
ಅಟ್ಲಾಂಟ: ಭಾರತದ ಪ್ರಮುಖ ಟೆನಿಸ್ ಆಟಗಾರ ಸೋಮ್‌ದೇವ್ ದೇವವರ್ಮನ್, ಎಟಿಪಿ ಅಟ್ಲಾಂಟ ಓಪನ್ ಟೆನಿಸ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಬುಧವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಸೋಮ್ ದೇವ್, ಅಮೆರಿಕದ ಅರ್ಹತಾ ಆಟಗಾರ 18 ವರ್ಷದ ಜಾರೆಡ್ ಡೊನಾಲ್ಡ್‍ಸನ್ ವಿರುದ್ಧ ಮುಖಭಂಗ ಅನುಭವಿಸಿದ್ದಾರೆ ಎಂದು ಎನ್‍ಡಿಟಿವಿ ವರದಿ ಮಾಡಿದೆ. 30 ವರ್ಷದ ಸೋಮ್‌ದೇವ್ ಕೂಡ ಅರ್ಹತಾ ಸುತ್ತಿನ ಮೂಲಕ ಪ್ರಮುಖ ಸುತ್ತಿಗೆ ಪ್ರವೇಶಿಸಿದ್ದರು. ಆದರೆ ಈ ಪಂದ್ಯದಲ್ಲಿ ತಮಗಿಂತ 12 ವರ್ಷಗಳ ಕಡಿಮೆ ಅಂತರದ ಯುವ ಆಟಗಾರನ ವಿರುದ್ಧ 16, 63, 46 ಮಣಿದಿದ್ದು, ಅಚ್ಚರಿ ಮೂಡಿಸಿದೆ.
ಆರಂಭದಲ್ಲೇ ಜಾರೆಡ್ ದಾಳಿಯನ್ನು ಎದುರಿಸುವಲ್ಲಿ ವಿಫಲವಾಗಿದ್ದ ಸೋಮ್‌ದೇವ್, 16ರ ತೀವ್ರ ಹಿನ್ನಡೆ ಅನುಭವಿಸಿದರು. ನಂತರ ಎರಡನೇ ಸೆಟ್‍ನಲ್ಲಿ ಜಾಗರೂಕ ಆಟ ಪ್ರದರ್ಶಿಸುವ ಮೂಲಕ 63 ಅಂತರ ಸಾಧಿಸಿ, ಪಂದ್ಯದಲ್ಲಿ ಸಮಬಲ ಸಾಧಿಸಿದರು. ನಿರ್ಣಾಯಕ ಮೂರನೇ ಸೆಟ್‍ನಲ್ಲಿ ಮತ್ತೆ ಎಡವಿದ ಸೋಮ್ 46 ಅಂತರದ ಹಿನ್ನಡೆಯೊಂದಿಗೆ ಪಂದ್ಯದಲ್ಲಿ ಮುಖ
ಭಂಗ ಅನುಭವಿಸಿದರು. ಈ ಸೋಲಿನೊಂದಿಗೆ ಸೋಮ್ ದೇವ್ ಟೂರ್ನಿಯಿಂದ ಯಾವುದೇ ರ್ಯಾಂಕಿಂಗ್ ಅಂಕ ಪಡೆಯಲಿಲ್ಲ. ಇನ್ನು ಭಾರತದ ಪುರವ್ ರಾಜ ಪುರುಷರ ಡಬಲ್ಸ್ ವಿಭಾಗದಲ್ಲಿ ತಮ್ಮ ಜತೆಗಾರ ಫ್ರೆಂಚ್ ನ ಫ್ಯಾಬ್ರಿಸ್ ಮಾರ್ಟಿನ್ ಜತೆಯಾಗಿ ಕಣಕ್ಕಿಳಿಯಲಿದ್ದು, ಈ ಜೋಡಿ ಟ್ರೇಯ್ ಹುಯ್ ಮತ್ತು ಸ್ಟೀವ್ ಜಾನ್ಸನ್ ವಿರುದ್ಧ ಸೆಣಸಲಿದೆ.
Advertisement