ಕ್ವಾರ್ಟರ್‍ಗೆ ಶರಪೋವಾ, ನಡಾಲ್

ಮಾಜಿ ಚಾಂಪಿಯನ್ ರಾಫೆಲ್ ನಡಾಲ್, ಆಂಡಿ ಮರ್ರೆ ಹಾಗೂ ಥಾಮಸ್ ಬೆರ್ಡಿಚ್, ಆಸ್ಟ್ರೇಲಿಯನ್ ಓಪನ್‍...
ಕ್ವಾರ್ಟರ್‍ಗೆ ಶರಪೋವಾ, ನಡಾಲ್

ಮೆಲ್ಬರ್ನ್: ಮಾಜಿ ಚಾಂಪಿಯನ್ ರಾಫೆಲ್ ನಡಾಲ್, ಆಂಡಿ ಮರ್ರೆ ಹಾಗೂ ಥಾಮಸ್ ಬೆರ್ಡಿಚ್, ಆಸ್ಟ್ರೇಲಿಯನ್ ಓಪನ್‍ನ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಭಾನುವಾರ ನಡೆದ 4ನೇ ಸುತ್ತಿನಲ್ಲಿ ಪಂದ್ಯಾವಳಿಯ ಆರಂಭದ ಪಂದ್ಯಗಳಲ್ಲಿ ಘಟಾನುಘಟಿಗಳಿಗೆ ಸವಾಲೆಸೆದಿದ್ದ ಆಟಗಾರರಿಗೆ ಸೋಲುಣಿಸಿದ ಈ ಇಬ್ಬರೂ ಪ್ರಶಸ್ತಿ ಸುತ್ತಿನತ್ತದಾಪುಗಾಲಿಟ್ಟಿದ್ದಾರೆ.

ರಾಡ್‍ಲ್ಯಾವೆರ್ ಅರೆನಾದಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಚುರುಕು ಆಟಗಾರರ ಕೆವಿನ್ ಆ್ಯಂಡರ್ಸನ್ ವಿರುದ್ಧ ಸೆಣೆಸಿದ ನಡಾಲ್, 7-5, 6-1, 6-4 ಸೆಟ್‍ಗಳಲ್ಲಿ ಜಯಸಾಧಿಸಿ 16ರ ಘಟ್ಟಕ್ಕೆ ಕಾಲಿಟ್ಟರು.

ಪುರುಷರ ಸಿಂಗಲ್ಸ್ ವಿಭಾಗದ 4ನೇ ಸುತ್ತಿನ ಮತ್ತೊಂದು ಪಂದ್ಯದಲ್ಲಿ, ಬ್ರಿಟನ್‍ನ ಆಂಡಿ ಮರ್ರೆ, ಬಲ್ಗೇರಿಯಾದ ಗ್ರಿಗರ್ ಡಿಮಿಟ್ರೊವ್ ವಿರುದ್ಧ 6-4, 6-7 (5-7), 6-3, 7-5
ಅಂತರದಲ್ಲಿ ಗೆಲವು ಪಡೆದು, ಕ್ವಾರ್ಟರ್ ಫೈನಲ್‍ಗೆ ಕಾಲಿಟ್ಟರು. ವಿಶ್ವದ 7ನೇ ಶ್ರೇಯಾಂಕ ಹೊಂದಿರುವ ಹಾಗೂ ಚೆಕ್ ಗಣರಾಜ್ಯದ ಥಾಮಸ್ ಬೆರ್ಡಿಚ್, ಆಸ್ಟ್ರೇಲಿಯಾದವರೇ ಆದ ಬೆರ್ನಾರ್ಡ್ ಟಾಮಿಕ್ ಅವರನ್ನು 6-2, 7-6 (3), 6-2 ಅಂತರದಲ್ಲಿ ಸೋಲಿಸಿ, ಕ್ವಾರ್ಟರ್ ಫೈನಲ್‍ಗೆ ಕಾಲಿಟ್ಟರು.

ನಾಲ್ಕನೇ ಸುತ್ತಿನಿಂದ ಮುನ್ನಡೆ ಪಡೆದಿರುವ ರಾಫೆಲ್ ನಡಾಲ್ ಹಾಗೂ ಥಾಮಸ್ ಬೆರ್ಡಿಚ್ ಅವರು ಕ್ವಾರ್ಟರ್ ಫೈನಲ್‍ನಲ್ಲಿ ಮುಖಾಮುಖಿಯಾಗಲಿದ್ದಾರೆ.

ಸೆಪ್ಪಿಗೆ ತೀವ್ರ ನಿರಾಸೆ: ವಿಶ್ವದ 2ನೇ ಶ್ರೇಯಾಂಕಿತ ಆಟಗಾರ ರೋಜರ್ ಫೆಡರರ್ ಅವರಿಗೆ ಮೂರನೇ ಸುತ್ತಿನಲ್ಲಿ ಮಣ್ಣುಮುಕ್ಕಿಸಿದ್ದ ಇಟಲಿಯ ಆಂಡ್ರಿಯಾಸ್ ಸೆಪ್ಪಿ ಅವರು ಪುರುಷರ ಸಿಂಗಲ್ಸ್ ವಿಭಾಗದಿಂದ ಆಚೆ ನಡೆದಿದ್ದಾರೆ. ಆಸೀಸ್‍ನ ಕಿರ್ಗಿಯೋಸ್ ಅವರ ವಿರುದ್ಧ ಸೆಣೆಸಿದ ಅವರು, 7-5, 6-4, 3-6, 6-7 (7-5), 6-8 ಅಂತರದಲ್ಲಿ
ಸೋತರು.

ಶರಪೋವಾಗೆ ಜಯ

ವಿಶ್ವದ 2ನೇ ಶ್ರೇಯಾಂಕಿತ ಆಟಗಾರ ಮಾರಿಯಾ ಶರಪೋವಾ, ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. 4ನೇ ಸುತ್ತಿನಲ್ಲಿ
ಚೀನಾದ ಶುಯ್ ಫೆಂಗ್ ವಿರುದ್ಧ ಸೆಣೆಸಿದ ಅವರು, 6-3, 6-0 ಸೆಟ್‍ಗಳಲ್ಲಿ ಗೆಲವು ಪಡೆದರು.

ಇದೇ ಸುತ್ತಿನ ಇತರ ಪಂದ್ಯಗಳಿಂದ ಕೆನಡಾದ ಯುಜಿನಿ ಬುಚಾರ್ಡ್, ರೊಮೇನಿಯಾದ ಸೈಮನ್ ಹ್ಯಾಲೆಪ್, ರಷ್ಯಾದ ಎಕಟೇರಿಯಾ ಮಕಾರೊವಾ ಸಹ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

ಬುಚಾರ್ಡ್ ಅವರು, ರೊಮೇನಿಯಾದ ಇರಿನಾ-ಕ್ಯಾಮೆಲಿಯಾ ಬೆಗು ವಿರುದ್ಧ 6-1, 5-7, 6-2 ಸೆಟ್‍ಗಳಲ್ಲಿ ಗೆಲವು ಪಡೆದರೆ, ಸೈಮೊನಾ ಅವರು, ಬೆಲ್ಜಿಯಂನ ಯಾನಿನಾ ಮಿಕ್ಮೇಯರ್ ವಿರುದ್ಧ 6-4, 6-2 ಸೆಟ್‍ಗಳ ಅಂತರದಲ್ಲಿ ಜಯ ಸಾಧಿಸಿದರು. ಇನ್ನು, ಮಕಾರೊವಾ ಅವರು ಜರ್ಮನಿಯ ಜೂಲಿಯÁ ಜಾರ್ಜಿಯಸ್ ವಿರುದ್ಧ  6-3, 6-2 ಸೆಟ್‍ಗಳಲ್ಲಿ ಜಯ ಸಾ„ಸಿದರು.

ಪೇಸ್‍ಗೆ ಮುನ್ನಡೆ, ಬೋಪಣ್ಣಗೆ ನಿರಾಸೆ
ಮಿಶ್ರ ಡಬಲ್ಸ್‍ನಲ್ಲಿ ಭಾರತದ ಆಶಾಕಿರಣಗಳಲ್ಲಿ ಒಂದು ಕಿರಣ ಮರೆಯಾಗಿದೆ. ಕರ್ನಾಟಕದ ಆಟಗಾರ ರೋಹನ್ ಬೋಪಣ್ಣ ಅವರು ಮಿಶ್ರ ಡಬಲ್ಸ್‍ನ ಮೊದಲ ಪಂದ್ಯದಲ್ಲಿ ಸೋತು ಹೊರ ನಡೆದಿದ್ದಾರೆ.

ಪುರುಷರ ಡಬಲ್ಸ್ ನಲ್ಲಿ ಅವರ ಜೋಡಿಯಾದ ಕೆನಡಾದ ಡೇನಿಯಲ್ ನೆಸ್ಟರ್ ವಿರುದ್ಧವೇ ಬೋಪಣ್ಣ ಸೋಲು ಕಂಡಿರುವುದು ವಿಶೇಷ. ಚೆಕ್ ರಿಪಬ್ಲಿಕ್‍ನ ಜಹ್ಲಾವೊವಾ ಸ್ಟ್ರೈಕೋವಾ ಅವರೊಂದಿಗೆ ಕಣಕ್ಕಿಳಿದಿದ್ದ ಬೋಪಣ್ಣ, ನೆಸ್ಟರ್- ಕ್ರಿಶ್ಚಿನಾ ಮ್ಲಾಡೆನೊವಿಕ್ (ಫ್ರಾನ್ಸ್) ವಿರುದ್ಧ 2-6, 6-3, 4--10 ಅಂತರದಲ್ಲಿ ಸೋತು ತನ್ನ ಸವಾಲನ್ನು ಅಂತ್ಯಗೊಳಿಸಿತು.

ಇನ್ನು, ಭಾರತದ ಹಿರಿಯ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಹಾಗೂ ಅವರ ಜೊತೆಗಾತಿ ಮಾರ್ಟಿನಾ ಹಿಂಗಿಸ್ (ಸ್ವಿರ್ಡರ್ಲೆಂಡ್), ಆಸ್ಟ್ರೇಲಿಯಾದ ಜೋಡಿಯಾದ ಮಾಸಾ ಜೊವಾನೊವಿಕ್ ಹಾಗೂ ಸ್ಯಾಮ್ ಥಾಮ್ಸನ್ ವಿರುದ್ಧ 6-2, 7-6 (7-2) ಸೆಟ್‍ಗಳಲ್ಲಿ ಜಯ ಸಾಧಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com