ಆಲ್‍ರೌಂಡರ್ ಬಿನ್ನಿ ದುಬಾರಿ

ಆಲ್ರೌಂಡರ್ ಸ್ಟುವರ್ಟ್ ಬಿನ್ನಿ ಈ ಬಾರಿಯ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್)ನ ಆಟಗಾರರ ಹರಾಜು ಪ್ರಕ್ರಿಯೆ ಅತ್ಯಧಿಕ ಮೊತ್ತಕ್ಕೆ ಹರಾಜಾದರೆ...
ಸ್ಟುವರ್ಟ್ ಬಿನ್ನಿ
ಸ್ಟುವರ್ಟ್ ಬಿನ್ನಿ

ಬೆಂಗಳೂರು: ಆಲ್ರೌಂಡರ್ ಸ್ಟುವರ್ಟ್ ಬಿನ್ನಿ ಈ ಬಾರಿಯ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್)ನ ಆಟಗಾರರ ಹರಾಜು ಪ್ರಕ್ರಿಯೆ ಅತ್ಯಧಿಕ ಮೊತ್ತಕ್ಕೆ ಹರಾಜಾದರೆ, ಗರಿಷ್ಟ ಮೊತ್ತಕ್ಕೆ ಬಿಕರಿಯಾಗುವ ನಿರೀಕ್ಷೆ ಹುಟ್ಟಿಸಿದ್ದ ರಾಬಿನ್ ಉತ್ತಪ್ಪ ತೀವ್ರ ಹಿನ್ನಡೆ ಅನುಭವಿಸಿದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ನಾಲ್ಕನೇ ಕೆಪಿಎಲ್ ಆವೃತ್ತಿಯ ಈ ಹರಾಜು ಪ್ರಕ್ರಿಯೆ ಮತ್ತೊಂದು ವಿಸ್ಮಯ ಅಭಿಮನ್ಯು ಮಿಥುನ್. ಪೀಣ್ಯ ಎಕ್ ಪ್ರೆಸ್ ಖ್ಯಾತಿಯ ಈ ವೇಗ ಬೌಲರ್ ಎರಡನೇ ದುಬಾರಿ ಆಟಗಾರನೆನಿಸಿದರು.

ಟೂರ್ನಿಗೆ ಇದೇ ಮೊದಲ ಬಾರಿಗೆ ಕಾಲಿಟ್ಟಿರುವ ನಮ್ಮ ಶಿವಮೊಗ್ಗ ತಂಡ, ಸ್ಟುವರ್ಟ್ ಬಿನ್ನಿಯನ್ನು ರೂ 5.5 ಲಕ್ಷ ಮೊತ್ತಕ್ಕೆ ಖರೀದಿಸಿದರೆ, ಅಭಿಮನ್ಯು ಮಿಥುನ್ ರೂ 5.10 ಲಕ್ಷಕ್ಕೆ ಬಿಜಾಪುರ ಬುಲ್ಸ್ ಪಾಲಾದರು. ಇನ್ನು ಸ್ಫೋಟಕ ಬ್ಯಾಟ್ಸ್ ಮನ್ ರಾಬಿನ್ ಉತ್ತಪ್ಪಗೆ ಇದೇ ಬುಲ್ಸ್ ರೂ 3.40 ರೂ.ಗಳನ್ನು ಕೊಟ್ಟು ಖರೀದಿಸಿತು. ಹರಾಜಿಗೆ ಲಭ್ಯರಾಗಿದ್ದ 227 ಆಟಗಾರರನ್ನು ಪೂಲ್ `ಎ' ಹಾಗೂ ಪೂಲ್ `ಬಿ'ಯಲ್ಲಿ ವಿಂಗಡಿಸಲಾಗಿತ್ತು. ಪೂಲ್ `ಎ'ನಲ್ಲಿ ಹರಾಜಾಗುವ ಪ್ರತಿ ಆಟಗಾರನಿಗೆ 50 ಸಾವಿರ ಮೂಲ ಬೆಲೆ ನಿಗದಿಪಡಿಸಲಾಗಿತ್ತು. ಈ ಗುಂಪಿನಿಂದ ಖರೀದಿಸಲ್ಪಡುವ ಯಾವುದೇ ಆಟಗಾರನಿಗೆ ಗರಿಷ್ಠ  12 ಲಕ್ಷಕ್ಕೆ ಪ್ರಾಂಚೈಸಿಗಳು ಬಿಡ್ ಸಲ್ಲಿಸಬಹುದಿತ್ತು. ಇನ್ನು, ಪೂಲ್ `ಬಿ'ಯಲ್ಲಿ ಹರಾಜಾಗುವ ಯಾವುದೇ ಆಟಗಾರನಿಗೆ ಮೂಲ ಬೆಲೆ ರೂ. 10 ಸಾವಿರವಾಗಿತ್ತು. ಇನ್ನು, ಇಲ್ಲಿಂದ ಆಯ್ಕೆಯಾಗುವ ಆಟಗಾರನಿಗೆ ಪ್ರಾಂಚೈಸಿಗಳು ಗರಿಷ್ಠ ರೂ. 8 ಲಕ್ಷ ನೀಡಬಹುದಿತ್ತು. ಈ ಹರಾಜಿನಲ್ಲಿ, ಒಟ್ಟು 133 ಆಟಗಾರರು ಹರಾಜಾದರೆ, 130 ಆಟಗಾರರನ್ನು ಯಾವುದೇ ಪ್ರಾಂಚೈಸಿ ಖರೀದಿಸಲಿಲ್ಲ.

ಇನ್ನು ಅಷ್ಟೇನೂ ಹೆಸರಾಗದ ಎಂ. ನಿದೇಶ್ ಪೂಲ್ `ಬಿ'ನಿಂದ ತಮ್ಮ ಮೂಲ ಬೆಲೆ ರೂ. 10 ಸಾವಿರವನ್ನೂ ಮೀರಿ ಬಿಜಾಪುರ ಬುಲ್ಸ್ ತಂಡಕ್ಕೆ ರೂ.3.14 ಲಕ್ಷಕ್ಕೆ ಹರಾಜಾಗಿದ್ದು ಹರಾಜಿನ ಅಚ್ಚರಿಗಳಲ್ಲೊಂದು. ಆದರೆ ಕಳೆದ ಬಾರಿಯ ಹರಾಜು ಪ್ರಕ್ರಿಯೆ ವೇಳೆ, ಗರಿಷ್ಠ ಮೊತ್ತ ರೂ.  5.3 ಲಕ್ಷಕ್ಕೆ ಹರಾಜಾಗಿದ್ದ ರಾಬಿನ್ ಉತ್ತಪ್ಪ ಈ ಬಾರಿ ಆ ಮಟ್ಟ ಮುಟ್ಟಲಿಲ್ಲ. ಇನ್ನು, ಮೂರನೇ ಗರಿಷ್ಠ ಮೊತ್ತ ಗಳಿಸಿದ್ದು ಬ್ಯಾಟ್ಸ್ ಮನ್ ಮಾಯಾಂಕ್ ಅಗರ್ವಾಲ್ ಹಾಗೂ ಅಮಿತ್ ವರ್ಮಾ. ತಲಾ ರೂ. 3.80 ಲಕ್ಷ ಮೊತ್ತಕ್ಕೆ ಹರಾಜಾದ ಈ ಇಬ್ಬರೂ ಕ್ರಮವಾಗಿ ಬೆಳಗಾವಿ ಪ್ಯಾಂಥರ್ಸ್ ಹಾಗೂ ಬಳ್ಳಾರಿ ಟಸ್ಕರ್ಸ್ ತಂಡಗಳಿಗೆ ಸೇರ್ಪಡೆಗೊಂಡರು.

ಇನ್ನು, ಕರ್ನಾಟಕದ ಎಡಗೈ ಸ್ಪಿನ್ನರ್ ಶ್ರೀನಾಥ್ ಅರವಿಂದ್ ಅವ ರನ್ನು ಹುಬ್ಬಳ್ಳಿ ಟೈಗರ್ಸ್ ತಂಡ ತನ್ನಲ್ಲೇ ಉಳಿಸಿಕೊಂಡಿತು. ಇನ್ನು, ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಅವರೂ ಹುಬ್ಬಳ್ಳಿ ತಂಡದಲ್ಲೇ ಉಳಿದು ಕೊಂಡರು.

ಸೆ. 2ರಿಂದ ಟೂರ್ನಿ: ಆಟಗಾರರ ಹರಾಜಿನ ನಂತರ ಮತ್ತಷ್ಟು ಕುತೂಹಲ ಕೆರಳಿಸಿರುವ ಕೆಪಿಎಲ್ ಟೂರ್ನಿ ಸೆ.2ರಿಂದ 18ರವರೆಗೆ ನಡೆಯಲಿದೆ. ಈ ಮೊದಲು ಟೂರ್ನಿ ಆ. 24ರಿಂದ ಆರಂಭಗೊಳ್ಳಬೇಕಿತ್ತು. ಆದರೆ, ಅದೇ ಸಂದರ್ಭದಲ್ಲಿ ಭಾರತ ಹಾಗೂ ಶ್ರೀಲಂಕಾ ನಡುವಿನ ಟೆಸ್ಟ್ ಸರಣಿ ನಡೆಯಲಿರುವ ಹಿನ್ನೆಲೆಯಲ್ಲಿ ಕೆಪಿಎಲ್ ಪಂದ್ಯಾವಳಿಯನ್ನು ಸೆ. 2ಕ್ಕೆ ಮುಂದೂಡಿತ್ತು.

ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದರಿಂದ ಕೆಪಿಎಲ್ ಆಡಲಾಗಿರಲಿಲ್ಲ. ಈ ಬಾರಿ ಪುನಃ ಕೆಪಿಎಲ್ ಆಡುತ್ತಿರುವು ದು ಅದರಲ್ಲೂ `ನಮ್ಮ ಶಿವಮೊಗ್ಗ' ತಂಡದಿಂದ ಕಣಕ್ಕಿಳಿಯುತ್ತಿರುವುದು ಖುಷಿ ತಂದಿದೆ.

- ಸ್ಟುವರ್ಟ್ ಬಿನ್ನಿ
ನಮ್ಮ ಶಿವಮೊಗ್ಗ ತಂಡ



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com