸಹಾಯಕಾರಿ. ನೇರ ಪ್ರಸಾರದ ವೇಳೆ ಚೆಂಡಿನ ವೇಗವನ್ನು ಟಿವಿ ಪರದೆ ಮೇಲೆ ತೋರಿಸುವುದು ಒಂದು ಜನಪ್ರಿಯ ಟ್ರೆಂಡ್.
ಹಾಕ್ ಐ
ಬೌಲರ್‍ನ ಕೈಯಿಂದ ಹೊರಬಿದ್ದ ಚೆಂಡು ಕ್ರೀಸ್‍ನ ಮೇಲೆ ಪಿಚ್ ಬಿದ್ದ ನಂತರ ಅದು ಯಾವ ಕಡೆಗೆ ಸಾಗುತ್ತದೆ ಎಂಬುದನ್ನು ನಿಖರವಾಗಿ ಅಳೆಯುವ ತಂತ್ರಜ್ಞಾನವಿದು. ಇದು, ಎಲ್ ಬಿಡಬ್ಲ್ಯೂ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲು ಸಹಾಯಕ. ಮೈದಾನದ ಸುತ್ತಲೂ ಇಡಲಾಗುವ ಮೈಕ್ರೋ ಕ್ಯಾಮೆರಾಗಳು ನೀಡುವ ಸ್ಲೋ ಮೋಷನ್ ವಿಡಿಯೋ ಗಳ ಮಾಹಿತಿಯ ಸಹಾಯದಿಂದ ಪಿಚ್ ಮೇಲೆ ಬಿದ್ದ ಚೆಂಡಿನ ಗತಿಯನ್ನು ನಿರ್ಧರಿಸಲಾಗುತ್ತದೆ. ಅಲ್ಲದೆ, ಇದು 2011ರ ವಿಶ್ವಕಪ್‍ನಲ್ಲಿ ಅಳವಡಿಸಲಾಗಿದ್ದ ಡಿಸಿಷನ್ ರಿವ್ಯೂವ್ ಸಿಸ್ಟಂ (ಡಿಆರ್‍ಎಸ್) ಗಳಿಗೂ ಸಹಾಯಕ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ