ಫೀಲ್ಡಿಂಗ್ ಕೋಚ್ ಜತೆ ಪಾಕ್ ಆಟಗಾರರ ಕಿರಿಕ್

ವಿಶ್ವಕಪ್ ಪಂದ್ಯದಲ್ಲಿ ಭಾಗವಹಿಸುತ್ತಿರುವ ಪಾಕಿಸ್ತಾನದ ಕ್ರಿಕೆಟ್ ತಂಡದ ಸದಸ್ಯರು ತರಬೇತಿ ವೇಳೆ ಫೀಲ್ಡಿಂಗ್ ಕೋಚ್ ಗ್ರ್ಯಾಂಟ್ ಲುಡೆನ್...
ಶಾಹಿದ್ ಅಫ್ರೀದಿ, ಅಹ್ಮದ್ ಶೆಹಜಾದ್ ಮತ್ತು ಉಮರ್ ಅಕ್ಮಲ್
ಶಾಹಿದ್ ಅಫ್ರೀದಿ, ಅಹ್ಮದ್ ಶೆಹಜಾದ್ ಮತ್ತು ಉಮರ್ ಅಕ್ಮಲ್

ಕರಾಚಿ: ವಿಶ್ವಕಪ್ ಪಂದ್ಯದಲ್ಲಿ ಭಾಗವಹಿಸುತ್ತಿರುವ ಪಾಕಿಸ್ತಾನದ ಕ್ರಿಕೆಟ್ ತಂಡದ ಸದಸ್ಯರು ತರಬೇತಿ ವೇಳೆ ಫೀಲ್ಡಿಂಗ್ ಕೋಚ್ ಗ್ರ್ಯಾಂಟ್ ಲುಡೆನ್ ಜತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಲುಡನ್ ದೂರಿದ್ದಾರೆ.

ಪಾಕ್ ತಂಡದ ಫೀಲ್ಡಿಂಗ್ ಕೋಚ್ ಆಗಿರುವ ಲುಡೆನ್ ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ದೂರು ನೀಡಿದ್ದಾರೆ. ಪಾಕ್ ಕ್ರಿಕೆಟ್ ತಂಡದ ಹಿರಿಯ ಆಟಗಾರರಾದ ಶಾಹಿದ್ ಅಫ್ರೀದಿ, ಅಹ್ಮದ್ ಶೆಹಜಾದ್ ಮತ್ತು ಉಮರ್ ಅಕ್ಮಲ್  ಮಂಗಳವಾರ ತರಬೇತಿ ನಡೆಯುತ್ತಿದ್ದಾಗ ನನ್ನ ಜತೆ ಅನುಚಿತ ವರ್ತನೆ ತೋರಿದ್ದಾರೆ. ಇಂತಹಾ ವರ್ತನೆಗಳನ್ನು ಸಹಿಸಿಕೊಳ್ಳಲು ನನ್ನಿಂದಾಗದು, ನಾನು ರಾಜಿನಾಮೆ ನೀಡುತ್ತೇನೆ ಎಂದು ಲುಡೆನ್ ಪಿಸಿಬಿ ಅಧ್ಯಕ್ಷರಿಗೆ ಸಂದೇಶ ಕಳಿಸಿದ್ದಾರೆ.

ತರಬೇತಿ ವೇಳೆ ಈ ಮೂವರು ಆಟಗಾರರು ನನ್ನೊಂದಿಗೆ ಸಹಕರಿಸುತ್ತಿಲ್ಲ ಎಂಬುದಾಗಿಯೂ ಲುಡೆನ್ ಪಿಸಿಬಿ ಅಧ್ಯಕ್ಷ ಶೆಹ್‌ರ್ಯಾರ್ ಖಾನ್ ಕಳಿಸಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಮೂವರು ಆಟಗಾರರು ನನ್ನನ್ನು ಅಸಭ್ಯವಾಗಿ ಬೈದಿದ್ದಾರೆ. ಇವರು ತಮ್ಮ ವರ್ತನೆಯನ್ನು ಬದಲಿಸದೇ ಇದ್ದರೆ ನಾನು ರಾಜಿನಾಮೆ ನೀಡಿ ಹೊರ ನಡೆಯಬೇಕಾಗುತ್ತದೆ ಎಂದು ಲುಡೆನ್ ರಾಜಿನಾಮೆ ಬೆದರಿಕೆಯನ್ನೊಡ್ಡಿದ್ದಾರೆ.

ಆದಾಗ್ಯೂ, ಇನ್ಮುದೆ ಆಟಗಾರರಿಂದ ಯಾವುದೇ ಅಹಿತಕರ ವರ್ತನೆ ಆಗಲು ಬಿಡುವುದಿಲ್ಲ ಎಂದು ಪಿಸಿಬಿ ಲುಡೆನ್‌ಗೆ ಭರವಸೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com