
ಲಂಡನ್: ವಿಂಬಲ್ಡನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ರೋಹನ್ ಬೊಪ್ಪಣ್ಣ ಮತ್ತು ಫ್ಲೋರಿನ್ ಮಾರ್ಗಿಯಾ ಜೋಡಿ ಬುಧವಾರ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.
ರೋಹನ್ ಬೊಪ್ಪಣ್ಣ ಹಾಗೂ ರೋಮೆನಿಯಾದ ಫ್ಲೋರಿನ್ ಮಾರ್ಗಿಯಾ ಜೋಡಿ 5-7, 6-4, 7-6, 7-6ರಲ್ಲಿ ಅಮೆರಿಕದ ಮೈಕ್ ಹಾಗೂ ಬಾಬ್ ಬ್ರಯಾನ್ ಅವಳಿಗಳನ್ನು ಮಣಿಸಿದರು.
ಸುದೀರ್ಘ ಎರಡು ಗಂಟೆ 34 ನಿಮಿಷಗಳ ಕಾಲ ಸೆಣೆಸಿದ ಉಭಯ ತಂಡಗಳು ಟೂರ್ನಿಯಲ್ಲಿ ಒಂಬತ್ತನೇ ಶ್ರೇಯಾಂಕ ಪಡೆದಿರುವ ಇಂಡೋ–ರೋಮೆನಿಯಾ ಜೋಡಿ, ಮೂರು ಬಾರಿಯ ಚಾಂಪಿಯನ್ಸ್ ಬ್ರಯಾನ್ ಸಹೋದರರನ್ನು ಪರಾಭವಗೊಳಿಸಿದ್ದಾರೆ. ಮುಂದಿನ ಸುತ್ತಿನಲ್ಲಿ ಬೋಪಣ್ಣ–ಮಾರ್ಗಿಯಾ ಜೋಡಿ ಐದನೇ ಶ್ರೇಯಾಂಕಿತ ಆಸ್ಟ್ರೇಲಿಯಾದ ಅಲೆಕ್ಸಾಂಡರ್ ಪಿಯಾ ಹಾಗೂ ಹಂಗೇರಿಯದ ಟಮಿಯಾ ಬಬೋಸ್ ಅವರನ್ನು ಎದುರಿಸಲಿದ್ದಾರೆ.
Advertisement