ಕೋಪಾ ಅಮೆರಿಕ ಟೂರ್ನಿ ಗೆದ್ದ ಚಿಲಿ ತಂಡ
ಕ್ರೀಡೆ
ಚಿಲಿ ಮುಡಿಗೆ ಕೋಪಾ ಅಮೆರಿಕ ಟೂರ್ನಿ ಕಿರೀಟ
ಇದೇ ಮೊದಲ ಬಾರಿಗೆ ಚಿಲಿ ಫುಟ್ಬಾಲ್ ತಂಡ ಕೋಪಾ ಅಮೆರಿಕ ಟೂರ್ನಿ ಕಿರೀಟವನ್ನು ಮುಡಿಗೇರಿಸಿಕೊಂಡಿದೆ..
ಸಾಂಟಿಯಾಗೋ: ಇದೇ ಮೊದಲ ಬಾರಿಗೆ ಚಿಲಿ ಫುಟ್ಬಾಲ್ ತಂಡ ಕೋಪಾ ಅಮೆರಿಕ ಟೂರ್ನಿ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.
ತವರಿನಲ್ಲಿ ನಡೆದ ಪ್ರಸ್ತುತ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅರ್ಜೆಂಟಿನಾ ತಂಡವನ್ನು 4-1 ಗೋಲುಗಳಿಂದ ಪರಾಭವಗೊಳಿಸಿ ಚಿಲಿ ಟೂರ್ನಿ ಗೆದ್ದುಕೊಂಡಿದೆ.
ಪಂದ್ಯದುದ್ದಕ್ಕೂ ಆಮೇಲೆ ಎಕ್ಸ್‌ಟ್ರಾ ಟೈಮ್‌ನಲ್ಲೂ ಉಭಯ ಪಂದ್ಯಗಳು ಯಾವುದೇ ಗೋಲು ಹೊಡೆಯದ ಕಾರಣ ಫೆನಾಲ್ಟಿಗೆ ಅವಕಾಶ ನೀಡಲಾಗಿತ್ತು.
ಅರ್ಜೆಂಟೀನಾ ಪರ ಗೋಂಜಾಲೋ ಹಿಂಗ್ವೇ ಮತ್ತು ಎವರ್ ಬೆನೇಗಾ ಅವಕಾಶಗಳನ್ನು ಕೈ ಚೆಲ್ಲಿದಾಗ ಚಿಲಿ ವಾಲ್ಕು ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡಿತು.

