ಐಪಿಎಲ್ ಹಗರಣ: ಶಿಲ್ಪಾ ಶೆಟ್ಟಿ ಮೇಲೆ ಹದ್ದಿನ ಕಣ್ಣು

ಐಪಿಎಲ್ ಬೆಟ್ಟಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ರಾಯಲ್ಸ್ ತಂಡದ ಸಹ ಮಾಲೀಕ ರಾಜ್ ಕುಂದ್ರಾ ಅವರ ವಿರುದ್ಧ ತೀರ್ಪು ಬಂದಿದ್ದಾಯ್ತು.
ಶಿಲ್ಪಾ ಶೆಟ್ಟಿ(ಸಂಗ್ರಹ ಚಿತ್ರ)
ಶಿಲ್ಪಾ ಶೆಟ್ಟಿ(ಸಂಗ್ರಹ ಚಿತ್ರ)
Updated on

ಐಪಿಎಲ್ ಬೆಟ್ಟಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ರಾಯಲ್ಸ್ ತಂಡದ ಸಹ ಮಾಲೀಕ ರಾಜ್ ಕುಂದ್ರಾ ಅವರ ವಿರುದ್ಧ ತೀರ್ಪು ಬಂದಿದ್ದಾಯ್ತು. ಈಗ, ಅವರ ಪತ್ನಿ ಹಾಗೂ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕೂಡ ಐಪಿಎಲ್ ಹಗರಣದಲ್ಲಿ ಭಾಗಿಯಾಗಿರುವ ಅನುಮಾನಗಳು ಎದ್ದಿದ್ದು, ಆಕೆಯ ಮೇಲೆ ಹದ್ದಿನ ಕಣ್ಣಿಡಲಾಗಿದೆ.

ಡಿಎನ್‍ಎ ನೀಡಿರುವ ವರದಿಯನ್ನು ಉಲ್ಲೇಖಿಸಿ ಒನ್ ಇಂಡಿಯಾ ಈ ಬಗ್ಗೆ ವಿಸ್ತೃತ ವರದಿ ನೀಡಿದ್ದು, ಅದರಲ್ಲಿ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ತಮ್ಮ ಪತಿಯೊಂದಿಗೆ ಜಂಟಿ ಷೇರು ಹೊಂದಿದ್ದು, ಅದರ ಬೆನ್ನಲ್ಲೇ ಜೈಪುರ ಇಂಟರ್‍ನ್ಯಾಷನಲ್ ಕ್ರಿಕೆಟ್ ಲಿಮಿಟೆಡ್‍ಗೆ ರು. 5.7 ಕೋಟಿ ಹಣವನ್ನು ಖುದ್ದು ತೊಡಗಿಸಿ, ಪುನಃ ಅದನ್ನು ವಾಪಸ್ ಪಡೆದ ವಿಚಾರಗಳು ಅನುಮಾನಗಳಿಗೆ ಎಡೆಮಾಡಿವೆ ಎಂದು ಹೇಳಲಾಗಿದೆ.

ಜಂಟಿ ಷೇರು: 2009ರಲ್ಲಿ ರಾಜ್ ಕುಂದ್ರಾ ಅವರನ್ನು ಮದುವೆಯಾದ ಶಿಲ್ಪಾ, ರಾಜಸ್ಥಾನ ರಾಯಲ್ಸ್ ತಂಡದ ಫ್ರಾಂಚೈಸಿಯಲ್ಲಿ ತಮ್ಮ ಪತಿ ಜೊತೆಗೆ ಶೇ. 11.7ರಷ್ಟು ಷೇರು ತೊಡಗಿಸಿದ್ದರು. ಇದಾಗಿ ಒಂದು ವರ್ಷದಲ್ಲಿ, ಅಂದರೆ 2010ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಮಾಲೀಕತ್ವ ಹೊಂದಿದ್ದ ಜೈಪುರ ಇಂಟರ್‍ನ್ಯಾಷನಲ್ ಕ್ರಿಕೆಟ್ ಲಿಮಿಟೆಡ್ (ಜೆಐಸಿಎಲ್)ಗೆ ರು. 5.7 ಕೋಟಿ ಹಣ ನೀಡಿದ್ದರು. ರಾಜಸ್ಥಾನ ತಂಡದ ಕೆಲವೊಂದು ಪ್ರಾಯೋಕತ್ವದ ಹಕ್ಕುಗಳನ್ನು ತಮ್ಮ ಹೆಸರಿನಲ್ಲಿ ಪಡೆಯುವ ಉದ್ದೇಶದಿಂದ ಜೆಐಸಿಎಲ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದ ಶಿಲ್ಪಾ, ಈ ಒಪ್ಪಂದದ ಅನ್ವಯ ನೀಡಬೇಕಿದ್ದ ಮೊತ್ತದಲ್ಲಿ ರು. 5.7 ಕೋಟಿ ಹಣವನ್ನು ಮುಂಗಡವಾಗಿ ನೀಡಿದ್ದಾರೆಂದು ಆಗ ಹೇಳಲಾಗಿತ್ತು.

ಆದರೆ, 2014ರಲ್ಲಿ ಇದ್ದಕ್ಕಿದ್ದಂತೆ ಈ ಎಲ್ಲಾ ಹಣವನ್ನು ಜೆಐಸಿಎಲ್‍ನಿಂದ ಶಿಲ್ಪಾ ವಾಪಸು ಪಡೆದರು. 2013ರ ಐಪಿಲ್ ಬೆಟ್ಟಿಂಗ್ ಹಗರಣದ ತನಿಖೆ ನಡೆಸಿದ್ದ ನ್ಯಾ. ಮುದ್ಗಲ್ ಸಮಿತಿ ತನ್ನ ವರದಿಯನ್ನು 2014ರ ಫೆ. 13ರಂದು ಸಲ್ಲಿಸಿತ್ತು. ಇದಾಗಿ, ಕೇವಲ ಒಂದು ವಾರದಲ್ಲೇ ಶಿಲ್ಪಾ ಅವರು ಜೆಐಸಿಎಲ್‍ನಿಂದ ತಮ್ಮ ಹಣವನ್ನು ವಾಪಸ್ ಪಡೆದಿದ್ದರ ಬಗ್ಗೆ ಹಲವಾರು ಮಾಧ್ಯಮಗಳು ಅನುಮಾನ ವ್ಯಕ್ತಪಡಿಸಿದ್ದವು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com