ಮಾರಿಯಾ ಸೆಮೀಸ್‍ಗೆ, ರಾಫೆಲ್ ನಡಾಲ್ ಔಟ್

ರಷ್ಯಾದ ಮಾರಿಯಾ ಶರಪೋವಾ, ನೂತನ ವರ್ಷದ ಮೊದಲ ಗ್ರ್ಯಾನ್‍ಸ್ಲಾಮ್ ಟೆನಿಸ್ ಟೂರ್ನಿಯಾದ...
ಮಾರಿಯಾ ಶರಪೋವಾ
ಮಾರಿಯಾ ಶರಪೋವಾ

ಮೆಲ್ಬರ್ನ್: ರಷ್ಯಾದ ಮಾರಿಯಾ ಶರಪೋವಾ, ನೂತನ ವರ್ಷದ ಮೊದಲ ಗ್ರ್ಯಾನ್‍ಸ್ಲಾಮ್ ಟೆನಿಸ್ ಟೂರ್ನಿಯಾದ ಆಸ್ಟ್ರೇಲಿಯನ್ ಓಪನ್‍ನಲ್ಲಿ ಮಹಿಳೆಯರ ಸಿಂಗಲ್ಸ್ ಸೆಮಿ ಫೈನಲ್ ಪ್ರವೇಶಿಸಿದ್ದಾರೆ. ಆದರೆ, ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸ್ಪೇನಿನ ರಾಫೆಲ್ ನಡಾಲ್ ಹೋರಾಟ ಕ್ವಾರ್ಟರ್ ಫೈನಲ್‍ನಲ್ಲಿಯೇ ಅಂತ್ಯಗೊಂಡಿದೆ.

ಮಂಗಳವಾರ ನಡೆದ ಮಹಿಳೆಯರ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಎರಡನೇ ಶ್ರೇಯಾಂಕಿತೆ ಶರಪೋವಾ, 6-3, 6-2 ನೇರ ಸೆಟ್‍ಗಳಿಂದ ಕೆನಡಾದ ಏಳನೇ ಶ್ರೇಯಾಂಕಿತೆ ಯುಗೇನಿ ಬೌಚರ್ಡ್ ಅವರನ್ನು ಸೋಲಿಸಿದರು. ಒಂದು ಗಂಟೆ 18 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಶರಪೋವಾ, ಎರಡೂ ಸೆಟ್‍ಗಳಲ್ಲಿ ಆತ್ಮವಿಶ್ವಾಸದಿಂದ
ಹೋರಾಟ ನಡೆಸುವ ಮೂಲಕ ಅಂತಿಮ ಗೆಲವು ತಮ್ಮದಾಗಿಸಿಕೊಂಡು ಆರನೇ ಗ್ರ್ಯಾನ್‍ಸ್ಲಾಮ್ ಪ್ರಶಸ್ತಿ ಗೆದ್ದುಕೊಳ್ಳುವ ಆಸೆ ಜೀವಂತವಾಗಿರಿಸಿಕೊಂಡರು.

ಮಾಕರೊವಾ ನಾಲ್ಕರಘಟ್ಟಕ್ಕೆ
ಏಕತೆರಿನಾ ಮಾಕಾರೊವಾ ಕೂಡ ಮಹಿಳೆಯರ ಸಿಂಗಲ್ಸ್ ನಲ್ಲಿ ಸೆಮಿ ಫೈನಲ್ ತಲುಪಿದ್ದಾರೆ. ಇಂದೇ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಷ್ಯಾದ ಮಾಕರೊವಾ 6-4, 6-0 ನೇರ ಸೆಟ್‍ಗಳಿಂದ ರೊಮೇನಿಯಾದ ಸಿಮೋನಾ ಹಾಲೆಪ್ ಅವರನ್ನು ಪರಾಭವಗೊಳಿಸಿದರು.

ಕೇವಲ 69 ನಿಮಿಷಗಳ ಕಾಲ ನಡದೆ ಪಂದ್ಯದಲ್ಲಿ ಮೊದಲ  ಸೆಟ್‍ನಲ್ಲಿ ಎದುರಾಳಿಯಿಂದ ಕೊಂಚ ಕಠಿಣ ಸವಾಲು ಎದುರಿಸಿದ್ದ ರಷ್ಯನ್ ನ್ ಆಟಗಾರ್ತಿಯು, ಎರಡನೇ ಸೆಟ್ ನಲ್ಲಿ  ಪ್ರಭಾವಶಾಲಿ ಸರ್ವ್ ಮೂಲಕ ಸಿಮೋನಾಗೆ ಒಂದೂ ಗೇಮ್  ಗೆದ್ದುಕೊಳ್ಳಲು ಅವಕಾಶವನ್ನೇ ನೀಡಲಿಲ್ಲ. ನಡಾಲ್‍ಗೆ ಆಘಾತ: ದಿನದ ನಿರಾಶಾದಾಯಕ

ಫಲಿತಾಂಶವೆಂದರೆ ಸ್ಪೇನಿನ ರಾಫೆಲ್ ನಡಾಲ್, ಎಂಟರಘಟ್ಟದ ಸೆಣಸಿನಲ್ಲಿಯೇ ಸೋತು ಹೊರನಡೆದಿದ್ದು. ಜೆಕ್ ಗಣರಾಜ್ಯದ ಏಳನೇ ಶ್ರೇಯಾಂಕಿತ ಆಟಗಾರ ಥಾಮಸ್ ಬೆರ್ಡಿಚ್ 6-2, 6-0, 7-6 (7-5) ನೇರ ಸೆಟ್ ಗಳಿಂದ ನಡಾಲ್‍ಗೆ ಸೋಲುಣಿಸಿ ಸೆಮಿ ಫೈನಲ್ ತಲುಪಿದ ಮೊದಲ ಆಟಗಾರ ರಾದರು.

ಎರಡು ಗಂಟೆ 13 ನಿಮಿಷಗಳ ಕಾಲ ನಡೆದ ಪೈಪೆÇೀಟಿಯಲ್ಲಿ ಮೊದಲೆರಡೂ ಸೆಟ್‍ಗಳನ್ನು ಸುಲಭವಾಗಿ ಕಳೆದುಕೊಂಡಿದ್ದ ನಡಾಲ್, 3ನೇ ಸೆಟ್‍ನಲ್ಲಿ ತಿರುಗೇಟು ನೀಡುವ ಸೂಚನೆ ನೀಡಿದ್ದರು.

ಟೈಬ್ರೇಕರ್‍ನಲ್ಲಿ ಅನಗತ್ಯ ತಪ್ಪು ಗಳನ್ನು ಮÁಡುವ ಮೂಲಕ ಎದುರಾಳಿಗೆ ಅಂಕಬಿಟ್ಟು ಕೊಟ್ಟು ಸ್ಪರ್ಧಾಕಣ ತೊರೆಯಬೇಕಾಯಿತು. ಇದರಿಂದ ನಡಾಲ್ ಮರ್ರೆ ಸೆಮಿಫೈನಲ್‍ಗೆ
ಬ್ರಿಟನ್ನಿನ ಆ್ಯಂಡಿ ಮರ್ರೆ ಸಹ ಪುರುಷರ ಸಿಂಗಲ್ಸ್‍ನಲ್ಲಿ ನಾಲ್ಕರಘಟ್ಟ ತಲುಪಿದ್ದಾರೆ. ದಿನದ ಮತ್ತೊಂದು ಕ್ವಾಟರ್ ಫೈನಲ್ ಪಂದ್ಯದಲ್ಲಿ ಆರನೇ ಶ್ರೇಯಾಕಿತ ಆ್ಯಂಡಿ ಮರ್ರೆ, 6-3, 7-6 (7-5), 6-3 ನೇರ ಸೆಟ್‍ಗಳಿಂದ ಆಸ್ಟ್ರೇಲಿಯಾದ ನಿಕ್ ಕೈರ್ಜೀಸ್ ಅವರನ್ನು ಸೋಲಿಸಿದರು. ಎರಡು ಗಂಟೆ 5 ನಿಮಿಷಗಳವರೆಗೆ ನಡೆದ ಮುಖಾಬಲದಲ್ಲಿ ಮರ್ರೆ, ಎರಡನೇ ಸೆಟ್ ನಲ್ಲಿ ಮಾತ್ರ ಕಷ್ಟಪಟ್ಟು ಟೈಬ್ರೇಕರ್‍ನಲ್ಲಿ ಗೆಲವು ಸಾಧಿಸಿದರು. ಆದರೆ, ಉಳಿದ ಎರಡೂ ಸೆಟ್‍ಗಳಲ್ಲಿ ಉತ್ತಮ ಆಟದ ಪ್ರದರ್ಶನ ನೀಡಿ ಎದುರಾಳಿಗೆ ಎಚ್ಚೆತ್ತುಕೊಳ್ಳಲು ಅವಕಾಶ ನೀಡಲಿಲ್ಲ. ಪಂದ್ಯದಲ್ಲಿ ಮರ್ರೆ ಒಟ್ಟು 13 ಏಸ್‍ಗಳನ್ನು ಸಿಡಿಸಿದರೆ, ನಿಕ್ ಇಂತಹ 9 ಹೊಡೆತಗಳನ್ನು ಬಾರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com