
ಪಟಣ: ಪಂದ್ಯದ ಮೊದಲ ಅವಧಿಯಲ್ಲಿ ನೀಡಿದ ಆಕ್ರಮಣಕಾರಿ ಪ್ರದರ್ಶನವನ್ನು ಎರಡನೇ ಅವಧಿಯಲ್ಲಿ ಮುಂದುವರಿಸಲು ಸಂಪೂರ್ಣವಾಗಿ ವಿಫಲವಾದ ಆತಿಥೇಯ ಪಾಟ್ನಾ ಪೈರೆಟ್ಸ್ ತಂಡ ಪ್ರೊ ಕಬಡ್ಡಿ ಲೀಗ್‍ನಲ್ಲಿ ಮತ್ತೊಮ್ಮೆ ನಿರಾಸೆ ಅನುಭವಿಸಿದೆ. ಇತ್ತ ಆಕರ್ಷಕ ಪ್ರದರ್ಶನ ನೀಡಿದ ತೆಲುಗು ಟೈಟಾನ್ಸ್ ತನ್ನ ಯಶಸ್ಸಿನ ಹಾದಿಯಲ್ಲಿ ಮುಂದುವರಿದಿದೆ.
ಗುರುವಾರ ನಡೆದ ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ತಂಡ 34-22 ಅಂಕಗಳ ಅಂತರದಲ್ಲಿ ಪಾಟ್ನಾ ಪೈರೆಟ್ಸ್ ತಂಡವನ್ನು ಮಣಿಸಿತು. ಈ ಮೂಲಕ ಟೂರ್ನಿಯಲ್ಲಿ 5ನೇ ಗೆಲುವು ಸಂಪಾದಿಸಿದೆ. ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳು ಸಮಬಲದ ಹೋರಾಟ ನಡೆಸಿದವು. ಪ್ರತಿ ತಂಡ ಕ್ರಮವಾಗಿ ಒಂದೊಂದು ಅಂಕ ಪಡೆಯುತ್ತಾ ತಮ್ಮ ನಡುವಿನ ಅಂತರವನ್ನು ಕಡಿಮೆ ಮಾಡಿಕೊಂಡಿದ್ದವು. ಈ ಹಂತದಲ್ಲಿ ರಕ್ಷಣಾತ್ಮಕ ಆಟಗಾರರಿಗಿಂತ ರೈಡರ್‍ಗಳು ಹೆಚ್ಚು ಅಂಕಗಳನ್ನು ಸಂಪಾದಿಸಿದರು.
ಇಂದಿನ ಪಂದ್ಯಗಳು
ಬೆಂಗಳೂರು ಬುಲ್ಸ್ v/s ತೆಲುಗು ಟೈಟಾನ್ಸ್ ರಾತ್ರಿ 8ಕ್ಕೆ, ಪಾಟ್ನಾ ಪೈರೆಟ್ಸ್ v/s ದಬಾಂಗ್ ಡೆಲ್ಲಿ ರಾತ್ರಿ 9ಕ್ಕೆ
Advertisement