ಆರ್ಚರಿ: ದೀಪಿಕಾ ಮೇಲೆ ಕಣ್ಣು

ರತಿಷ್ಠಿತ ವಿಶ್ವ ಆರ್ಚೆರಿ ಚಾಂಪಿಯನ್ ಶಿಪ್ ಗೆ ಭಾನುವಾರ ಚಾಲನೆ ದೊರೆಯಲಿದ್ದು, ಇದರಲ್ಲಿ ಪಾಲ್ಗೊಂಡಿ ರುವ ಭಾರತದ ಸ್ಪರ್ದಿಗಳು ರಿಂಯೋ ಒಲಿಂಪಿಕ್ಸ್ ..
ದೀಪಿಕಾ ಕುಮಾರಿ
ದೀಪಿಕಾ ಕುಮಾರಿ

ಕೋಪನ್ ಹೇಗನ್: ಪ್ರತಿಷ್ಠಿತ ವಿಶ್ವ ಆರ್ಚೆರಿ ಚಾಂಪಿಯನ್ ಶಿಪ್ ಗೆ ಭಾನುವಾರ ಚಾಲನೆ ದೊರೆಯಲಿದ್ದು, ಇದರಲ್ಲಿ ಪಾಲ್ಗೊಂಡಿ ರುವ ಭಾರತದ ಸ್ಪರ್ದಿಗಳು ರಿಂಯೋ ಒಲಿಂಪಿಕ್ಸ್ ಮೇಲೆ ಕಣ್ಣಿಟ್ಟಿದ್ದಾರೆ. 2014ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಕಾಂಪೌಂಡ್ ಬಿಲ್ಲುಗಾರ್ತಿ ಯರು ಕಂಚಿನ ಪದಕ ಗೆದ್ದಿದ್ದರು. ಇಲ್ಲೂ ಅದೇ ಸಾಧನೆ ಮರುಕಳಿಸಬಹುದು ಎಂಬುದು ಭಾರತದ ಅಭಿಮಾನಿಗಳ ಆಸೆಯಾಗಿದೆ. ಅಲ್ಲದೆ, ಇನ್ನು, ಮಹಿಳೆಯರ ರಿಕರ್ವ್ ವಿಭಾಗದಲ್ಲಿ ವಿಶ್ವದ 8ನೇ ಶ್ರೇಯಾಂಕಿತೆ ದೀಪಿಕಾ ಕುಮಾರಿ ಸ್ಪರ್ಧಿಸುತ್ತಿರುವುದರಿಂದ ಅವರ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಕಾಂಪೌಂಡ್ ಬಿಲ್ಲುಗಾರ್ತಿಯರ ತಂಡದಲ್ಲಿ ಪೂರ್ವಾಶಾ ಶಿಂಧೆ, ವಿ.ಜ್ಯೋತಿ, ಸುರೇಖಾ, ಪಿ.ಲಿಲಿ ಚಾನು ಇದ್ದಾರೆ. ಆದರೆ ಏಷ್ಯನ್ ಕ್ರೀಡಾಕೂಟದಲ್ಲಿ  ಪೂರ್ವಾಶ್ ಜ್ಯೋತಿ ಜೊತೆಗೆ ತ್ರಿಷಾ ದೇಬ್ ಸ್ಪರ್ಧಿಸಿದ್ದರು. ಆದರೆ, ಈ ಬಾರಿ ತ್ರಿಷಾ ಬದಲಿಗೆ ಲಿಲಿ  ಆಗಮಿಸಿದ್ದಾರೆ.

ಕಳೆದ ವರ್ಷ ನಡೆದಿದ್ದ ಇಂಚಿಯಾನ್ ಏಷ್ಯನ್ ಗೇಮ್ಸ್ ನಲ್ಲಿ ಸ್ಪರ್ಧಿಸಿದ್ದ ಲಿಲಿ ಅವರು, ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದನ್ನು ಇಲ್ಲಿ ಸ್ಮರಿಸಬಹುದು.
ಒಲಿಂಪಿಕೇತರ ಕ್ರೀಡೆಯಾದ ಬಿಲ್ಲುಗಾರಿಕೆ ವಿಭಾಗದಲ್ಲಿ  ಭಾರತೀಯ ಬಿಲ್ಲುಗಾರರ ಪ್ರದರ್ಶನ ಕೂತೂಹಲಕ್ಕೆಡೆ ಮಾಡಿಕೊಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com