
ಮೆರ್ಲ್ಬನ್: ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಮಹೇಶ್ ಭೂಪತಿ ಹಾಗೂ ಆಸ್ಟ್ರೀಯಾ ಜುರ್ಗನ್ ಮೆಲ್ಜರ್ ಜೋಡಿ ನೇರ ಸೆಟ್‌ಗಳಿಂದ ಸೋಲು ಅನುಭವಿಸಿದೆ.
ಈ ಜೋಡಿ ಟೂರ್ನಿಯ ಮೊದಲ ಸುತ್ತಿನಲ್ಲಿಯೇ ಹೊರ ನಡೆದಿದೆ. ಇಂದು ನಡೆದ ಪಂದ್ಯದಲ್ಲಿ ಅರ್ಜೇಂಟೀನಾ ಡೈಗೊ ಸ್ವಾರೆಜ್-ಹೊರೈಸ್ ಜೆಬಾಲ್ಲೊಸ್ ಜೋಡಿ 6-4, 6-3 ನೇರ ಸೆಟ್‌ಗಳಿಂದ ಭೂಪತಿ-ಮೆಲ್ಜರ್ ಜೋಡಿ ಪರಾಭವಗೊಂಡಿದೆ.
ಇತ್ತೀಚೆಗೆ ನಡೆದ ಚೆನ್ನೈ ಓಪನ್ ಟೆನಿಸ್ ಟೂರ್ನಿಯಲ್ಲೂ ಭೂಪತಿ ಅವರು ಎರಡನೇ ಸುತ್ತಿನಲ್ಲೇ ನಿರ್ಗಮಿಸಿದ್ದರು. ಒಂಬತ್ತು ತಿಂಗಳ ವಿರಾಮದ ಬಳಿಕ ಅಂಗಳಕ್ಕೆ ಮರಳಿರುವ ಭೂಪತಿ ಲಯ ಕಂಡುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ.
Advertisement