ಬುಲ್ಸ್ ತಿವಿತಕ್ಕೆ ಮುಳುಗಿದ ಟೈಟಾನ್ಸ್

ರಕ್ಷಣಾತ್ಮಕ ವಿಭಾಗದ ಭದ್ರಕೋಟೆಯಿಂದ ಪ್ರತಿಸ್ಪರ್ಧಿಗಳ ಆಟಗಾರರನ್ನು ಬಂಧಿಸುವಲ್ಲಿ ಯಶಸ್ವಿ ಯಾದ ಬೆಂಗಳೂರು ಬುಲ್ಸ್ ತಂಡ,...
ಬೆಂಗಳೂರು ಬುಲ್ಸ್
ಬೆಂಗಳೂರು ಬುಲ್ಸ್

ಪಾಟ್ನಾ: ರಕ್ಷಣಾತ್ಮಕ ವಿಭಾಗದ ಭದ್ರಕೋಟೆಯಿಂದ ಪ್ರತಿಸ್ಪರ್ಧಿಗಳ ಆಟಗಾರರನ್ನು ಬಂಧಿಸುವಲ್ಲಿ ಯಶಸ್ವಿ ಯಾದ ಬೆಂಗಳೂರು ಬುಲ್ಸ್ ತಂಡ, ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಮತ್ತೆ ಗೆಲುವಿನ ಹಳಿಗೆ ಮರಳಿದೆ.

ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ  35-21 ಅಂಕಗಳ ಅಂತರದಲ್ಲಿ ತೆಲುಗು ಟೈಟಾನ್ಸ್  ತಂಡವನ್ನು ಮಣಿಸಿತು. ಈ ಮೂಲಕ ಟೈಟಾನನ್ಸ್ ಮೇಲಿನ  ತನ್ನ ಪ್ರಭುತ್ವವನ್ನು ಮುಂದುವರಿಸಿತು.

ಇಂದಿನ ಗೆಲುವಿನೊಂದಿಗೆ ಬೆಂಗಳೂರು ಬುಲ್ಸ್ ತಂಡ ಒಟ್ಟು 7 ಪಂದ್ಯಗಳಿಂದ 5ರಲ್ಲಿ ಗೆಲುವು ಹಾಗೂ 2ರಲ್ಲಿ ಗೆಲುವು  ಹಾಗೂ 2 ರಲ್ಲಿ ಸೋಲುಂಡು ಒಟ್ಟಾರೆ 25 ಅಂಕಗಳಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರೆ , ಒಂದೇ ಒಂದು ಪಂದ್ಯವನ್ನೂ ಕೈಚೆಲ್ಲದ ಯು ಮುಂಬಾ 6 ಪಂದ್ಯಗಳಿಂದ 30 ಅಂಕಗಳಿಸಿ ಅಗ್ರ ಸ್ಥಾನದಲ್ಲಿದೆ


 ಬೆಂಗಳೂರು ಬುಲ್ಸ್ ಪರ ನಾಯಕ ಮಂಜೀತ್ ಚಿಲ್ಲರ್  ರಕ್ಷಣಾತ್ಮಕ ವಿಭಾದಲ್ಲೇ 10 ಅಂಕಗಳನ್ನು ಗಳಿಸುವ ಮೂಲಕ ಟೈಟಾನ್ಸ್ ಗೆ ಮುಳುವಾದರು. ಪಂದ್ಯದಲ್ಲಿ ತೆಲುಗು ಟೈಟಾನ್ಸ್ ತಂಡ ತನ್ನ ಎರಡು ಆರಂಭಿಕ  ರೈ ಡ್ನಲ್ಲಿ ಅಂಕ ಗಳಿಸುವಲ್ಲಿ ಯಶಸ್ವಿಯಾಗಿ 2-0 ಅಂತರದ ಉತ್ತಮ ಆರಂಭ ಪಡೆದಿತ್ತು . ಆದರೆ ನಂತರದ ಹಂತದಲ್ಲಿ ಜಾಣ್ಮೆಯ ರಣತಂತ್ರ ರೂಪಿಸಿದ ಬೆಂಗಳೂರು ಬುಲ್ಸ್, ತನ್ನ  ರಕ್ಷಣಾತ್ಮಕ ವಿಭಾಗದ ಮೇಲೆ ಹೆಚ್ಚು ಅವಲಂಬಿತವಾಗಿ , ಎದುರಾಳಿ ರೈಡರ್ ಗಳನ್ನು ಕಟ್ಟಿ ಹಾಕುವತ್ತ ಗಮನ ಹರಿಸಿತು. ಪಂದ್ಯದ 9 ನೇ ನಿಮಿಷದಲ್ಲಿ ಬುಲ್ಸ್ ಆಟಗಾರರು  5-4 ಅಂತರದಿಂದ ಮೊದಲ ಬಾರಿಗೆ ಮುನ್ನಡೆ ಪಡೆದರು. ನಂತರ 11ನೇ ನಿಮಿಷಕ್ಕೆ ಬುಲ್ಸ್ ತನ್ನ ಅಂತರವನ್ನು 7-4ಕ್ಕೆ ಹೆಚ್ಚಿಸಿಕೊಂಡಿತು.

ನಂತರ ಹೋರಾಟಕಾರಿ ಪ್ರದರ್ಶನ  ನೀಡಿದ ಟೈಟಾನ್ಸ್ ಆಟಗಾರರು 16ನೇ ನಿಮಿಷದಲ್ಲಿ 9-8 ಅಂತರದಿಂದ ಮತ್ತೆ ಮುನ್ನಡೆ ಪಡದುಕೊಂಡರು. ಈ ವೇಳೆ ಬುಲ್ಸ್ ಆಲೌಟ್ ಆಗುವ ಅಪಾಯ ಎದುರಿಸಿತ್ತಾದರೂ, ಎಚ್ಚರಿಕೆಯ ಆಟದ ಮೂಲಕ ಅಪಾಯದಿಂದ ಪಾರಾಯಿತು. ನಂತರ ಪಂದ್ಯದ ಮೊದಲಾರ್ಧದ ಅವಧಿ ಮುಕ್ತಾಯಕ್ಕೆ  12-9  ಅಂತರದಿಂದ ಬುಲ್ಸ್ ಮುನ್ನಡೆ ಸಾಧಿಸಿತು.ಇನ್ನು ಎರಡನೇ ಅವಧಿಯಲ್ಲೂ ತಮ್ಮ  ರಕ್ಷಣಾತ್ಮಕ ವಿಭಾಗದ ಅತ್ಯದ್ಭುತ  ಪ್ರದರ್ಶನದಿಂದ ಟೈಟಾನ್ಸ್ ತಂಡವನ್ನು ಕಟ್ಟಿ ಹಾಕಿದ ಬುಲ್ಸ್ ಬಳಗ, ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿತು. ದ್ವಿತೀಯಾರ್ಧದ ಆರಂಭದಲ್ಲಿ ಆಕ್ರಮಣಕಾರಿ ಪ್ರದರ್ಶನದ ಮೂಲಕ ಅಂತರವನ್ನು ಹೆಚ್ಚಿಸಿಕೊಂಡಿತು. ಈ ಮೂಲಕ  24ನೇನಿಮಿಷಕ್ಕೆ ಬುಲ್ಸ್ 19-11 ಅಂಕಗಳ ಮುನ್ನಡೆ ಪಡೆಯಿತು. ನಂತರ ಟೈಟಾನ್ಸ್ ಆಟಗಾರರು ಮರು ಹೋರಾಟ ನಡೆಸಿದರಾದರೂ ಯಶಸ್ವಿಯಾಗಲಿಲ್ಲ. ಪಂದ್ಯದ ಅಂತಿಮ ಕ್ಷಣದಲ್ಲಿ  2ನೇ ಬಾರಿಗೆ ಟೈಟಾನ್ಸ್ ಪಂಡೆಯನ್ನು ಆಲೌಟ್  ಮಾಡಿದ ಬುಲ್ಸ್  ಗೆಲುವಿನ ಅಂತರವನ್ನು 14ಕ್ಕೆ ಹೆಚ್ಚಿಸಿಕೊಂಡಿತು.

ಪಂದ್ಯದಲ್ಲಿ ಆಕರ್ಷಕ ಪ್ರದರ್ಶನ ನೀಡಿದ ಬುಲ್ಸ್ ತಂಡದ ನಾಯಕ ಮಂಜೀತ್ ಚಿಲ್ಲರ್ ಅತ್ಯುತ್ತಮ ಡಿಫೆಂಡರ್ ಹಾಗೂ ಅಜಯ್ ಠಾಕೂರ್ ಅತ್ಯುತ್ತಮ ರೈಡರ್ ಪ್ರಶಸ್ತಿಯನ್ನು ಪ್ರಶಸ್ತಿಯನ್ನು ಪಡೆದುಕೊಂಡರು.



ಇಂದಿನ ಪಂದ್ಯಗಳು
ಡೆಲ್ಲಿ ದಬಾಂಗ್ v/s ಯು ಮುಂಬಾ, ರಾತ್ರಿ 8ಕ್ಕೆ
ಪಾಟ್ನಾ ಪೈರೆಟ್ಸ್ v/s ಪುನೇರಿ ಪಲ್ಟಾನ್ಸ್
ರಾತ್ರಿ 9ಕ್ಕೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com