
ನೆಲ್ಸನ್: ವಿಶ್ವಕಪ್ ಪಂದ್ಯಾವಳಿಯಲ್ಲಿ ಅಚ್ಚರಿ ಫಲಿತಾಂಶವೊಂದು ಹೊರಬಿದ್ದಿದ್ದು, ದೈತ್ಯ ಕೆರಿಬಿಯನ್ನರ ವಿರುದ್ಧ ಕ್ರಿಕೆಟ್ ಶಿಶು ಐರ್ಲೆಂಡ್ ಅಮೋಘ ಜಯ ಸಾಧಿಸಿದೆ.
ನ್ಯೂಜಿಲೆಂಡ್ ನ ಸೆಕ್ಟೋನ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಐರ್ಲೆಂಡ್ ವೆಸ್ಟ್ ಇಂಡೀಸ್ ವಿರುದ್ಧ 4 ವಿಕೆಟ್ ಗಳ ಜಯ ಗಳಿಸಿದೆ.
ವೆಸ್ಟ್ ಇಂಡೀಸ್ ನಿಗದಿತ ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 304 ರನ್ಗಳನ್ನು ಪೇರಿಸಿತು. 305 ರನ್ ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಐರ್ಲೆಂಡ್ 45 ಓವರ್ ನಲ್ಲೇ 6 ವಿಕೆಟ್ ನಷ್ಟಕ್ಕೆ 307 ರನ್ ಗಳಿಸಿ ವಿಜಯದ ಪತಾಕೆ ಹಾರಿಸಿದೆ.
ಐರ್ಲೆಂಡ್ನ ಆಟಗಾರರಾದ ಸ್ಟಿರ್ಲಿಂಗ್ 92, ಜಾಯ್ಸ್ 84 ಮತ್ತು ಓಬ್ರಿಯಾನ್ 79 ರನ್ ಗಳ ನೇರವಿನೊಂದಿಗೆ ಐರ್ಲೆಂಡ್ ಜಯಗಳಿಸಲು ಸಾಧ್ಯವಾಯಿತು.
ವೆಸ್ಟ್ ಇಂಡೀಸ್ ಪರ ಟೇಲರ್ 3 ವಿಕೆಟ್, ಕ್ರಿಸ್ ಗೇಲ್ ಹಾಗೂ ಸ್ಯಾಮುಯೆಲ್ಸ್ ತಲಾ 1 ವಿಕೆಟ್ ಪಡೆದಿದ್ದಾರೆ.
ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್‌ಗೆ ಉತ್ತಮ ಆರಂಭಿಕ ಸಿಗಲಿಲ್ಲ. ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಮಂದಗತಿಯಲ್ಲಿ ಬ್ಯಾಟ್ ಬೀಸಿದರು. ವೆಸ್ಟ್ ಇಂಡೀಸ್ ಪರ ಸ್ಮಿತ್ 18, ಗೇಲ್ 36, ಬ್ರಾವೊ 0, ಸ್ಯಾಮುಯೆಲ್ಸ್ 21, ರಾಮ್ದೀನ್ 1, ರಸೇಲ್ 27 ಗಳಿಸಿ ಔಟಾಗಿದ್ದಾರೆ.
ಸಿಮ್ಮನ್ಸ್ ಅಬ್ಬರದ 102 ರನ್ ಹಾಗೂ ಸಮಿ 89 ರನ್ ಗಳಿಸಿ ವೆಸ್ಟ್ ಇಂಡೀಸ್ 300ರ ಗಡಿ ದಾಟಲು ಸಾಧ್ಯವಾಯಿತು.
ಐರ್ಲೆಂಡ್ ಪರ ಡೋಕ್ರೆಲ್ 3 ವಿಕೆಟ್, ಮೂನಿ, ಸೊರೆನ್ಸೆನ್, ಒಬ್ರಿಯಾನ್ ತಲಾ 1 ವಿಕೆಟ್ ಪಡೆದರು.
Advertisement