ವಿಶ್ವಕಪ್‌ನಲ್ಲಿ ದ್ವಿಶತಕ ದಾಖಲೆ ಬರೆದ ಕ್ರಿಸ್ ಗೇಲ್

ವೆಸ್ಟ್ ಇಂಡೀಸ್ ನ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಮೊದಲ ಬಾರಿಗೆ ದ್ವಿಶತಕ ಬಾರಿಸಿದ್ದಾರೆ.
ಕ್ರಿಸ್ ಗೇಲ್
ಕ್ರಿಸ್ ಗೇಲ್

ಕ್ಯಾನ್‌ಜೆರಾ: ವೆಸ್ಟ್ ಇಂಡೀಸ್ ನ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಮೊದಲ ಬಾರಿಗೆ ದ್ವಿಶತಕ ಬಾರಿಸಿದ್ದಾರೆ.

ಕ್ಯಾನ್‌ಜೆರಾದಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಕ್ರಿಸ್ ಗೇಲ್ 138 ಎಸೆತಗಳಲ್ಲಿ 200 ರನ್ ಸಿಡಿಸಿ 200 ರನ್ ಕ್ಲಬ್ ಸೇರಿದ 4ನೇ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.

ವಿಶ್ವಕಪ್ ಇತಿಹಾಸದಲ್ಲೇ ಮೊದಲ ಬಾರಿಗೆ 200 ರನ್ ಸಿಡಿಸಿದ ಮೊದಲ ಆಟಗಾರ ಕ್ರಿಸ್ ಗೇಲ್ ಆಗಿದ್ದಾರೆ.

ಈ ಹಿಂದೆ 200 ರನ್ ಕ್ಲಬ್ ನಲ್ಲಿ ಮೂವರು ಭಾರತೀಯರೇ ಇದ್ದರು. ಇದೀಗ ಸಾಲಿಗೆ ಮೊದಲ ಬಾರಿಗೆ ಭಾರತೀಯೇತರ ಆಟಗಾರ ಕ್ರಿಸ್ ಗೇಲ್ 200 ಗಡಿ ದಾಟಿದ್ದು, ವೈಯಕ್ತಿಕ 215 ರನ್ ಸಿಡಿಸಿದ್ದಾರೆ.

ಮೊದಲು 200 ರನ್ ಗಡಿ ದಾಡಿದ್ದು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, 2010ರಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಗ್ವಾಲಿಯರ್ನಲ್ಲಿ ನಡೆದ ಪಂದ್ಯದಲ್ಲಿ ಸಚಿನ್ 200 ರನ್ ಗಳಿಸಿ ದಾಖಲೆ ಬರೆದಿದ್ದರು. 2011ರವರೆಗೂ ಈ ದಾಖಲೆ ಸಚಿನ್ ಹೆಸರಿನಲ್ಲಿತ್ತು. ಭಾರತದ ಸ್ಫೋಟಕ ಬ್ಯಾಟ್ಸ್ ಮನ್ ವಿರೇಂದ್ರ ಸೆಹವಾಗ್ 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 219 ರನ್ ಗಳಿಸಿ ಸಚಿನ್ ದಾಖಲೆ ಅಳಿಸಿ ಹಾಕಿದ್ದರು. ಬಳಿಕ ಭಾರತದವರೆ ಆದ ರೋಹಿತ್ ಶರ್ಮಾ 2014ರಲ್ಲಿ ಇಂದೋರ್ ನಲ್ಲಿ ಶ್ರೀಲಂಕಾ ವಿರುದ್ಧ 264 ರನ್ ಗಳನ್ನು ಸಿಡಿಸಿರುವುದು ಏಕದಿನ ಪಂದ್ಯದ ಗರಿಷ್ಠ ಮೊತ್ತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com