ಜ್ವಾಲಾ-ಅಶ್ವಿನಿ ವಿರುದ್ಧ ಪಿತೂರಿ ಇಲ್ಲ: ಗೋಪಿಚಂದ್

ಭಾರತದ ಮಹಿಳಾ ಡಬಲ್ಸ್ ಜೋಡಿ ಜ್ವಾಲಾಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪಗೆ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ (ಬಿಎಐ) ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್ ಎಐ)ದಿಂದ ಸಿಗುವ ಸಕಲ ನೆರವು ಸಿಗಲಿದೆ ....
ಜ್ವಾಲಾಗುಟ್ಟಾ ಮತ್ತು ಗೋಪಿಚಂದ್
ಜ್ವಾಲಾಗುಟ್ಟಾ ಮತ್ತು ಗೋಪಿಚಂದ್
Updated on

ನವದೆಹಲಿ : ಭಾರತದ ಮಹಿಳಾ ಡಬಲ್ಸ್ ಜೋಡಿ ಜ್ವಾಲಾಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪಗೆ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ (ಬಿಎಐ) ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್ ಎಐ)ದಿಂದ ಸಿಗುವ ಸಕಲ ನೆರವು ಸಿಗಲಿದೆ ಎಂದು ಭಾರತದ ಮುಖ್ಯ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ ಗೋಪಿಚಂದ್ ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

 ಸಿಂಗಲ್ಸ್  ಆಟಗಾರಿಗೆ ಸಿಗುವ ಮಾನ್ಯತೆ ಹಾಗೂ ಪ್ರೋತ್ಸಾಹವನ್ನು ಡಬಲ್ಸ್ ಆಟಗಾರರಿಗೆ ನೀಡುತ್ತಿಲ್ಲ. ಇದರಿಂದಲೇ ನಾವು ಒಲಿಂಪಿಕ್ಸ್ ಪೋಡಿಯಂ ಯೋಜನೆಯಿಂದ ಹೊರಗುಳಿಯುವಂತಾಗಿದೆ. ಇದಕ್ಕೆಲ್ಲಾ ರಾಷ್ಟ್ರೀಯ ಕೋಚ್ ಗೋಪಿಚಂದ್ ಕಾರಣ ಎಂದು ಇತ್ತೀಚಿನ ಕೆನಡಾ ಓಪನ್ ನಲ್ಲಿ ಚಾಂಪಿಯನ್ ಆದ ಬಳಿಕ ಮಾಧ್ಯಮಗಳಲ್ಲಿ ಜ್ವಾಲಾ-ಅಶ್ವಿನಿ ಜೋಡಿ ಆರೋಪಿಸಿತ್ತು. ಈ ಆಪಾದನೆಗಳ ಕುರಿತು ಬುಧವಾರ ಸುದ್ದಿಗಾರರ ಜತೆಗೆ ಮಾತನಾಡಿದ ಗೋಪಿ ಚಂದ್, ``ಜ್ವಾಲಾ ಮತ್ತು ಅಶ್ವಿನಿ ಈ ಕುರಿತು ಆಗಾಗ್ಗೆ ಇಂಥಹ ಆರೋಪಗಳನ್ನು ಮಾಡುವುದನ್ನು ಬಿಡಬೇಕು. ಅವರ ವಿರುದ್ಧ ನಾನು ಯಾವುದೇ ಪಿತೂರಿ ಮಾಡಿಲ್ಲ. ವಾಸ್ತವವಾಗಿ ಅವರ ಸಮಸ್ಯೆ ಏನು ಎಂಬುದರ ಬಗ್ಗೆ ಅವರು ಮೊದಲು ಸ್ಪಷ್ಟತೆ ತಾಳಬೇಕು. ವೃಥಾ ಟೀಕೆ ಸರಿಯಲ್ಲ'' ಎಂದರು.

ಪ್ರಸ್ತುತ ಅವರು ಯಾವ ಟೂರ್ನಿಯಲ್ಲಿ ಆಡುತ್ತಾರೋ ಅದಕ್ಕೆ ಭಾರತೀಯ ಕ್ರೀಡಾ ಪ್ರಾಧಿಕಾರ ಹಾಗೂ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ ಮತ್ತು ಭಾರತ ಸರ್ಕಾರದಿಂದ ನೆರವು ಸಿಗುತ್ತದೆ. ಮೇಲಾಗಿ ನಾವು ಎರಡು  ತರಬೇತಿ ಶಿಬಿರಗಳನ್ನು ಇಂಡೋನೇಷ್ಯಾದ ಕೋಚ್ ಮಾರ್ಗದರ್ಶನದಲ್ಲಿ  ನಡೆಸುತ್ತಿದ್ದೇವೆ. ಇದರಲ್ಲಿ ಡಬಲ್ಸ್ ಕೋಚ್ ಕೂಡ ಇದ್ದಾರೆ. ಕಳೆದ ಕೆಲ ವರ್ಷ ಗಳಿಂದ ಅವರು ಯಾವುದಕ್ಕಾಗಿ ಬೇಡಿಕೆ ಇಟ್ಟಿದ್ದರೋ ಅದನ್ನು ಈಡೇರಿಸಲಾಗಿದೆ'' ಎಂದೂ ಗೋಪಿಚಂದ್ ಹೇಳಿದ್ದಾರೆ.

ಇನ್ನು ಟಾಪ್ ಯೋಜನೆಯಲ್ಲಿ  ಜ್ವಾಲಾ-ಅಶ್ವಿನಿ ಈರ್ವರ ಹೆಸರೂ ಇದೆ. ಸಂದೇಹ ಬೇಡ ಎಂದು ಗೋಪಿಚಂದ್ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com