ಸಿಡ್ನಿ ಟೆಸ್ಟ್‌ಗೆ ವೇಗಿ ಮಿಚೆಲ್ ಜಾನ್ಸನ್ ಅನುಮಾನ

ಭಾರತ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ...
ಆಸ್ಟ್ರೇಲಿಯಾದ ವೇಗಿ ಮಿಚೆಲ್ ಜಾನ್ಸನ್
ಆಸ್ಟ್ರೇಲಿಯಾದ ವೇಗಿ ಮಿಚೆಲ್ ಜಾನ್ಸನ್

ಸಿಡ್ನಿ: ಆಸ್ಟ್ರೇಲಿಯಾದ ವೇಗಿ ಮಿಚೆಲ್ ಜಾನ್ಸನ್ ಭಾರತ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಹೆಚ್ಚಾಗಿದೆ.

ತೊಡೆ ಸ್ನಾಯು ಸೆಳೆತಕ್ಕೆ ಸಿಲುಕಿರುವ ಜಾನ್ಸನ್, ಮಂಗಳವಾರದಿಂದ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಲಿರುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ.

ಶನಿವಾರ ನಡೆದ ಆಸ್ಟ್ರೇಲಿಯಾ ತಂಡದ ಅಭ್ಯಾಸ ಅವಧಿಯಲ್ಲಿ ಕಾಣಿಸಿಕೊಳ್ಳದ ಜಾನ್ಸನ್ ಸುದೀರ್ಘವಾಗಿ ಆಡುತ್ತಾ ಬಂದಿದ್ದಾರೆ. ಅಲ್ಲದೆ ಆಸೀಸ್ ತಂಡದ ಪರ ಅತಿ ಹೆಚ್ಚು ಬೌಲಿಂಗ್ ಮಾಡಿದ ಬೌಲರ್ ಆಗಿದ್ದು, ನಿರಂತರ ಆಟದಿಂದ ಬಳಲಿದ್ದಾರೆ.

ಆಸ್ಟ್ರೇಲಿಯಾ ತಂಡದ 14 ಆಟಗಾರರಲ್ಲಿ ಪ್ರಮುಖ ಬೌಲರ್‌ಗಳಾದ ರಯಾನ್ ಹ್ಯಾರಿಸ್ ಹಾಗೂ ಜೋಷ್ ಹ್ಯಾಜಲ್‌ವುಡ್ ಜತೆಗೆ ಇನ್ನು ಇಬ್ಬರು ಹೆಚ್ಚುವರಿ ಬೌಲರ್‌ಗಳಿದ್ದು, ಮಿಚೆಲ್ ಸ್ಟಾರ್ಕ್ ಅಥವಾ ಪೀಟರ್ ಸಿಡ್ಲ್, ಜಾನ್ಸನ್ ಅವರ ಸ್ಥಾನವನ್ನು ತುಂಬುವ ಸಾಧ್ಯತೆಗಳಿವೆ.

ಸರಣಿಯನ್ನು ಈಗಾಗಲೇ 2-0ಯಿಂದ ಆಸ್ಟ್ರೇಲಿಯಾ ಗೆದ್ದಿರುವ ಹಿನ್ನೆಲೆಯಲ್ಲಿ ಜಾನ್ಸನ್‌ಗೆ ವಿಶ್ರಾಂತಿ ಸಿಗುವುದು ಬಹುತೇಕ ಖಚಿತ ಅಲ್ಲದೆ ಐಸಿಸಿ ಏಕದಿನ ವಿಶ್ವಕಪ್‌ಗೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಆಯ್ಕೆಗಾರರು ಜಾನ್ಸನ್ ಅವರ ದೈಹಿಕ ಕ್ಷಮತೆಗೆ ಒತ್ತು ನೀಡಲು ಮುಂದಾಗುವ ನಿರೀಕ್ಷೆ ಇದೆ.

ಅಭ್ಯಾಸದ ವೇಳೆ ಜಾನ್ಸನ್ ಅವರ ಅನುಪಸ್ಥಿತಿ ಬಗ್ಗೆ ಮಾಹಿತಿ ನೀಡಿದ ಆಸೀಸ್‌ನ ವೇಗಿ ಮಿಚೆಲ್ ಸ್ಟಾರ್ಕ್, ಜಾನ್ಸನ್ ಅವರು ತಮ್ಮ ಫಿಟ್ನೆಸ್ ಅನ್ನು ಕಾಯ್ದುಕೊಳ್ಳುವುದರ ಮೇಲೆ ಮುಂದಿನ ಪಂದ್ಯದಲ್ಲಿ ಆಡುವರೇ ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ನಾನು ಸದಾ ಪಂದ್ಯದಲ್ಲಿ ಆಡಲು ಸಿದ್ಧವಾಗಿರುತ್ತೇನೆ.

ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಡಿದ ಕಳೆದ ಎರಡು ಪಂದ್ಯಗಳಲ್ಲಿ ಚೆಂಡಿನ ಮೇಲೆ ಉತ್ತಮ ನಿಯಂತ್ರಣ ಸಾಧಿಸಿದ್ದೇನೆ. ಹಾಗಾಗಿ ಉತ್ತಮ ತಯಾರಿಯೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದ್ದೇನೆ ಎಂದು ತಿಳಿಸಿದರು.

ಇದಕ್ಕೂ ಮುನ್ನ  ಮಾತನಾಡಿದ್ದ ಮಿಚೆಲ್ ಜಾನ್ಸನ್, ಆಸ್ಟ್ರೇಲಿಯಾದ ಬಹುತೇಕ ಎಲ್ಲಾ ಬೌಲರ್‌ಗಳಿಗೂ ವಿಶ್ರಾಂತಿ ಅಗತ್ಯವಿದೆ. ಹಾಗಾಗಿ ಈ ಪಂದ್ಯದ ನಂತರ ಏನಾಗಲಿದೆ ಎಂಬುದನ್ನು ಕಾದು ನೋಡಬೇಕು ಎಂದು ತಿಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com