ಬ್ಲಾಟರ್ ಮೇಲೆ ನಕಲಿ ನೋಟು ಸುರಿದು ಅಪಮಾನ

ರಾಜಕಾರಣಿಗಳಿಗೆ ಶೂ ಎಸೆದು ಅಪಮಾನ ಮಾಡುವುದನ್ನು ನಾವು ನೋಡಿದ್ದೇವೆ. ಇದೇ ರೀತಿ ಭ್ರಷ್ಟಾಚಾರ ಪ್ರಕರಣದಿಂದ ಫಿಫಾ ತತ್ತರಿಸಿದ ನಂತರ ಅಧ್ಯಕ್ಷ ಸ್ಥಾನಕ್ಕೆ ...
ಸೆಪ್ ಬ್ಲಾಟರ್
ಸೆಪ್ ಬ್ಲಾಟರ್

ಜ್ಯುರಿಚ್: ರಾಜಕಾರಣಿಗಳಿಗೆ ಶೂ ಎಸೆದು ಅಪಮಾನ ಮಾಡುವುದನ್ನು ನಾವು ನೋಡಿದ್ದೇವೆ. ಇದೇ ರೀತಿ ಭ್ರಷ್ಟಾಚಾರ ಪ್ರಕರಣದಿಂದ ಫಿಫಾ ತತ್ತರಿಸಿದ ನಂತರ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಸೆಪ್ ಬ್ಲಾಟರ್ ಅವರಿಗೆ ಸೋಮವಾರ ಸಾರ್ವಜನಿಕವಾಗಿ ಅಪಮಾನ ಮಾಡಲಾಗಿದೆ. ಆದರೆ ಇಲ್ಲಿ ಬ್ಲಾಟರ್ ಮೇಲೆ ಶೂ ಎಸೆಯದೇ, ನಕಲಿ ನೋಟಿನಕಂತೆಯನ್ನು ಎಸೆಯುವ ಮೂಲಕ ಫಿಫಾದಲ್ಲಿನ ಭ್ರಷ್ಟಾಚಾರವನ್ನು ಖಂಡಿಸಲಾಗಿದೆ.

ಇಲ್ಲಿನ ಫಿಫಾ ಕೇಂದ್ರ ಕಚೇರಿಯಲ್ಲಿ ಸಂಸ್ಥೆಯ ಆಡಳಿತ ಮಂಡಳಿಯಲ್ಲಿನ ಬದಲಾವಣೆ ಹಾಗೂ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯ ವೇಳೆ, ಬ್ರಿಟನ್‌ನ ಹಾಸ್ಯಗಾರ ಸಿಮೊನ್ ಬ್ರೊಡ್ಕಿನ್(ಲೀ ನೆಲ್ಸನ್) ವೇದಿಕೆಯ ಮೇಲೆ ನಕಲಿ ನೋಟಿನ ಕಂತೆ ಎಸೆದಿದ್ದಾರೆ.

ನೆಲ್ಸನ್ ಬ್ರಿಟನ್‌ನಲ್ಲಿನ ಖ್ಯಾತ ಹಾಸ್ಯಗಾರನಾಗಿದ್ದಾರೆ. ಪ್ರಮುಖ ವ್ಯಕ್ತಿಗಳೊಂದಿಗೆ ಕಾಣಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಭದ್ರತಾ ಸಿಬ್ಬಂದಿ ಈತನನ್ನು ತಡೆಯುವಲ್ಲಿ ಯಶಸ್ವಿಯಾಗುತ್ತಾರೆ.

2014ರ ಫಿಫಾ ವಿಶ್ವಕಪ್ ವೇಳೆ ನೆಲ್ಸನ್ ಲುಟನ್ ವಿಮಾನ ನಿಲ್ದಾಣದಿಂದ ಮಿಯಾಮಿವರೆಗೂ ಇಂಗ್ಲೆಂಡ್ ವಿಶ್ವಕಪ್ ಫುಟ್ಬಾಲ್ ತಂಡದೊಂದಿಗೆ ಆಗಮಿಸಲು ಪ್ರಯತ್ನಿಸಿ ಸುದ್ದಿಯಾಗಿದ್ದರು.

ಚುನಾವಣೆಗೆ ಮುಹೂರ್ತ ಫಿಕ್ಸ್
ಸೆಪ್ ಬ್ಲಾಟರ್ ಅವರ ರಾಜಿನಾಮೆಯಿಂದ ತೆರವಾಗಿರುವ ಫಿಫಾ ಅಧ್ಯಕ್ಷ ಸ್ಥಾನಕ್ಕೆ ಮುಂದಿನ ವರ್ಷ ಫೆಬ್ರುವರಿ 26ರಂದು ಚುನಾವಣೆ ನಡೆಸಲು ನಿರ್ಧರಿಸಲಾಗಿದೆ.

ಸೋಮವಾರ ಫಿಫಾ ಮುಖ್ಯ ಕಚೇರಿಯಲ್ಲಿ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಗಿದ್ದು, ಈ ವೇಳೆ ಸೆಪ್ ಬ್ಲಾಟರ್ ಹಾಗೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿರುವ ಮೈಕಲ್ ಪ್ಲಾಟಿನಿ ಫೆ.26ರಂದು ಅತ್ಯುನ್ನತ ಚುನಾವಣಾ ಫಿಫಾ ಕಾಂಗ್ರೆಸ್ ಅನ್ನು ನಡೆಸಲು ಒಪ್ಪಿಗೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com