
ನವದೆಹಲಿ: ಹಾಲಿ ಚಾಂಪಿಯನ್ ಸೋಮದೇವ್ ದೇವವರ್ಮನ್ ಹಾಗೂ ಯೂಕಿ ಭಾಂಬ್ರಿ ಅವರು ದೆಹಲಿ ಓಪನ್ ಟೆನಿಸ್ ಪಂದ್ಯಾವಳಿಯ ದ್ವಿತೀಯ ಸುತ್ತನ್ನು ಪ್ರವೇಶಿಸಿದ್ದಾರೆ.
ಯೂಕಿ ಅವರು ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ರಷ್ಯಾದ ಆಟಗಾರ ಅಲೆಕ್ಸಾಂಡರ್ ಕುದ್ರಾಯತ್ಸೆವ್ ವಿರುದ್ಧ 7-5, 7-6(2) ನೇರ ಸೆಟ್‍ಗಳ ಅಂತರದಲ್ಲಿ ಜಯ ಸಾಧಿಸಿದರು.
ಇನ್ನು, ಸೋಮ್ ದೇವ್ ಅವರ ದ್ವಿತೀಯ ಸುತ್ತಿನ ಪ್ರವೇಶ ಅನಾಯಾಸವಾಗಿತ್ತು. ಮೊದಲ
ಸುತ್ತಿನ ಪಂದ್ಯದಲ್ಲಿ ಸೋಮದೇವ್ ಎದುರು ಆಡಬೇಕಿದ್ದ ಕ್ರೊವೇಶಿಯಾದ ಆ್ಯಂಟಾನಿಯೊ ವೆಯಿಕ್ ಅವರು ಪಂದ್ಯದಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಸೋಮದೇವ್ ಅವರು ಸುಲಭವಾಗಿ ದ್ವಿತೀಯ ಸುತ್ತು ಪ್ರವೇಶಿಸಿದರು.
ಟೂರ್ನಿಯಲ್ಲಿ ವೈಲ್ಡ್ ಕಾರ್ಡ್ ಪ್ರವೇಶ ಪಡೆದಿರುವ ಭಾರತದ ಆಟಗಾರರಾದ ಸನಮ್ ಸಿಂಗ್, ರಾಮ್ ಕುಮಾರ್ ರಾಮನಾಥನ್ ಅವರು 2ನೇ ಸುತ್ತು ಪ್ರವೇಶಿಸಿದ್ದಾರೆ. ಸನಮ್ ಸಿಂಗ್ ಅವರು ಫ್ರಾನ್ಸನ್ ಫ್ಯಾಬ್ರಿಸ್ ಮಾರ್ಟಿನ್ ಅವರನ್ನು 6-1, 4-6, 6-2 ಸೆಟ್‍ಗಳ ಅಂತರದಲ್ಲಿ ಸೋಲಿಸಿದರೆ, ರಾಮ್ ಕುಮಾರ್ ರಾಮನಾಥನ್ ಅವರು, ಜರ್ಮನಿಯ ರಿಚರ್ಡ್ ಬೆಕರ್ ವಿರುದ್ಧ 4-6, 7-6(3), 6-4 ಸೆಟ್‍ಗಳ ಅಂತರದಲ್ಲಿ ಜಯ ಸಾಧಿಸಿ ಮುನ್ನಡೆ ಪಡೆದರು.
Advertisement