ವಿಶ್ವಕಪ್ ಪಾಕ್ ತಂಡ ಅನರ್ಹ: ತನಿಖೆಗೆ ಆದೇಶ

ಮುಂದಿನ ವರ್ಷ ನಡೆಯಲಿರುವ ರಿಯೋ ಒಲಂಪಿಕ್ಸ್ ಗೆ ಅರ್ಹತೆ ಪಡೆದುಕೊಳ್ಳುವ ಅವಕಾಶವನ್ನು ಪಾಕಿಸ್ತಾನ ರಾಷ್ಟ್ರೀಯ ತಂಡ ಕಳೆದುಕೊಂಡಿರುವುದು ಅಲ್ಲಿನ ಸರ್ಕಾರದ ನಿದ್ದೆಗೆಡಿಸಿದೆ.
ಪಾಕಿಸ್ತಾನ ಕ್ರಿಕೆಟ್ ತಂಡ(ಸಂಗ್ರಹ ಚಿತ್ರ )
ಪಾಕಿಸ್ತಾನ ಕ್ರಿಕೆಟ್ ತಂಡ(ಸಂಗ್ರಹ ಚಿತ್ರ )

ಕರಾಚಿ: ಮುಂದಿನ ವರ್ಷ ನಡೆಯಲಿರುವ ರಿಯೋ ಒಲಂಪಿಕ್ಸ್ ಗೆ ಅರ್ಹತೆ ಪಡೆದುಕೊಳ್ಳುವ ಅವಕಾಶವನ್ನು ಪಾಕಿಸ್ತಾನ ರಾಷ್ಟ್ರೀಯ ಹಾಕಿ  ತಂಡ ಕಳೆದುಕೊಂಡಿರುವುದು ಅಲ್ಲಿನ ಸರ್ಕಾರದ ನಿದ್ದೆಗೆಡಿಸಿದೆ.

ಬೆಲ್ಜಿಯಂ ಆಂತ್ವೆರ್ಪ್ ನಲ್ಲಿ ನಡೆಯುತ್ತಿರುವ ವಿಶ್ವ ಹಾಕಿ ಲೀಗ್ ಪಂದ್ಯಾವಳಿಯ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಸೋಲುವ ಮೂಲಕ ಪಾಕಿಸ್ತಾನ ತಂಡ ಒಲಂಪ್ಪಿಕ್ಸ್ ನಲ್ಲಿ ಪಾಲ್ಗೊಳ್ಳುವ ಅರ್ಹತೆ ಕಳೆದುಕೊಂಡಿತ್ತು. ಒಲಂಪಿಕ್ಸ್ ಕಾಲಿಡುವಲ್ಲಿ ಪಾಕಿಸ್ತಾನ ವಿಫಲವಾಗಿರುವುದು ಆ ದೇಶದ ಕ್ರೀಡಾ ಇತಿಹಾಸದಲ್ಲೇ ಇದೆ ಮೊದಲು ಎನ್ನಲಾಗಿದೆ.

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ ನವಾಜ್ ಷರೀಫ್ ಐವರು ಸದಸ್ಯರ ಸಮಿತಿಯನ್ನು ನೇಮಿಸಿದ್ದು, ಐರ್ಲೆಂಡ್ ವಿರುದ್ಧ ಪಾಕಿಸ್ತಾನ ತಂಡ ಸೋಲು ಕಂಡಿದ್ದಾರ ಹಿಂದಿರುವ ಕಾರಣಗಳನ್ನು ಕಡುಹಿಂಡಿಯುವಂತೆ ಆದೇಶಿಸಿದ್ದಾರೆಂದು ಐಬಿಎನ್ ಲೈವ್ ವರದಿ ಮಾಡಿದೆ. ಏತನ್ಮಧ್ಯೆ ಬೆಲ್ಜಿಯಂನಿಂದ ಶೀಘ್ರವೇ ಹಿಂದಿರುಗಿನ ನಂತರ, ಪಾಕ್ ತಂಡದಲ್ಲಿನ ಬಹುತೇಕ ಆಟಗಾರರು ನಿವೃತ್ತಿ ಘೋಷಿಸಲು ಮನಸು ಮಾಡಿದ್ದಾರೆಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com