
ಲಂಡನ್ : ವಿಶ್ವದ 3ನೇ ಶ್ರೇಯಾಂಕಿತ ಟೆನಿಸ್ ಆಟಗಾರ ಬ್ರಿಟನ್ ನ ಆಂಡಿ ಮರ್ರೆ ವಿಂಬಲ್ಡನ್ ಟೂರ್ನಿಯಲ್ಲಿ 4ನೇ ಸುತ್ತು ಪ್ರವೇಶಿಸಿದ್ದಾರೆ. ಶನಿವಾರ ರಾತ್ರಿ ನಡೆದ 3ನೇ ಸುತ್ತಿನ ಪಂದ್ಯದಲ್ಲಿ ಅವರು ಇಟಲಿಯ ಆಂಡ್ರಿಯಾಸ್ ಸೆಪ್ಪಿ ಅವರನ್ನು 6-2, 6-2, 6-1 ಸೆಟ್ ಗಳ ಅಂತರದಲ್ಲಿ ಸೋಲಿಸಿದರು. ಮುಂದಿನ ಪುಂದ್ಯದಲ್ಲಿ ಅವರು 23 ನೇ ಶ್ರೇಯಾಂಕಿತ ಟೆನಿಸಿಗ ಕ್ರೋವೇಶಿಯಾದ ಇನಾಕಾರ್ಲೋವಿಚ್ ವಿರುದ್ಧ ಸೆಣಸಲಿದ್ದಾರೆ,
ಮೊದಲಸೆಟ್ ನಲ್ಲಿ ಸುಲಭ ಜಯ ಸಾಧಿಸಿದ ಮರ್ರೆ ನಂತರದ ಸೆಟ್ ನಲ್ಲೂ ಅದೇ ಲಹರಿಯಲ್ಲಿ ಮುಂದುವರಿದು ಗೆಲುವು ಪಡೆದರು, ಆದರೆ ಮೂರನೇ ಸೆಟ್ ನಲ್ಲಿ ಭುಜದ ನೋವಿನಿಂದ ಬಳಲಿದ ಅವರು ಅಲ್ಲಿ ಸೋಲು ಕಾಣಬೇಕಾಯಿತು. ಕೆಲ ಹೊತ್ತಿನ ವೈದ್ಯಕೀಯ ಚಿಕಿತ್ಸೆಯ ತರುವಾಯ ನಾಲ್ಕನೇ ಸೆಟ್ ಅನ್ನು ತಮ್ಮದಾಗಿಸಿಕೊಂಡು ಪಂದ್ಯದಲ್ಲಿ ಜಯಭೇರಿ ಭಾರಿಸಿದರು.
Advertisement