
ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್ ನಂತರ ಭಾರತದ ಕೋಚ್ ಆಗಿರುವ ಡಂಕನ್ ಫ್ಲೆಚರ್ ಅವರ ಅವಧಿ ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ ಬಿಸಿಸಿಐ, ಟೀಂ ಇಂಡಿಯಾಗೆ ಹೊಸ ಗುರುವಿನ ಹುಡುಕಾಟದಲ್ಲಿದೆ ಎಂದು ವರದಿ ಮುಲಕ ತಿಳಿದು ಬಂದಿದೆ.
ತಮ್ಮ ಪತ್ನಿ ಅನಾರೋಗ್ಯದಲ್ಲಿರುವ ಹಿನ್ನೆಲೆಯಲ್ಲಿ ಫ್ಲೆಚರ್ ಈಗಾಗಲೇ ತಂಡ ಜವಾಬ್ದಾರಿಯನ್ನು ಬಿಡಲು ಸಿದ್ಧರಿದ್ದರು. ಆದರೆ ವಿಶ್ವಕಪ್ ಸನಿಹದಲ್ಲಿರುವ ಹಿನ್ನೆಲೆಯಲ್ಲಿ ಬಿಸಿಸಿಐ ತಂಡದೊಂದಿಗಿನ ಅವಧಿಯನ್ನು ಪೂರ್ಣಗೊಳಿಸುವಂತೆ ತಿಳಿಸಿತ್ತು. ಹಾಗಾಗಿ ವಿಶ್ವಕಪ್ ನಂತರ ಫ್ಲೆಚರ್ ತಮ್ಮ ಅವಧಿಯನ್ನು ಮುಕ್ತಾಯಗೊಳಿಸಲಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ನಾವು ಕೆಲವರೊಂದಿಗೆ ಮಾತುಕತೆ ನಡೆಸಿದ್ದೇವೆ. ಅಲ್ಲೆದೆ ಹಿರಿಯ ಆಟಗಾರರನ್ನು ಸಂಪರ್ಕಿಸಿದ್ದು, ಅವರ ಅಭಿಪ್ರಾಯವನ್ನು ಪಡೆದಿದ್ದೇವೆ ಎಂದು ಬಿಸಿಸಿಐ ಮೂಲಗಳು ತಿಳಿಸಿದ್ದಾರೆ.
Advertisement