
ಮೆಲ್ಬರ್ನ್: ಹಾಲಿ ಚಾಂಪಿಯನ್ ಸ್ಟಾನಿಸ್ಲಾಸ್ ವಾವ್ರಿಂಕಾ, ನೊವಾಕ್ ಜೊಕೊವಿಚ್ ಅವರು ಆಸ್ಟ್ರೇಲಿಯನ್ ಓಪನ್‍ನ ಪುರುಷರ ಸಿಂಗಲ್ಸ್ ನ ವಿಭಾದಲ್ಲಿ 4ನೇ ಸುತ್ತನ್ನು ಪ್ರವೇಶಿಸಿದ್ದಾರೆ.
ಇನ್ನು, ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ, ಸೆರೆನಾ ವಿಲಿಯಮ್ಸ್ ವಿಕ್ಟೋರಿಯಾ ಅಜರೆಂಕಾ ಅವರು 4ನೇ ಸುತ್ತಿಗೆ ಕಾಲಿಟ್ಟಿದ್ದಾರೆ. 4ನೇ ಶ್ರೇಯಾಂಕಿತ ಹಾಗೂ ಕಳೆದ ಬಾರಿಯ ಚಾಂಪಿಯನ್ ಸ್ವಿಡ್ಜರ್ಲೆಂಡ್‍ನ ವಾವ್ರಿಂಕಾ ಅವರು, ತಮ್ಮ ಮೂರನೇ ಸುತ್ತಿನ ಪಂದ್ಯದಲ್ಲಿ ಫಿನ್ಲೆಂಡ್‍ನ 6-4, 6-2, 6-4 ಸೆಟ್‍ಗಳಲ್ಲಿ ಮಣಿಸಿ, 4ನೇ ಸುತ್ತಿಗೆ ಕಾಲಿಟ್ಟರು.
ಇನ್ನು, ವಿಶ್ವದ ನಂಬರ್‍ಒನ್ ಆಟಗಾರ ನೊವಾಕ್ ಜೊಕೊವಿಚ್, ಸ್ಪೇನ್‍ನ ಫರ್ನಾಂಡೊ ವರ್ಡಾಸ್ಕೊ ವಿರುದ್ಧ 7-6 (10-8), 6-3, 6-4 ಸೆಟ್‍ಗಳಲ್ಲಿ ಜಯ ಸಾಧಿಸಿ, 4ನೇ ಸುತ್ತಿಗೆ ಪದಾರ್ಪಣೆ ಮಾಡಿದರು.
ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ, ವಿಶ್ವದ ನಂಬರ್ ಒನ್ ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್ ಉಕ್ರೇನ್ ನ ಎಲಿನಾ ಸ್ವಿಟೊಲಿನಾ ವಿರುದ್ಧ 4-6, 6-2, 6-0 ಸೆಟ್‍ಗಳಲ್ಲಿ ಜಯ ಸಾಧಿಸಿದರು. ಮತ್ತೊಂದು ಪಂದ್ಯದಲ್ಲಿ, ಬಲ್ಗೇರಿಯಾದ ವಿಕ್ಟೋರಿಯಾ ಅಜರೆಂಕಾ, ಚೆಕ್ ಗಣರಾಜ್ಯದ ಜಹ್ಲಾವೊವಾ ಸ್ಟ್ರೈಕೊವಾ ವಿರುದಟಛಿ 4-6, 4-6 ಸೆಟ್‍ಗಳಲ್ಲಿ ಗೆಲವು ಪಡೆದು ಮುನ್ನಡೆ ಸಾ„ಸಿದರು.
Advertisement