
ಬೆಂಗಳೂರು:ಕರ್ನಾಟಕದ ಯುವ ಕ್ರಿಕೆಟ್ ಪ್ರತಿಭೆಗಳಿಗೆ ಮಹತ್ವದ ವೇದಿಕೆಯಯಾಗಿರುವ ಕರ್ನಾಟಕ ಪ್ರೀಮಿಯರ್ ಲೀಗ್ ಈ ಬಾರಿಯ ಆವೃತ್ತಿಗೆ ಸಜ್ಜಾಗಿದ್ದು, ಶನಿವಾರ ನಡೆಯಲಿರುವ ಆಟಗಾರರ ಹರಾಜು ಪ್ರಕ್ರಿಯೆ ರೋಚಕವಾಗಿರುವ ಸಾಧ್ಯತೆಗಳಿವೆ.
ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ರಾಬಿನ್ ಉತ್ತಪ್ಪ, ಸ್ಟುವರ್ಟ್ ಬಿನ್ನಿ, ಸಿ.ಎಂ ಗೌತಮ್, ಮಯಾಂಕ್ ಅಗರ್ ವಾಲ್, ಅಭಿಮನ್ಯು ಮಿಥುನ್ ರಂತಹ ಆಟಗಾರರನ್ನು ತಮ್ಮ ತೆಕ್ಕೆಗೆ ಎಳೆದುಕೊಳ್ಳಲು ಏಳು ಫ್ರಾಂಚೈಸಿಗಳು ಪೈಪೋಟಿ ನಡೆಸಲಿವೆ. ಯಾವ ಆಟಗಾರ ಎಷ್ಟು ಮೊತ್ತಕ್ಕೆ ಮಾರಾಟವಾಗುವರು, ಯಾರು ದುಬಾರಿ ಆಟಗಾರನಾಗುವರು ಯಾವ ತಂಡಕ್ಕೆ ಸೇರ್ಪಡೆಯಾಗುವರು ಎಂಬ ನಿರೀಕ್ಷೆ ಹೆಚ್ಚಾಗಿದೆ.
ಇನ್ನು ಶ್ರೇಯಸ್ ಗೋಪಾಲ್, ಶಿಶಿರ್ ಭವಾನೆ, ಭರತ್ ಚಿಪ್ಲಿ, ಅಮಿತ್ ವರ್ಮ,ಅನಿರುದ್ಧ ಜೋಷಿ, ಎಚ್.ಎಸ್ ಶರತ್ ಗೂ ಸಹ ಹೆಚ್ಚು ಬೇಡಿಕೆ ಬರುವ ನಿರೀಕ್ಷೆ ಇದೆ.ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 227 ಆಟಗಾರರಿದ್ದು, ಪೂಲ್ `ಎ' ಪಟ್ಟಿಯಲ್ಲಿ 24 ಪ್ರಮುಖ ಆಟಗಾರರನ್ನು ಒಳಗೊಂಡಿದೆ. ಇನ್ನು ಕಳೆದ ಬಾರಿ ಪೂಲ್ `ಎ' ಯಲ್ಲಿದ್ದ 11 ಆಟಗಾರರು ಮತ್ತು ಪೂಲ್ `ಬಿ'ಯಲ್ಲಿ ದೇವರಾಜ್ ಪಾಟೀಲ್ ಏಕೈಕ ಆಟಗಾರ ತಮ್ಮ ಫ್ರಾಂಚೈಸಿಯಲ್ಲೇ ಉಳಿದುಕೊಂಡಿದ್ದಾರೆ.
ಈ ಬಾರಿ ನಮ್ಮ ಶಿವಮೊಗ್ಗ ತಂಡ ಹೊಸದಾಗಿ ಸೇರ್ಪಡೆ ಗೊಂಡಿದ್ದು, ಈ ತಂಡ ಆಟಗಾರರನ್ನು ಖರೀದಿಸಲು 20 ಲಕ್ಷ ಮೊತ್ತ ಹೊಂದಿದೆ. ಇದರಲ್ಲಿ ಪೂಲ್ ಎ ಆಟಗಾರರ
ನ್ನು ಕೊಳ್ಳಲು ಗರಿಷ್ಠ 12 ಲಕ್ಷ ಪೂಲ್ ಬಿ ಆಟಗಾರರ ನ್ನು ಕೊಳ್ಳಲು 8 ಲಕ್ಷ ಬಳಸಬಹುದಾಗಿದೆ.
ಪ್ರತಿ ತಂಡ ಕನಿಷ್ಠ 15ರಿಂದ ಗರಿಷ್ಠ 20 ಆಟಗಾರರ ನ್ನು ಹೊಂದಿರಬೇಕಿದೆ.ಫ್ರಾಂಚೈಸಿಗಳು ಈಗಾಗಲೇ ತಮ್ಮ ತಂಡದಲ್ಲಿ ಉಳಿಸಿಕೊಂಡಿರುವ ಆಟಗಾರರು ಯಾವ ಪೂಲ್‍ನಲ್ಲಿ ಇರುತ್ತಾರೊ ಆ ಪೂಲ್‍ನಲ್ಲಿನ ಮೊತ್ತ ಕಡಿಮೆಯಾಗಲಿದೆ. ಒಂದು ವೇಳೆ ಪೂಲ್ ಎ ನಲ್ಲಿ ಮೊತ್ತ ಉಳಿದುಕೊಂಡರೆ, ಅದನ್ನು ಪೂಲ್ ಬಿ ನಲ್ಲಿ ಬಳಸಬಹುದಾಗಿದೆ.
ಖ್ಯಾತ ನಟ ಸುದೀಪ್ ಸಾರಥ್ಯದ ಆಲ್ಸ್ಟಾರ್ಸ್ ತಂಡ ಈ ಹರಾಜು ಪ್ರಕ್ರಿಯೆಯಲ್ಲಿ ಯಾವುದೇ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ. ಆದರೆ, ಮಾಜಿ ಆಟಗಾರರಾದ ವೆಂಕಟೇಶ್ ಪ್ರಸಾದ್, ಸುನೀಲ್ ಜೋಷಿ ಈ ಆಲ್ ಸ್ಟಾರ್ಸ್ ತಂಡದಲ್ಲಿರುವುದು ವಿಶೇಷ.
Advertisement