ದೂರದರ್ಶನದಲ್ಲಿ ಭಾರತ-ಪಾಕ್ ಪಂದ್ಯ ಪ್ರಸಾರಕ್ಕೆ ಸುಪ್ರೀಂ ಸೂಚನೆ

ದೂರದರ್ಶನ
ದೂರದರ್ಶನ

ನವದೆಹಲಿ: ದೇಶದ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ಆಸೆ ಕೊನೆಗೂ ಈಡೇರಿದೆ.
ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ವಿಶ್ವಕಪ್‍ನ
ರೋಚಕ ಪಂದ್ಯವನ್ನು ಆನಂದಿಸುವ ಅವಕಾಶ ಲಭಿಸಿದೆ.

ದೇಶದ ಸಾರ್ವಜನಿಕ ಪ್ರಸಾರ ವಾಹಿನಿ ದೂರದರ್ಶನದಲ್ಲಿ ವಿಶ್ವಕಪ್ ಟೂರ್ನಿಯ ಈ ಮಹತ್ವದ ಪಂದ್ಯದ ನೇರಪ್ರಸಾರ ಮಾಡಲು ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

ದೂರದರ್ಶನದಲ್ಲಿ ವಿಶ್ವಕಪ್ ಪಂದ್ಯಗಳ ನೇರ ಪ್ರಸಾರವನ್ನು ಕೇಬಲ್ ಅಪರೇಟರ್
ಗಳೊಂದಿಗೆ ಹಂಚಿಕೊಳ್ಳುವುದಕ್ಕೆ ದೆಹಲಿ ಹೈಕೋರ್ಟ್ ನಿಷೇಧ ಹೇರಿತ್ತು. ಈ ತೀರ್ಪಿನ
ವಿರುದ್ಧ ಪ್ರಸಾರ ಭಾರತಿ ಹಾಗೂ ಕೇಂದ್ರ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಮಂಗಳವಾರ
ಮಧ್ಯಾಹ್ನ ಈ ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ದೆಹಲಿ ಹೈಕೋರ್ಟ್
ತೀರ್ಪಿಗೆ ತಡೆ ನೀಡಿ ಭಾರತ-ಪಾಕಿಸ್ತಾನ ಪಂದ್ಯ ನೇರ ಪ್ರಸಾರ ಮಾಡಲು ಸೂಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com