ಮೇಲುಸ್ತುವಾರಿ ಸಮಿತಿಗೆ ಅಶ್ವಿನಿ ನಾಚಪ್ಪ ಅಧ್ಯಕ್ಷೆ

, ದೇಶದಎಲ್ಲಾ ಸಾಯ್ ಕೇಂದ್ರಗಳ ಮೇಲುಸ್ತುವಾರಿಗಾಗಿ ಸಮಿತಿಯೊಂದನ್ನು ರಚಿಸಿದ್ದು, ಅದಕ್ಕೆ ಕರ್ನಾಟಕದ ಮಾಜಿ ಅಥ್ಲೀಟ್ ಅಶ್ವಿನಿ ನಾಚಪ್ಪ.....
ಅಶ್ವಿನಿ ನಾಚಪ್ಪ
ಅಶ್ವಿನಿ ನಾಚಪ್ಪ

ನವೆದಹಲಿ: ಇತ್ತೀಚೆಗೆ ಕೇರಳದ ಆಲೆಪ್ಪಿಯಲ್ಲಿನ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ ಕೇಂದ್ರದಲ್ಲಿ ಮೂವರು ವಿದ್ಯಾರ್ಥಿನಿಯರು ಆತ್ಮಹತ್ಯೆಗೆಯತ್ನಿಸಿದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಕ್ರೀಡಾ ಸಚಿವಾಲಯ, ದೇಶದ
ಎಲ್ಲಾ ಸಾಯ್ ಕೇಂದ್ರಗಳ ಮೇಲುಸ್ತುವಾರಿಗಾಗಿ ಸಮಿತಿಯೊಂದನ್ನು ರಚಿಸಿದ್ದು, ಅದಕ್ಕೆ ಕರ್ನಾಟಕದ ಮಾಜಿ ಅಥ್ಲೀಟ್ ಅಶ್ವಿನಿ ನಾಚಪ್ಪ ಅಧ್ಯಕ್ಷತೆಯನ್ನಾಗಿ ನಿಯುಕ್ತಿಗೊಳಿಸಿದೆ ಎಂದು`ಬ್ಯುಸಿನೆಸ್ ಸ್ಟಾಂಡರ್ಡ್' ವರದಿ ಮಾಡಿದೆ.

ಸಮಿತಿ ಇಂತಿದೆ: ಅಶ್ವಿನಿ ನಾಚಪ್ಪ (ಅಧ್ಯಕ್ಷೆ), ಗೋಪಿಚಂದ್, ಜಸ್ಪಾಲ್ ಸಂಧು (ವಿಶ್ವವಿದ್ಯಾಲಯ ಧನ ಸಹಾಯ ಆಯೋಗದಿಂದ), ಮಾಳವ್ ಶ್ರಾಫ್, ಭೋಗೇಶ್ವರ್ ಬರುವಾ, ಕೆ.ಪಿ. ಮೋಹನ್ (ಪತ್ರಕರ್ತ), ಬಲ್ದೇವ್ ಸಿಂಗ್ (ಹಾಕಿ ತಜ್ಞ) ಹಾಗೂ ನೀನಾ ಪಿ. ನಾಯಕ್ (ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗದ ಮಾಜಿ ಸದಸ್ಯ ಮಾ ಸದಸ್ಯ).

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com