ವಿಂಬಲ್ಡನ್ ಟೆನಿಸ್: ಸೆಮಿಫೈನಲ್‍ಗೆ ಸೆರೆನಾ, ಶರಪೋವಾ, ರಾಡ್ವಾಂಸ್ಕಾ ದಾಂಗುಡಿ

ಹಾಲಿ ಚಾಂಪಿಯನ್ ಹಾಗೂ ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಆಲ್ ಇಂಗ್ಲೆಂಡ್ ಚಾಂಪಿಯನ್‍ಶಿಪ್‍ನಲ್ಲಿ...
ಮಾರಿಯಾ ಶರಪೋವಾ ಮತ್ತು ಸೆರೆನಾ ವಿಲಿಯಮ್ಸ್
ಮಾರಿಯಾ ಶರಪೋವಾ ಮತ್ತು ಸೆರೆನಾ ವಿಲಿಯಮ್ಸ್

ಲಂಡನ್ : ಹಾಲಿ ಚಾಂಪಿಯನ್ ಹಾಗೂ ವಿಶ್ವದ  ಅಗ್ರ ಶ್ರೇಯಾಂಕಿತ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಆಲ್ ಇಂಗ್ಲೆಂಡ್ ಚಾಂಪಿಯನ್‍ಶಿಪ್‍ನಲ್ಲಿ ಪ್ರಯಾಸದ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಇನ್ನು, ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ನಂಬರ್ -ಒನ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರು, ಕ್ವಾರ್ಟರ್ ಫೈನಲ್ ಪಂದ್ಯ- ದಲ್ಲಿ ವಿಕ್ಟೋರಿಯಾ ಅಜರೆಂಕಾ ಅವರನ್ನು ಮಣಿಸಿ, ಸೆಮಿಫೈನಲ್‍ಗೆ ಕಾಲಿಟ್ಟಿದ್ದಾರೆ.  ಪುರರುಷರ ಸಿಂಗಲ್ಸ್ ವಿಭಾಗದ ಅಂತಿಮ ಹದಿನಾರರ ಘಟ್ಟದ ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ ಜೊಕೊವಿಚ್, ದ.ಆಫ್ರಿಕಾದ 14ನೇಶ್ರೇಯಾಂಕಿತ ಆಟಗಾರ ಕೆವಿನ್ ಆಂಡರ್ಸನ್ ವಿರುದ್ಧ
ಮಾಡು ಇಲ್ಲವೇ ಮಡಿ ಹೋರಾಟ ನಡೆಸಿ 6-7 (6/8), 6-7 (6/8), 6-1, 6-4, 7-5ರ ಐದು ಸೆಟ್‍ಗಳಲ್ಲಿ ಗೆಲುವು ಪಡೆದರು. ಸೋಮವಾರ ತಡರಾತ್ರಿ ನಡೆದ ಪಂದ್ಯವು ಮಂದ ಬೆಳಕಿನಿಂದಾಗಿ ನಾಲ್ಕು ಸೆಟ್‍ಗಳ ಸಮಬಲ ಕಾದಾಟದೊಂದಿಗೆ ಸ್ಥಗಿತಗೊಂಡಿದ್ದರಿಂದ, ಮಂಗಳವಾರದ ಐದನೇ ಸೆಟ್ ತೀವ್ರ ಕೌತುಕ ಕೆರಳಿಸಿತ್ತು. ಆದರೆ ಈ ನಿರ್ಣಾಯಕ ಸೆಟ್‍ನಲ್ಲಿ ಹೆಜ್ಜೆ ಹೆಜ್ಜೆಗೂ ಪೈಪೋಟಿ ನೀಡಿದ ಆಂಯಂಡರ್ಸನ್ ಅಂತಿಮ ಹಂತದಲ್ಲಿ ಎಡವಿದರು. ಹೀಗಾಗಿ ಸರಿಸುಮಾರು 3 ತಾಸು 47 ನಿಮಿಷಗಳ ಕಾಲ ನಡೆದ ಸುದೀರ್ಘ ಸೆಣಸಾಟದಲ್ಲಿ ಕೊನೆಗೂ ಜೊಕೊವಿಚ್ ಚಾಂಪಿಯನ್ ಎನಿಸಿಕೊಂಡರು.   ಸೆರೆನಾ 4ರ ಘಟ್ಟಕ್ಕೆ ನಂಬರ್ ಒನ್ ಆಟಗಾರ್ತಿ, ಅಮೆರಿಕದ ಸೆರೆನಾ ವಿಲಿಯಮ್ಸ್  ಅವರು, ಬೆಲಾರಸ್‍ನ ವಿಕ್ಟೋರಿಯೀ ಅಜರೆಂಕಾ ಅವರನ್ನು 3-6, 6-2, 6-3 ಸೆಟ್ ಗಳ ಅಂತರದಲ್ಲಿ ಮಣಿಸಿ, ಉಪಾಂತ್ಯಕ್ಕೆ ಕಾಲಿಟ್ಟರು. ತಮ್ಮ ಸೆಮಿಫೈನಲ್ ಪಂದ್ಯದಲ್ಲಿ ಸೆರೆನಾ ಅವರು ರಷ್ಯಾದ ಮಾರಿಯಾ ಶರಪೋವಾ ಜೊತೆಗೆ ಸೆಣಸಲಿದ್ದಾರೆ.


ರಾಡ್ವಾಂಸ್ಕಾಗೆ ಗೆಲುವು
ಮಹಿಳೆಯರ ಸಿಂಗಲ್ಸ್ ವಿಭಾಗದ ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪೊಲೆಂಡ್‍ನ ಅಗ್ನಿಸ್ಕಾ ರಾಡ್ವಾಂಸ್ಕಾ ಅವರು, ಅಮೆರಿಕದ ಮ್ಯಾಡಿಸನ್ ಕೀಸ್ ರುದ್ಧ 6-7(3-7), 6-3, 3-6 ಸೆಟ್ ಗಳ ಅಂತರ ಲ್ಲಿ ಸೋಲಿಸಿ ಸೆಮಿಫೈನಲ್‍ಗೆ ಕಾಲಿಟ್ಟರು.  

ಶರಪೋವಾ ಸೆಮಿಗೆ
ಇನ್ನು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ರಷ್ಯನ್ ಚೆಲುವೆ ಮರಿಯಾ ಶರಪೋವಾ ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದ್ದಾರೆ.ಮಂಗಳವಾರ ಸೆಂಟರ್ ಕೋರ್ಟ್‍ನಲ್ಲಿ ನಡೆದ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಶ್ರೇಯಾಂಕ ರಹಿತ ಆಟಗಾರ್ತಿ ಅಮೆರಿಕಾದ ಕೊಕೊ
ವಾಂಡಿವೆಘೆ ವಿರುದ್ಧ 6-3, 6-3ರ ಎರಡು ನೇರ ಸೆಟ್‍ಗಳ ಆಟದಲ್ಲಿ ಶರಪೋವಾ ಜಯ ಪಡೆದರು.

ಮುಗುರೂಜಾ ಉಪಾಂತ್ಯಕ್ಕೆ
ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ನಡೆದ ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ಪೇನ್‍ನ ಗಾರ್ಬೈನ್ ಮುಗುರುಜಾ ಅವರು, ಸ್ವಿಜರ್ಲೆಂಡ್‍ನ ಟಿಮಿಯಾ ಬ್ಯಾಸಿನ್ಸ್‍ಕಿ ಅವರನ್ನು 7-5, 6-3 ಸೆಟ್‍ಗಳ ಅಂತರದಲ್ಲಿ ಸೋಲಿಸಿದರು.

ಪೇಸ್-ಹಿಂಗಿಸ್ ಕ್ವಾರ್ಟರ್‍ಗೆ
ಡಬಲ್ಸ್ ನಲ್ಲಿ ನಿರಾಸೆ ಅನುಭವಿಸಿದ ಭಾರತದ ಡಬಲ್ಸ್ ಪ್ರವೀಣ ಲಿಯಾಂಡರ್ ಪೇಸ್ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯ ಮಿಶ್ರ ಡಬಲ್ಸ್  ಗೆಲುವಿನ ಅಭಿಯಾನವನ್ನು ಮುಂದುವರೆಸಿದ್ದಾರೆ. ಸ್ವಿಸ್ ಆಟಗಾರ್ತಿ ಮಾರ್ಟಿನಾ ಹಿಂಗಿಸ್ ಜತೆಗೆ ಅವರಿಂದು ಪ್ರೀ-ಕ್ವಾರ್ಟರ್ ಫೈನಲ್‍ನಲ್ಲಿ ಜಯ ಸಾಧಿಸಿ ಅಂತಿಮ ಎಂಟರ ಘಟ್ಟಕ್ಕೆ ನಡೆದರು. ನಂ.2 ಕೋರ್ಟ್‍ನಲ್ಲಿ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಈ ಇಂಡೋ-ಸ್ವಿಸ್ ಜೋಡಿ ನ್ಯೂಜಿಲೆಂಡ್‍ನ ಆರ್ಟೆಮ್ ಸಿಟಾಕ್ ಹಾಗೂ ಆಸ್ಟ್ರೇಲಿಯಾದ ಅನಸ್ಟಾಸಿಯಾ ರೋಡಿನೋವಾ ಜೋಡಿಯನ್ನು 6-2, 6-2ರ ಎರಡು ನೇರ ಸೆಟ್‍ಗಳ ಕಾದಾಟದಲ್ಲಿ ಮಣಿಸಿತು. 55 ನಿಮಿಷಗಳ ಕಾಲ ನಡೆದ ಸೆಣಸಾಟದಲ್ಲಿ ಪ್ರತೀ ಸೆಟ್‍ನಲ್ಲಿ ಕಿವೀಸ್ ಹಾಗೂ ಆಸೀಸ್ ಜೋಡಿ ಜಯಿಸಿದ್ದು ಎರಡು ಗೇಮ  ಗಳನ್ನಷ್ಟೆ. ಆಕ್ರಮಣಕಾರಿ ಹೋರಾಟ ನಡೆಸಿದ ಪೇಸ್ ಮತ್ತು ಹಿಂಗಿಸ್ ಸುನಾಯಾಸ ಗೆಲುವಿನೊಂದಿಗೆ ಮುಂದಿನ ಸುತ್ತಿಗೆ ಅರ್ಹತೆ ಪಡೆದರು.

ಭಾರತದ ಸವಾಲು
ದಿನದಾಂತ್ಯಕ್ಕೆ ನಡೆಯಲಿರುವ ಮಿಶ್ರ ಡಬಲ್ಸ್ ನಲ್ಲಿ ಭಾರತದ ಸಾನಿಯಾ ಮಿರ್ಜಾ ಹಾಗೂ ಆಕೆಯ ಬ್ರೆಜಿಲ್‍ನ ಜತೆಯಾಟಗಾರ ಬ್ರೂನೊ ಸಾರೆಸ್ ಜೋಡಿ ಕ್ರೊವೇಷಿಯಾದ ಮರಿನ್ ಡ್ರಾಗಾಂಜಾ ಹಾಗೂ ಅನಾ ಕೊಂಜುಹ್ ವಿರುದ್ಧ ಸೆಣಸಲಿದ್ದಾರೆ. ಅಂತೆಯೇ ಪುರುಷರ ಡಬಲ್ಸ್  ವಿಭಾಗದಲ್ಲಿ ಮಿಂಚಿನ ಪ್ರದರ್ಶನ ನೀಡುತ್ತಾ ಸಾಗಿರುವ ರೋಹನ್ ಬೋಪಣ್ಣ ಮತ್ತು ಫ್ಲೋರಿನ್ ಮರ್ಗಿಯಾ ಜೋಡಿಗೆ ಕಠಿಣ ಸವಾಲು ಎದುರಾಗಿದೆ. ಅಗ್ರ ಶ್ರೇಯಾಂಕಿತ ಜೋಡಿಯಾದ ಮೈಕ್ ಹಾಗೂ ಬಾಬ್ ಬ್ರಯಾನ್ ಸೋದರರ ವಿರುದ್ಧ ನಡೆಯಲಿರುವ ಕ್ವಾರ್ಟರ್ ಫೈನಲ್ ಕಾದಾಟಕ್ಕೆ ಬೋಪಣ್ಣ ಜೋಡಿ ಸನ್ನದ್ಧವಾಗಿತ್ತು. ಇನ್ನು ಬಾಲಕಿಯರ ವಿಭಾಗದಲ್ಲಿ 15ನೇ ಶ್ರೇಯಾಂಕಿತೆ ಪ್ರಾಂಜಲಾ ಯಾಡ್ಲಪಲ್ಲಿ ಅಮೆರಿಕಾದ ಮಿಖಾಯೇಲಾ ಗೋರ್ಡನ್ ವಿರುದ್ಧ ಸೆಣಸಲಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com