ರಾಜ್ಯದ ತ್ವಿಶಾಗೆ ಕಯಕಿಂಗ್ ಚಿನ್ನ

ಕರ್ನಾಟಕದ ಕೆನಾಯ್ ಕಯಕಿಂಗ್ ಕ್ರೀಡಾಪಟು ತ್ವಿಶಾ.ಕೆ ಗಮನಾರ್ಹ ಪ್ರದರ್ಶನ ನೀಡಿದ್ದು...
ತ್ವಿಶಾ. ಕೆ
ತ್ವಿಶಾ. ಕೆ

ತಿರುವನಂತಪುರ: ಕರ್ನಾಟಕದ ಕೆನಾಯ್ ಕಯಕಿಂಗ್ ಕ್ರೀಡಾಪಟು ತ್ವಿಶಾ.ಕೆ ಗಮನಾರ್ಹ ಪ್ರದರ್ಶನ ನೀಡಿದ್ದು, 35ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಬಾಚಿಕೊಂಡಿದ್ದಾರೆ. ಇದರ ಜತೆಗೆ ಇದೇ ಕ್ರೀಡೆಯಲ್ಲಿ ಎರಡು ಕಂಚಿನ ಪದಕ ಲಭಿಸಿದೆ.

ಸೋಮವಾರದ ದಿನದಾಟದಲ್ಲಿ ತ್ವಿಶಾ ಕೆ, 1000ಮೀ. ಮಹಿಳೆಯರ ಸಿಂಗಲ್ಸ್ ಕಯಕಿಂಗ್‍ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. 04:35.00ನಿಮಿಷದಲ್ಲಿ ಗುರಿ ಮುಟ್ಟಿದ ತ್ವಿಶಾ ಅಗ್ರಸ್ಥಾನಿಯಾದರು.

ಇನ್ನು 1000 ಮೀ. ಪುರುಷರ ಡಬಲ್ ಕಯಕಿಂಗ್‍ನಲ್ಲಿ ಪವನ್ ಕುಮಾರ್ ಎಸ್. ವಾಗ್ಮೋರ್ ಹಾಗೂ ರಘು ಮಧು 03:43.00 ನಿಮಿಷದಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಪಡೆದರು. ಹಾಗಾಗಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.

ಪುರುಷರ 1000 ಮೀ. ಫೋರ್ ಕಯಕಿಂಗ್ ನಲ್ಲಿ ಭಾರತಿ ಪನೀರ್‍ಸೆಲ್ವಂ, ರಾಜಮಣಿ ಕನಕರಾಜ್, ಸುಗಂಧನ್ ಗೋವಿಂದರಾಜ್, ವೆಂಕಟೇಶ್ (03:22.00 ನಿಮಿಷ) ಮೂರನೇ ಸ್ಥಾನ ಪಡೆದು ಕಂಚಿಗೆ ಕೊರಳೊಡ್ಡಿದರು.

ಸೋಮವಾರ ಅಥ್ಲೆಟಿಕ್ಸ್ ಸ್ಪರ್ಧೆಗಳು ಆರಂಭವಾಗಿದ್ದು, ಕರ್ನಾಟಕದ ಅಭಿಷೇಕ್ ಎನ್ ಶೆಟ್ಟಿ ಉತ್ತಮ ಪ್ರದರ್ಶನ ತೋರಿದ್ದಾರೆ. ಪುರುಷರ ಡೆಕಥ್ಲಾನ್ ವಿಭಾಗದ 100 ಮೀ. ಓಟ (771), ಲಾಂಗ್‍ಜಂಪ್ (750), ಶಾಟ್‍ಪಟ್ (642)ನಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಗಮನ ಸೆಳೆದರು. ಈ ಮೂಲಕ ರಾಜ್ಯಕ್ಕೆ 4ಚಿನ್ನ, 14 ಬೆಳ್ಳಿ, 16 ಕಂಚು ಸೇರಿದಂತೆ ಒಟ್ಟು 34 ಪದಕಗಳು ಬಂದಿವೆ. ಪದಕ ಪಟ್ಟಿಯಲ್ಲಿ ಕರ್ನಾಟಕ 15ನೇ ಸ್ಥಾನದಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com