ಒಲಿಂಪಿಕ್ಸ್ ನಂತರ ಕೋಮ್ ನಿವೃತ್ತಿ?

ಮುಂದಿನ ವರ್ಷ ಬ್ರೆಜಿಲ್‌ನಲ್ಲಿ ನಡೆಯಲಿರುವ 2016ರ ರಿಯೋ ಒಲಿಂಪಿಕ್ಸ್ ನಂತರ...
ಎಂ. ಸಿ ಮೇರಿ ಕೋಮ್
ಎಂ. ಸಿ ಮೇರಿ ಕೋಮ್

ಗುವಾಹಟಿ: ಮುಂದಿನ ವರ್ಷ ಬ್ರೆಜಿಲ್‌ನಲ್ಲಿ ನಡೆಯಲಿರುವ 2016ರ ರಿಯೋ ಒಲಿಂಪಿಕ್ಸ್ ನಂತರ ಬಾಕ್ಸಿಂಗ್ ಅಖಾಡಕ್ಕೆ ನಿವೃತ್ತಿ ಹೇಳಲು ಎಂ.ಸಿ ಮೇರಿ ಕೋಮ್ ಚಿಂತಿಸಿದ್ದಾರೆ.

ಮಹಿಳಾ ಬಾಕ್ಸಿಂಗ್ ಅಖಾಡದಲ್ಲಿ ತಮ್ಮದೇಯಾದ ಛಾಪು ಮೂಡಿಸಿರುವ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಮೇರಿ ಕೋಮ್, ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಂದಿನ ಒಲಿಂಪಿಕ್ಸ್  ನಂತರ ಬಾಕ್ಸಿಂಗ್‌ಗೆ ವಿದಾಯ ಹೇಳಲು ಬಯಸಿದ್ದೇನೆ. ಆದರೆ, ಈ ಬಗ್ಗೆ ಇನ್ನೂ ಸ್ಪಷ್ಟವಾದ ನಿರ್ಧಾರ ಕೈಗೊಂಡಿಲ್ಲ ಎಂದಿದ್ದಾರೆ.

ಸದ್ಯ ತರಬೇತಿಯತ್ತ ಗಮನ ಕೇಂದ್ರೀಕರಿಸಿದ್ದು, ಒಲಿಂಪಿಕ್ಸ್‌ಗಾಗಿ ಕಠಿಣ ಅಭ್ಯಾಸಕ್ಕೆ ಅಣಿಯಾಗಿದ್ದೇನೆ. ಈ ವರ್ಷದ ಅಂತಹ ಯಾವುದೇ ಮಹತ್ವದ ಟೂರ್ನಿಗಳಿಲ್ಲ. ಆದರೂ ಕೆಲ ಅಂತಾರಾಷ್ಟ್ರೀ ಆಹ್ವಾನಿತ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳಲಿದ್ದೇನೆ.

ಬಾಕ್ಸಿಂಗ್ ರಿಂಗ್‌ನಲ್ಲಿ ಹೋರಾಟ ನಡೆಸಿದರೆ, ಪ್ರದರ್ಶನ ಮಟ್ಟ ಹೆಚ್ಚಿಸಿಕೊಳ್ಳಲು ಮತ್ತು ಆತ್ಮವಿಶ್ವಾಸ ವೃದ್ಧಿಯಾಗಲು ಸಹಾಯಕಾರಿಯಾಗುತ್ತದೆ ಎಂದು ಕೋಮ್ ಹೇಳಿದರು.

ದೇಶದ ಈಶಾನ್ಯ ಭಾಗದಿಂದ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಏಕೈಕ ಕ್ರೀಡಾಳು ಆಗಿರುವ ಮೇರಿ ಕೋಮ್ , ಈ ಪ್ರದೇಶದಲ್ಲೂ ದೇಶಕ್ಕೆ ಒಲಿಂಪಿಕ್ಸ್ ಪದಕ ಗೆದ್ದುಕೊಡಬಲ್ಲ ಅರ್ಹ ಸ್ಪರ್ಧಿಗಳಿದ್ದಾರೆ.

ಆದರೆ, ಈವರೆಗೂ ಯಾರೂ ಪದಕ ಗೆದ್ದು ಬರದೇ ಇರುವುದನ್ನು ನೋಡಿ ನೋವಾಗುತ್ತದೆ. ಆದರೆ, ಮುಂದಿನ ದಿನಗಳಲ್ಲಿ ತಾವು ಈ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿಯೂ ಅವರು ಪ್ರತಿಕ್ರಿಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com