1992ರಲ್ಲಿ ಪರಾಕ್ರಮ ಮೆರೆದ ಪಾಕಿಸ್ತಾನ

ಈ ಆವೃತ್ತಿ ವಿಶ್ವಕಪ್ ಟೂರ್ನಿಗೆ ಹೊಸ ಆಯಾಮ ನೀಡಿತ್ತು. ಸಾಕಷ್ಟು ಬದಲಾವಣೆಗಳಿಂದ ಅಭಿಮಾನಿಗಳನ್ನು ಆಕರ್ಷಿಸುವಲ್ಲಿ...
1992 ವಿಶ್ವಕಪ್ ಗೆದ್ದ ಪಾಕಿಸ್ತಾನ ತಂಡ
1992 ವಿಶ್ವಕಪ್ ಗೆದ್ದ ಪಾಕಿಸ್ತಾನ ತಂಡ
Updated on

ಈ ಆವೃತ್ತಿ ವಿಶ್ವಕಪ್ ಟೂರ್ನಿಗೆ ಹೊಸ ಆಯಾಮ ನೀಡಿತ್ತು. ಸಾಕಷ್ಟು ಬದಲಾವಣೆಗಳಿಂದ ಅಭಿಮಾನಿಗಳನ್ನು ಆಕರ್ಷಿಸುವಲ್ಲಿ ಈ ವಿಶ್ವಕಪ್ ಯಶಸ್ವಿಯಾಗಿತ್ತು. ಮೊದಲ ಬಾರಿಗೆ ಪ್ರತಿ ತಂಡಗಳು ಸಾಂಪ್ರದಾಯಿಕ ಬಿಳಿ ಉಡುಗೆ ಹೊರತಾಗಿ ಬಣ್ಣದ ಬಟ್ಟೆಗಳನ್ನು ಧರಿಸಿದರೆ, ಪಂದ್ಯದಲ್ಲಿ ಕೆಂಪು ಚೆಂಡಿನ ಬಳಕೆ ಬದಲು ಬಿಳಿ ಚೆಂಡನ್ನು ಪರಿಚಯಿಸಲಾಯಿತು.  ಹಾಲಿ ಚಾಂಪಿಯನ್ ಆಗಿದ್ದ ಆಸ್ಟ್ರೇಲಿಯಾ ಜತೆಗೆ ನ್ಯೂಜಿಲೆಂಡ್ ಈ ವಿಶ್ವಕಪ್‍ನ ಆತಿಥ್ಯ ವಹಿಸುವ
ಅವಕಾಶ ಪಡೆದಿತ್ತು. ಅಲ್ಲದೆ ಟೂರ್ನಿಯಲ್ಲಿ ಮೊದಲ ಬಾರಿಗೆ ಅತಿ ಹೆಚ್ಚು ಹೊನಲು ಬೆಳಕಿನ ಪಂದ್ಯಗಳನ್ನು ಆಡಿಸಲಾಗಿತ್ತು. ಅಲ್ಲದೆ ವಿಶ್ವಕಪ್ ಟೂರ್ನಿಯಲ್ಲಿ ಸರಣಿಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಪರಿಚಯಿಸಲಾಯಿತು. ಈ ಗೌರವಕ್ಕೆ ನ್ಯೂಜಿಲೆಂಡ್‍ನ ಮಾರ್ಟೀನ್ ಕ್ರೊವ್ ಭಾಜನರಾದರು. ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡ 22 ರನ್‍ಗಳ ಅಂತರದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸುವ ಮೂಲಕ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ರೌಂಡ್ ರಾಬಿನ್ ಮಾದರಿ ಬದಲಾಗಿ ಎರಡು ಅರ್ಹತಾ ಸುತ್ತಿನ ಗುಂಪುಗಳನ್ನು ನಿಗದಿಪಡಿಸಲಾಯಿತು. ಹಾಗಾಗಿ ಈ ಟೂರ್ನಿಯಲ್ಲಿ ಒಟ್ಟು 39 ಪಂದ್ಯಗಳು ನಡೆದವು. ಆರಂಭದಲ್ಲಿ 8 ತಂಡಗಳು ಭಾಗವಹಿಸುವ ಹಿನ್ನೆಲೆಯಲ್ಲಿ ಒಟ್ಟು 28 ಪಂದ್ಯಗಳನ್ನು ನಡೆಸಲು ನಿರ್ಧರಿಸಲಾಗಿತ್ತು. ಆದರೆ, 1991ರಲ್ಲಿ ಜನಾಂಗೀಯ ಭೇದದಿಂದಾಗಿ ಅಮಾನತಿ ನಲ್ಲಿದ್ದ ದಕ್ಷಿಣ ಆಫ್ರಿಕಾ ಮತ್ತೆ ಐಸಿಸಿ ವ್ಯಾಪ್ತಿಗೆ ಸೇರಿಕೊಂಡಿತು. ಹಾಗಾಗಿ 9 ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದ್ದವು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com