ಪ್ರೋ ಕಬಡ್ಡಿ: ಯು ಮುಂಬಾಗೆ ಸತತ 4ನೇ ಗೆಲುವು

ರಕ್ಷಣಾತ್ಮಕ ವಿಭಾಗದ ಸಂಘಟಿತ ಪ್ರದರ್ಶನದಿಂದ ಯು ಮುಂಬಾ ತಂಡ ಪ್ರೋ ಕಬಡ್ಡಿ ಲೀಗ್‍ನ ಎರಡನೇ ಆವೃತ್ತಿಯಲ್ಲಿ ಸತತ ನಾಲ್ಕನೇ ಜಯ ದಾಖಲಿಸಿದೆ...
ಯು ಮುಂಬಾ ತಂಡ
ಯು ಮುಂಬಾ ತಂಡ
Updated on

ಮುಂಬೈ: ರಕ್ಷಣಾತ್ಮಕ ವಿಭಾಗದ ಸಂಘಟಿತ ಪ್ರದರ್ಶನದಿಂದ ಯು ಮುಂಬಾ ತಂಡ ಪ್ರೋ ಕಬಡ್ಡಿ ಲೀಗ್‍ನ ಎರಡನೇ ಆವೃತ್ತಿಯಲ್ಲಿ ಸತತ ನಾಲ್ಕನೇ ಜಯ ದಾಖಲಿಸಿದೆ.

ಮಂಗಳವಾರ ನಡೆದ ಏಕೈಕ ಪಂದ್ಯದಲ್ಲಿ ಯು ಮುಂಬಾ ತಂಡವು 28-21 ಅಂಕಗಳ ಅಂತರದಲ್ಲಿ ಪುನೇರಿ ಪಲ್ಟಾನ್ಸ್ ವಿರುದ್ಧ ಗೆಲುವು ದಾಖಲಿಸಿತು. ಪಂದ್ಯದಲ್ಲಿ ಉಭಯ ಆಟಗಾರರು ಪರಸ್ಪರ ಜಿದ್ದಾಜಿದ್ದಿನ ಪ್ರದರ್ಶನ ನೀಡಿದರೂ, ಮುಂಬಾ ಎದುರಿನ ಆಕ್ರಮಣಕಾರಿ ಆಟಕ್ಕೆ ಪುಣೆ ತಲೆ ಬಾಗಲೇಬೇಕಾಯಿತು.

ಈ ಗೆಲುವಿನ ಮೂಲಕ ತವರಿನಲ್ಲಿ ಆಡಿದ ನಾಲ್ಕು ಪಂದ್ಯಗಳನ್ನು ಗೆದ್ದ ಮೊದಲ ತಂಡ ಎಂಬ ಗೌರವಕ್ಕೆ ಪಾತ್ರವಾಗಿದೆ. ಈ ಪಂದ್ಯದ ಮೂಲಕ ಟೂರ್ನಿಯಲ್ಲಿನ ಮುಂಬೈ ಹಂತದ ಪಂದ್ಯಗಳು ಮುಕ್ತಾಯಗೊಂಡಿದ್ದು, ಇಂದಿನಿಂದ ಕೋಲ್ಕಾತಾದಲ್ಲಿ 2ನೇ ಹಂತದ ಪಂದ್ಯಗಳು ನಡೆಯಲಿವೆ. ಆರಂಭಿಕ ಹಂತದಲ್ಲಿ ಉಭಯ ತಂಡಗಳು ರಕ್ಷಣಾತ್ಮಕ ಆಟ ಪ್ರದರ್ಶಿಸಿದವು. ಹಾಗಾಗಿ ಆರಂಭಿಕ ಐದು ನಿಮಿಷದಲ್ಲಿ ಎರಡೂ ತಂಡಗಳು 2-2 ಅಂಕಗಳಿಂದ ಸಮ-ಬಲ ಸಾಧಿಸಿದ್ದವು.

ಈ ಬಾರಿ ಟೂರ್ನಿಯ ಆರಂಭಿಕ ಮೂರು ಪಂದ್ಯಗಳಲ್ಲಿ ಜಯ ದಾಖಲಿಸಿದ್ದ ಯು ಮುಂಬಾ ತಂಡ, ಪಂದ್ಯದಲ್ಲಿ ಆತ್ಮ ವಿಶ್ವಾಸದಿಂದಲೇ ಕಣಕ್ಕಿಳಿದಿತ್ತು. ಇತ್ತ ಆರಂಭಿಕ ಪಂದ್ಯದಲ್ಲಿ ಹೀನಾಯ ಸೋಲನುಭವಿಸಿ ಆಘಾತ ಅನುಭವಿಸಿದ್ದ ಪುನೇರಿ ಪಲ್ಟಾನ್ಸ್ ತಂಡ ಈ ಪಂದ್ಯ-ದಲ್ಲಿ ಹೋರಾಟಕಾರಿ ಪ್ರದರ್ಶನ ನೀಡಿತು.

ಆರಂಭಿಕ 10 ನಿಮಿಷಗಳಲ್ಲಿ ಚೇತರಿಕೆಯ ಆಟ ಪ್ರದರ್ಶಿಸಿದ ಯು ಮುಂಬಾ ತಂಡ 6-4 ಮುನ್ನಡೆ ಸಾಧಿಸಿತು. ಎರಡನೇ ಅವಧಿಯಲ್ಲಿ ಪುಣೆ ತಂಡ ಇನ್ನಷ್ಟು ಚುರುಕಿನ ಆಟವಾಡಿತು.
ಪುಣೆ ತಂಡ ಆಲೌಟ್ ಆಗುವ ನಿರೀಕ್ಷೆ ಇತ್ತಾದರೂ ಮೊದಲು ಆಲೌಟ್ ಆಗಿದ್ದು ಮಾತ್ರ ಯು ಮುಂಬಾ ತಂಡ. 30ನೇ ನಿಮಿಷದಲ್ಲಿ ಮುಂಬೈ ತಂಡವನ್ನು ಆಲೌಟ್ ಮಾಡಿದ ಪುಣೆ 18-17 ಅಂತರದ ಮುನ್ನಡೆ ಪಡೆದು ಪಂದ್ಯದಲ್ಲಿ ನಿಯಂತ್ರಣ ಸಾಧಿಸಿತು. ನಂತರ ಸತತವಾಗಿ 5 ಅಂಕಗಳನ್ನು ಗಳಿಸಿದ ಮುಂಬೈ ಪಡೆ 21-18 ಅಂತರದಿಂದ ಪುಣೆ ತಂಡವನ್ನು ಪಂದ್ಯದಲ್ಲಿ ಹಿಂದೆ ಹಾಕಿತು.

ಪಂದ್ಯದಲ್ಲಿ ಯು ಮುಂಬಾ ತಂಡದ ಪರ ಆಕರ್ಷಕ ಪ್ರದರ್ಶನ ನೀಡಿದ ಶಬ್ಬೀರ್ ಬಾಪು ರೈಡಿಂಗ್‍ನಲ್ಲಿ 8 ಅಂಕಗಳನ್ನು ಗಳಿಸಿದರು. ಆ ಮೂಲಕ ಪಂದ್ಯದಲ್ಲಿ ಅತ್ಯುತ್ತಮ ರೈಡರ್ ಪ್ರಶಸ್ತಿಯನ್ನು ಪಡೆದುಕೊಂಡರು. ಪುಣೆ ತಂಡದ ಪರ ನಾಯಕ ವಜೀರ್ ಸಿಂಗ್ 7 ಅಂಕ
ದಾಖಲಿಸಿದರು. ಬುಧವಾರ ಕೋಲ್ಕತಾದಲ್ಲಿ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆಯನ್ನು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹಾಡಲಿದ್ದಾರೆ.

ಇಂದಿನ ಪಂದ್ಯಗಳು
ಬೆಂಗಾಲ್ ವಾರಿಯರ್ಸ್ v/s ಜೈಪುರ್ ಪಿಂಕ್‍ಪ್ಯಾಂಥರ್ಸ್, ರಾತ್ರಿ 8ಕ್ಕೆ
ಬೆಂಗಳೂರು ಬುಲ್ಸ್ v/s ಪಾಟ್ನಾ ಪೈರೆಟ್ಸ್, ರಾತ್ರಿ 9ಕ್ಕೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com