ಚಾಂಪಿಯನ್ ಪಟ್ಟ ಕಳೆದುಕೊಂಡು ಫ್ಲಾಯ್ಡ್ ಮೇವದರ್

ವಿಶ್ವದ ಖ್ಯಾತ ಬಾಕ್ಸಿಂಗ್ ಪಟು ಫ್ಲಾಯ್ಡ್ ಮೇವೆದರ್ ಜೂನಿಯರ್ ಅವರು ಮೇ ತಿಂಗಳಿನಲ್ಲಿ ಗಳಿಸಿದ್ದ ಡಬ್ಲ್ಯೂಬಿಒ ವೆಲ್ಟರ್‍ವೇಯ್ಟ್ ವಿಶ್ವ ಚಾಂಪಿಯನ್ ಪಟ್ಟವನ್ನು ...
ಫ್ಲಾಯ್ಡ್  ಮೇವೆದರ್
ಫ್ಲಾಯ್ಡ್ ಮೇವೆದರ್

ವಾಷಿಂಗ್ಟನ್: ವಿಶ್ವದ ಖ್ಯಾತ ಬಾಕ್ಸಿಂಗ್ ಪಟು ಫ್ಲಾಯ್ಡ್  ಮೇವೆದರ್ ಜೂನಿಯರ್ ಅವರು ಮೇ ತಿಂಗಳಿನಲ್ಲಿ ಗಳಿಸಿದ್ದ ಡಬ್ಲ್ಯೂಬಿಒ ವೆಲ್ಟರ್‍ವೇಯ್ಟ್ ವಿಶ್ವ ಚಾಂಪಿಯನ್ ಪಟ್ಟವನ್ನು ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಡಬ್ಲ್ಯೂಬಿಒ) ಹಿಂಪಡೆದಿದೆ. ಮೇ ತಿಂಗಳಿನಲ್ಲಿ ನಡೆದಿದ್ದ ಬಾಕ್ಸಿಂಗ್ ಚರಿತ್ರೆಯಲ್ಲೇ ಭಾರೀ ಮೊತ್ತದ ಬಹುಮಾನದ ಸೆಣಸಿನಲ್ಲಿ ಮೇವೆದರ್ ಅವರು,  ಫಿಲಫೈನ್ಸ್ ನ ಮೆನ್ನಿ ಪಾಕ್ವಿಯಾವೊ ವಿರುದ್ದ 48-0 ಅಂಕಗಳ ಅಂತರದಲ್ಲಿ ಜಯ ಸಾಧಿಸಿ, ಸುಮಾರು ರೂ. 1269 ಕೋಟಿ ಮೊತ್ತವನ್ನು ಬಾಚಿಕೊಂಡಿದ್ದರು.

ಈ ಭಾರಿ ಮೊತ್ತದ ಬಹುಮಾನ ಗೆದ್ದ ಹಿನ್ನೆಲೆಯಲ್ಲಿ, ಅವರು ಡಬ್ಲ್ಯೂಬಿಒಗೆ ಅನುಮೋದನೆ ಶುಲ್ಕದ ರೂಪದಲ್ಲಿ ರೂ. 200 ಕೋಟಿ ಪಾವತಿಸಬೇಕಿತ್ತು. ಅಲ್ಲದೆ, ಸುಮಾರು ಐದು ವಿವಿಧ ವೇಯ್ಟ್ ಗಳ ವಿಭಾಗದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಅವರು, ಅವುಗಳಲ್ಲಿ ಯಾವುದಾದರೂ ಒಂದನ್ನು ಮಾತ್ರ ಉಳಿಸಿಕೊಂಡು, ಉಳಿದ ನಾಲ್ಕು ಚಾಂಪಿಯನ್ ಪಟ್ಟವನ್ನು ಡಬ್ಲ್ಯೂಬಿಒಗೆ ಹಿಂದಿರುಗಿಸಬೇಕಿತ್ತು. ಇದಕ್ಕಾಗಿ, ಜು. 6ರ ಸಂಜೆ 4:30ರವರೆಗೂ ಅವರಿಗೆ ಗಡುವು ನೀಡಲಾಗಿತ್ತು. ಆದರೆ, ಗುಡುವು ಮುಗಿಯುವ ಕ್ಷಣ ಸನ್ನಿಹಿತವಾದರೂ ಮೇವೆದರ್ ಅವರು, ಡಬ್ಲ್ಯೂಬಿಒ ನೀಡಿದ್ದ ಯಾವುದೇ ಸೂಚನೆಯನ್ನು ಪಾಲಿಸಿಲ್ಲವಾದ್ದರಿಂದ ಕ್ರಮ ಕೈಗೊಂಡಿರುವ ಸಂಸ್ಥೆ, ಅವರು ಮೇ ತಿಂಗಳ ಸ್ಪರ್ಧೆಯಲ್ಲಿ ಸಂಪಾದಿಸಿದ್ದ ಡಬ್ಲ್ಯೂಬಿಒ ವೆಲ್ಟರ್‍ವೇಯ್ಟ್ ವಿಶ್ವ ಚಾಂಪಿಯನ್ ಪಟ್ಟವನ್ನು ಕಿತ್ತುಕೊಂಡಿದೆ.

ಅಂದಹಾಗೆ, ಮೇ ತಿಂಗಳಲ್ಲಿ ವೆಲ್ಟರ್‍ವೇಯ್ಟ್ ಚಾಂಪಿಯನ್ ಪಟ್ಟ ಗೆದ್ದ ಮೇಲೆ, ಕಿರಿಯ ಬಾಕ್ಸರ್‍ಗಳ ಅನುಕೂಲಕ್ಕಾಗಿ ತಾವು ಹಿಂದೆ ಗೆದ್ದ ವಿಭಾಗಗಳ ಚಾಂಪಿಯನ್‍ ಪಟ್ಟವನ್ನು ಹಿಂದಿರುಗಿಸುವುದಾಗಿ ಖುದ್ದು ಮೇವೆದರ್ ಅವರೇ ಹೇಳಿದ್ದರು. ಆದರೆ,ನುಡಿದಂತೆ ಅವರು ನಡೆದುಕೊಂಡಿಲ್ಲ. ಇದೀಗ, ಡಬ್ಲ್ಯೂಬಿಒ ಸಂಸ್ಥೆಯ ಕ್ರಮದ ವಿರುದ್ಧ ಅವರು ನ್ಯಾಯಾಲಯದ ಮೊರೆಹೋಗಬಹುದು.


ಡಬ್ಲ್ಯೂಬಿಒ ನಿರ್ಧಾರದ ವಿರುದ್ಧ ಜು. 20ರೊಳಗೆ ಮೇಲ್ಮನವಿ ಸಲ್ಲಿಸಲು ಅವರಿಗೆ ಅವಕಾಶವಿದೆ. ವೆಲ್ಟರ್‍ವೇಯ್ಟ್ ವಿಶ್ವಚಾಂಪಿಯನ್ ಪಟ್ಟ ಹಿಂಪಡೆದಿರುವ ಡಬ್ಲ್ಯೂಬಿಒ, ಅದನ್ನು ಈಗ ಬೇರೊಬ್ಬ ಬಾಕ್ಸರ್‍ಗೆ ನೀಡಲು ಸಜ್ಜಾಗಿದೆ. ಜೂ. 27ರಂದು ನಡೆಯಲಿರುವ ಬ್ರಾಡ್ಲಿ ಹಾಗೂ ಜೆಸ್ಸಿ ವೇಗಸ್ ನಡುವಿನ ಬಾಕ್ಸಿಂಗ್ ಪಂದ್ಯದಲ್ಲಿ ಜಯಗಳಿಸಿ ಕ್ರೀಡಾಳುವಿಗೆ ವೆಲ್ಟರ್ ವೇಯ್ಟ್ ಪಟ್ಟ ನೀಡಲು ಡಬ್ಲ್ಯೂಬಿಒ ಮುಂದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com