ವಿಜೇಂದರ್ ಬೆಂಬಲಕ್ಕೆ ಕ್ರೀಡಾ ಸಚಿವ ಸೋನೊವಾಲ್

ವೃತ್ತಿಪರ ಬಾಕ್ಸಿಂಗ್ ನತ್ತ ಮುಖ ಮಾಡಿರುವ ಖ್ಯಾತ ಬಾಕ್ಸರ್ ವಿಜೇಂದರ್ ಸಾಕಷ್ಟು ಟೀಕೆ ಎದುರಿಸಿದ್ದು ಕ್ರೀಡಾ ಸಚಿವ ಸರ್ಬಾನಂದ ಸೋನೊವಾಲ್ ಬೆಂಬಲಕ್ಕೆ ನಿಂತಿದ್ದಾರೆ.
ವಿಜೇಂದರ್ ಸಿಂಗ್ (ಸಂಗ್ರಹ ಚಿತ್ರ)
ವಿಜೇಂದರ್ ಸಿಂಗ್ (ಸಂಗ್ರಹ ಚಿತ್ರ)

ನವದೆಹಲಿ: ವೃತ್ತಿಪರ ಬಾಕ್ಸಿಂಗ್ ನತ್ತ ಮುಖ ಮಾಡಿರುವ ಖ್ಯಾತ ಬಾಕ್ಸರ್ ವಿಜೇಂದರ್
ಸಿಂಗ್ ಸಾಕಷ್ಟು ಟೀಕೆ ಎದುರಿಸಿದ್ದು ಕ್ರೀಡಾ ಸಚಿವ ಸರ್ಬಾನಂದ ಸೋನೊವಾಲ್ ಬೆಂಬಲಕ್ಕೆ ನಿಂತಿದ್ದಾರೆ.

ವಿಜೇಂದರ್ ಸಿಂಗ್ ನ್ನು ಭೇಟಿ ಮಾಡಿದ ಸರ್ಬಾನಂದ ಸೋನೊವಾಲ್, ಟೀಕೆಗಳ ಬಗ್ಗೆ ಗಮನ ಹರಿಸದೇ ವೃತ್ತಿಪರ ಬಾಕ್ಸಿಂಗ್ ಗೆ ಹೆಚ್ಚು ಗಮನ ವಹಿಸುವಂತೆ ಸಲಹೆ ನೀಡಿದ್ದಾರೆ. ಸಚಿವ ಸೋನೊವಾಲ್ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ ಭಾರತ ತಂಡದ ಪರ ಮೂರು ಒಲಂಪಿಕ್ಸ್ ನಲ್ಲಿ ಭಾಗವಹಿಸಿದ ನಂತರ ವೃತ್ತಿಪರ ಬಾಕ್ಸಿಂಗ್ ಕಡೆ ಗಮನ ಹರಿಸುವುದು ನನ್ನ ಮುಂದಿನ ಹೆಜ್ಜೆ ಎಂದು ಅವರಿಗೆ ಮನವರಿಕೆ ಮಾಡಿದೆ. ಈ ನಿರ್ಧಾರಕ್ಕೆ ಅವರು ಸಂಪೂರ್ಣ ಬೆಂಬಲ ನೀಡಿ ಶುಭಕೋರಿದ್ದಾರೆ ಎಂದು ವಿಜೇಂದರ್ ಸಿಂಗ್ ತಿಳಿಸಿದರು.

ನನ್ನ ನಿರ್ಧಾರದಿಂದ ವ್ಯಕ್ತವಾಗಿರುವ ಪ್ರತಿಕ್ರಿಯೆಗಳ ಬಗ್ಗೆ ಅವರು ತಿಳಿದಿದ್ದಾರೆ. ಹಾಗಾಗಿ ಅವರು ಟೀಕೆಗಳ ಬಗ್ಗೆ ತಲೆಕೆಡಿಸಿಕೊಳ್ಳಬಾರದು ಎಂದು ಸಲಹೆ ನೀಡಿದ್ದಾರೆ. ಸಚಿವರು ಮ್ಯಾನಿ ಪ್ಯಾಕ್ವಿಯೋ ಮತ್ತು ಫ್ಲೋಯ್ಡ್ ಮೇವೆದರ್ ಅವರ ಪಂದ್ಯವನ್ನು ನೋಡಿದ್ದು, ಅದನ್ನು ಆನಂದಿಸಿದ್ದಾರೆಂದು ತಿಳಿಸಿದರು ಎಂದೂ ವಿಜೇಂದರ್ ಹೇಳಿದ್ದಾರೆ. ವಿಜೇಂದರ್ ಸೆಪ್ಟೆಂಬರ್ ನಲ್ಲಿ ಲಂಡನ್ ನಲ್ಲಿ ನಡೆಯುತ್ತಿರುವ ವೃತ್ತಿಪರ ಬಾಕ್ಸಿಂಗ್ ಗೆ ಪದಾರ್ಪಣೆ ಮಾಡಲಿದ್ದು ಡಿಸೆಂಬರ್ ನಲ್ಲಿ ಮೊದಲ ಬಾರಿಗೆ ಬಾಕ್ಸಿಂಗ್ ರಿಂಗ್ ಗೆ ಇಳಿಯಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com