ವಿಶ್ವ ಚಾಂಪಿಯನ್‍ಶಿಪ್‍ಗೆ ಯೋಗೇಶ್ವರ್

ಲಂಡನ್ ಒಲಿಂಪಿಕ್ಸ್ ಕಂಚು ಪದಕ ವಿಜೇತ ಯೋಗೇಶ್ವರ ದತ್ ಹಾಗೂ ಯುವ ಬಾಕ್ಸರ್ ನಾರ್‍ಸಿಂಗ್ ಯಾದವ್ ಮಂಗಳವಾರ.....
ಕುಸ್ತಿಪಟು ಯೋಗೇಶ್ವರ್
ಕುಸ್ತಿಪಟು ಯೋಗೇಶ್ವರ್

ನವದೆಹಲಿ: ಲಂಡನ್ ಒಲಿಂಪಿಕ್ಸ್ ಕಂಚು ಪದಕ ವಿಜೇತ ಯೋಗೇಶ್ವರ ದತ್ ಹಾಗೂ ಯುವ ಬಾಕ್ಸರ್ ನಾರ್‍ಸಿಂಗ್ ಯಾದವ್ ಮಂಗಳವಾರ ವಿಶ್ವ ರೆಸ್ಲಿಂಗ್ (ಕುಸ್ತಿ) ಚಾಂಪಿಯನ್‍ಶಿಪ್‍ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಇಲ್ಲಿನ ಇಂದಿರಾಗಾಂಧಿ  ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಆಯ್ಕೆ ಟ್ರಯಲ್ಸ್ ಯೋಗೇಶ್ವರ್ ಹಾಗೂ ನಾರ್‍ಸಿಂಗ್ ಜಯ ಸಾಧಿಸಿದರೆಂದು ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪುರುಷರ 65 ಕೆ.ಜಿ. ಫ್ರೀಸ್ಟೈಲ್  ವಿಭಾಗದ ಪ್ರಾಥಮಿಕ ಹಂತದ ಸ್ಪರ್ಧೆಯಲ್ಲಿ ಬೈ ಪಡೆದಿದ್ದ ಯೋಗೇಶ್ವರ್, ಅಂತಿಮ ಬೌಟ್‍ನಲ್ಲಿ ಅಮಿತ್ ಕುಮಾರ್ ಧನ್‍ಕಾರ್ ವಿರುದ್ಧ ಕಠಿಣಕಾರಿ ಸೆಣಸಾಟದಲ್ಲಿ ಪ್ರಯಾಸದ ಗೆಲುವು ಪಡೆದರು. ಆರು ನಿಮಿಷಗಳ ಜಿದ್ದಾಜಿದ್ದಿನ ಸೆಣಸಾಟದಲ್ಲಿ ಯೋಗೇಶ್ವರ್ 6-3ರಿಂದ ಜಯ ಪಡೆದರು. ಇನ್ನು ಮತ್ತೋರ್ವ ಕುಸ್ತಿಪಟು ನಾರ್ ಸಿಂಗ್ ಮತ್ತು ಪ್ರವೀಣ್ ರಾಣಾ ನಡುವಣದ ಕುಸ್ತಿಯೂ ಕತ್ತಿಯ ಅಲಗಿನ ಮೇಲಿನ ಕಸರತ್ತಿನಂತಿತ್ತು. ಅಂತಿಮವಾಗಿ
ಈ ಪ್ರಬಲ ಸೆಣಸಾಟದಲ್ಲಿ ನಾರ್‍ಸಿಂಗ್ 6-5ರಿಂದ ಜಯ ಪಡೆದು ವಿಶ್ವ ಚಾಂಪಿಯನ್‍ಶಿಪ್‍ಗೆ ಅರ್ಹತೆ ಗಿಟ್ಟಿಸಿಕೊಂಡರು. ಏತನ್ಮಧ್ಯೆ 57 ಕೆ.ಜಿ. ವಿಭಾಗದ ಮತ್ತೊಂದು ಹಣಾಹಣಿಯಲ್ಲಿ ಅಮಿತ್ ಕುಮಾರ್ ಸಂದೀಪ್ ತೋಮಾರ್ ವಿರುದ್ದ 1-2ರ ಹಿನ್ನಡೆಯ ಹೊರತಾಗಿಯೂ ಕೊನೆಗೆ 3-2ರ ಗೆಲುವಿನೊಂದಿಗೆ ನಿಟ್ಟುಸಿರಿಟ್ಟರು.

ಇನ್ನುಳಿದಂತೆ ನರೇಶ್ ಕುಮಾರ್ (86 ಕೆ.ಜಿ.), ಮೌಸಮ್  ಖತ್ರಿ (97 ಕೆ.ಜಿ.) ಹಾಗೂ ಸುಮಿತ್ 125 ಕೆ.ಜಿ. ವಿಭಾಗದಲ್ಲಿ ಗೆಲುವು ಸಾ„ಸಿ ವಿಶ್ವ ಚಾಂಪಿಯನ್‍ಶಿಪ್‍ಗೆ ಅರ್ಹತೆ ಪಡೆದರು. ಅಂದ್ಹಾಗೆ ಸೆಪ್ಟೆಂಬರ್ 7ರಿಂದ 12ರವರಗೆ ಅಮೆರಿಕಾದ ಲಾಸ್ ವೇಗಾಸ್ ನಲ್ಲಿ ವಿಶ್ವ ಕುಸ್ತಿ ಚಾಂಪಿಯನ್‍ಶಿಪ್ ನಡೆಯಲಿದ್ದು, ಇದು ಮುಂದಿನ ವರ್ಷ ರಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕೂಟದ ಮೊದಲ ಸುತ್ತಿನ ಅರ್ಹತಾ ಚಾಂಪಿಯನ್‍ಶಿಪ್ ಕೂಡ ಎನಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com