ಜಯದ ಹುಡುಕಾಟದಲ್ಲಿ ಬಿಎಫ್ ಸಿ

ಹಾಲಿ ಚಾಂಪಿಯನ್ ಆಗಿ ಐ-ಲೀಗ್ ಟೂರ್ನಿಯಲ್ಲಿ ಮತ್ತೆ ಪ್ರಶಸ್ತಿ ಉಳಿಸಿಕೊಳ್ಳಲು ಅಭಿಯಾನ ಆರಂಭಿಸಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೋಲ್ಕತಾ: ಹಾಲಿ ಚಾಂಪಿಯನ್ ಆಗಿ ಐ-ಲೀಗ್ ಟೂರ್ನಿಯಲ್ಲಿ ಮತ್ತೆ ಪ್ರಶಸ್ತಿ ಉಳಿಸಿಕೊಳ್ಳಲು ಅಭಿಯಾನ ಆರಂಭಿಸಿರುವ ಬೆಂಗಳೂರು ಎಫ್ ಸಿ, ಶುರುವಿನಲ್ಲಿ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ.

ಹಾಗಾಗಿ ತಮ್ಮ ಮುಂದಿನ ಪಂದ್ಯದಲ್ಲಿ ಈಸ್ಟ್ ಬೆಂಗಾಲ್ ವಿರುದ್ಧ ಪ್ರಸಕ್ತ ಸಾಲಿನ ಮೊದಲ ಗೆಲವು ದಾಖಲಿಸಲು ಸಕಲ ಸಿದ್ಧತೆ ನಡೆಸಿದೆ. ಬುಧವಾರ ಇಲ್ಲಿನ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ತನ್ನ ಮೂರನೇ ಸುತ್ತಿನ ಪಂದ್ಯದಲ್ಲಿ ಪ್ರಬಲ ಈಸ್ಟ್ ಬೆಂಗಾಲ್ ವಿರುದದ್ಧ ಗೆಲ್ಲಲು ಆ್ಯಶ್ಲೆ ವೆಸ್ಟ್ ವುಡ್ ಮಾರ್ಗದರ್ಶನದಲ್ಲಿ ಬಿಎಫ್ ಸಿ ತಾಲೀಮು ನಡೆಸಿದೆ.

ಟೂರ್ನಿಯ ಮೊದಲ ಪಂದ್ಯದಲ್ಲಿ ಡೆಂಪೋ ವಿರುದ್ಧ  ಗೋಲುರಹಿತ ಡ್ರಾ ಫಲಿತಾಂಶ ಪಡೆದ ಸುನೀಲ್ ಛೆಟ್ರಿ ಪಡೆ, ನಂತರ ಪುಣೆ ಎಫ್ ಸಿ ವಿರುದ್ಧ 1-3 ಗೋಲುಗಳ ಅಂತರದಲ್ಲಿ ಸೋತು ತೀವ್ರ ಮುಖಭಂಗ ಅನುಭವಿಸಿದೆ.

ಪ್ರಸಕ್ತ ಟೂರ್ನಿಯಲ್ಲಿ ಗೆಲವು ಕಾಣದಿರುವ ಹಿನ್ನೆಲೆಯಲ್ಲಿ ಬಿಎಫ್ ಸಿ ಮೇಲೆ ಸ್ವಲ್ಪ ಒತ್ತಡ ಹೆಚ್ಚಾಗಿದೆ. ಆರಂಭಿಕ ಎರಡೂ ಪಂದ್ಯಗಳನ್ನು ತವರಿನಲ್ಲೇ ಆಡಿದ್ದ ಬೆಂಗಳೂರು ಎಫ್ ಸಿ ಗೆ ಇದು ಮೊದಲ ಹೊರಗಿನ ಅಂಗಣದ ಪಂದ್ಯವಾಗಿದೆ. ಹಾಗಾಗಿ ತವರಿನಲ್ಲಿ ಮುಗ್ಗರಿಸಿರುವ ತಂಡ ಹೊರ ಅಂಗಣದಲ್ಲಿ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದನ್ನು ಕಾದು ನೋಡಬೇಕು.

ಮೊದಲ ಪಂದ್ಯದಲ್ಲಿ ಗೋಲು ದಾಖಲಿಸಲು ಸಿಕ್ಕ ಅಮೂಲ್ಯ ಅವಕಾಶವನ್ನು ಕೈಚೆಲ್ಲಿದ್ದ ಬಿಎಫ್ ಸಿ, ಗೆಲವಿನಿಂದ ವಂಚಿತವಾಗಿತ್ತು. ನಾಯಕ ಸುನೀಲ್ ಛೆಟ್ರಿ, ಪೆನಾಲ್ಟಿಯಂತಹ ಅತ್ಯುತ್ತಮ ಅವಕಾಶ ದೊರೆತರೂ ಸಹ ಗೋಲು ಗಳಿಸಲು ವಿಫಲರಾಗಿ ಭಾರಿ ನಿರಾಸೆಗೊಂಡಿದ್ದರು. ಇದರ ಹೊರತಾಗಿ, ಕೆಲ ಫೀಲ್ಡ್ ಗೋಲು ಗಳಿಸುವ ಉತ್ತಮ ಅವಕಾಶಗಳು ದೊರೆತಿದ್ದರೂ ಸಹ ಸದುಪಯೋಗಪಡಿಸಿಕೊಳ್ಳಲು ಬೆಂಗಳೂರು ಆಟಗಾರರು ವಿಫಲರಾಗಿದ್ದರು.

ಇನ್ನು ಎರಡನೇ ಪಂದ್ಯದಲ್ಲೂ ಪುಣೆ ವಿರುದ್ಧ ಸಂಘಟಿತ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಈ ಎರಡೂ ಪಂದ್ಯಗಳಲ್ಲಿನ ತಪ್ಪನ್ನು ಬಿಎಫ್ ಸಿ ತಿದ್ದಿಕೊಂಡು ಈಸ್ಟ್
ಬೆಂಗಾಲ್ ವಿರುದ್ಧ ಮೇಲುಗೈ ಸಾ„ಸುವುದೇ ಎಂಬುದು ಕುತೂಹಲವಾಗಿದೆ. ಫೆಡರೇಷನ್ ಕಪ್ ಪಂದ್ಯಾವಳಿಯಲ್ಲಿ ಸೋಲರಿಯದ ತಂಡವಾಗಿ ಚಾಂಪಿಯನ್ ಆಗಿದ್ದ ಬಿಎಫ್ ಸಿ ನಂತರ ಮಂಕಾದಂತಿದೆ. ಆಡಿರುವ ಎರಡು ಪಂದ್ಯಗಳಿಂದ ಕೇವಲ 1 ಅಂಕ ಸಂಪಾದಿಸಿರುವ ಬಿಎಫ್ ಸಿ 11 ತಂಡಗಳ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ತಂಡವನ್ನು ಮತ್ತೆ ಗೆಲವಿನ ಲಯಕ್ಕೆ ತರಲು ಆ್ಯಶ್ಲೆ ವೆಸ್ಟ್ ವುಡ್ ರಣತಂತ್ರ ರೂಪಿಸಿದ್ದಾರೆ.

ಇತ್ತ ಈಸ್ಟ್ ಬೆಂಗಾಲ್ ತಂಡ ಆಡಿರುವ 1 ಪಂದ್ಯದಲ್ಲಿ ಡ್ರಾ ಫಲಿತಾಂಶ ಪಡೆದು 1 ಅಂಕದೊಂದಿಗೆ 6ನೇ ಸ್ಥಾನದಲ್ಲಿದೆ.

ಡೆಂಪೊ-ರಾಯಲ್‍ಗೆ ಜಯ
ಮಂಗಳವಾರ ನಡೆದ ಪಂದ್ಯಗಳ ಪೈಕಿ ಡೆಂಪೊ ಎಫ್ ಸಿ 3-0 ಗೋಲು ಅಂತರದಲ್ಲಿ ಸ್ಪೋರ್ಟಿಂಗ್ ಕ್ಲಬ್ ಡಿ ಗೋವಾ ವಿರುದ್ಧ  ಜಯ ಸಾಧಿಸಿತು. ಇನ್ನು ರಾಯಲ್ ವಾಹಿಂಗ್‍ಡೊ ತಂಡ ಭರತ್ ಎಫ್ ಸಿಯನ್ನು 2-1 ಗೋಲುಗಳಿಂದ ಮಣಿಸಿತು. ಈ ಗೆಲವಿನಿಂದ ರಾಯಲ್ ಆಡಿರುವ ಮೂರೂ ಪಂದ್ಯದಲ್ಲಿ ಗೆಲವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com