ವಿಶೇಷ ಒಲಿಂಪಿಕ್ಸ್ ನಲ್ಲಿ ಗೊತ್ತಿಲ್ಲದವರ ಬಂಗಾರದ ಸಾಧನೆ!

ಅಪ್ಪ ಅಮ್ಮ ಅಂತ ಕರೆಯಲು ಆ ಮಕ್ಕಳಿಗೆ ಯಾರೂ ಇಲ್ಲ. ಎಲ್ಲ ಮಕ್ಕಳಂತೆ ಅವರಲ್ಲ...ಬುದ್ಧಿ ಮಾಂದ್ಯರು ಅವರು...
ವಿಶೇಷ ಒಲಿಂಪಿಕ್ಸ್
ವಿಶೇಷ ಒಲಿಂಪಿಕ್ಸ್

ನವದೆಹಲಿ: ಅಪ್ಪ ಅಮ್ಮ ಅಂತ ಕರೆಯಲು ಆ ಮಕ್ಕಳಿಗೆ ಯಾರೂ ಇಲ್ಲ. ಎಲ್ಲ ಮಕ್ಕಳಂತೆ ಅವರಲ್ಲ...ಬುದ್ಧಿ ಮಾಂದ್ಯರು ಅವರು. ಅವರಿಗೆ ಅಪ್ಪಅಮ್ಮ ಎಲ್ಲಾ ದೆಹಲಿ ಸರ್ಕಾರವೇ! `ಆಶಾ ಕಿರಣ' ಎಂಬ ಅನಾಥಾಲಯವೇಆ ಮಕ್ಕಳ ಸೂರು. ಆದರೆ, ಈ  ಮಕ್ಕಳಲ್ಲಿನ ಕ್ರೀಡಾ ಸ್ಫೂರ್ತಿ ಇದೆಯಲ್ಲ.. ಅದು ಎಂಥವರಿಗೂ ಸ್ಫೂರ್ತಿ ತುಂಬುವಂಥದ್ದು. ಅಮೆರಿಕದಲ್ಲಿ ನಡೆಯುತ್ತಿರುವ ಬುದ್ಧಿಮಾಂದ್ಯ ಮಕ್ಕಳ ವಿಶೇಷ ಒಲಿಂಪಿಕ್ಸ್‍ನಲ್ಲಿ ಭಾರತಕ್ಕೆ ಸ್ವರ್ಣ ಪದಕ ತಂದುಟ್ಟಿವೆ ಈ ಮಕ್ಕಳು.  ಆ ಪುಟ್ಟ  ಹುಡುಗಿಯ ವಯಸ್ಸು ಕೇವಲ 7 ವರ್ಷ. ಹೆಸರು ಪೂಲನ್ ದೇವಿ! `ರೋಹಿಣಿ' ಎಂಬ ಬುದ್ದಿಮಾಂದ್ಯರ ಅನಾಥಾಲಯದವಳು. ವಿಶೇಷ ಒಲಿಂಪಿಕ್ಸ್‍ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಈ ಅನಾಥಾಲಯದ 10 ಆಟಗಾರರಲ್ಲಿ ಈಕೆಯೂ ಒಬ್ಬಳು. ಆದರೆ, ಆಕೆಯ ಸಾಧನೆ ಮಾತ್ರ ಅಪ್ಪಟ ಬಂಗಾರ. ಪವರ್‍ಲಿಫ್ಟಿಂಗ್ ನಲ್ಲಿ ಈಕೆ ಗಳಿಸಿರುವ ಚಿನ್ನದ ಪದಕ ದೇಶಕ್ಕೆ ವಿಶೇಷ ಒಲಿಂಪಿಕ್ಸ್  ಇತಿಹಾಸದಲ್ಲಿ ಬಂದ ಮೊದಲ ಸ್ವರ್ಣ ಸಂಭ್ರಮ. ರೋಹಿಣಿ ಆಟಗಾರರ ತಂಡ ಈ ಕ್ರೀಡಾಕೂಟದಲ್ಲಿ ಈಗಾಗಲೇ ಮೂರು ಸ್ವರ್ಣ ಪದಕ ಗೆದ್ದಿದೆ. ಇನ್ನು, ಪ್ಯಾಟ್ಟೊ ಎಂಬ ಮತ್ತೊಬ್ಬ ಬಾಲಕಿ ಅಥ್ಲೆಟಿಕ್ಸ್‍ನಲ್ಲಿ ಚಿನ್ನ ಗೆದ್ದಿದ್ದಾಳೆ. ರೋಹಿಣಿಯಿಂದ ಅಲ್ಲಿ ಭಾಗವಹಿಸಿರುವ ಮಿಕ್ಕ 8 ಮಕ್ಕಳೂ ಕಂಚಿನ ಪದಕ ಗೆದ್ದಿದ್ದಾರೆ.
ಥ್ಯಾಂಕ್ಸ್ ಟು ಒಲಿಂಪಿಕ್ಸ್: ನಿಮಗೆ ಗೊತ್ತಿರಲಿ. ಹೀಗೆ, ಅಪ್ಪಅಮ್ಮನ ಹೆಸರೇ ಗೊತ್ತಿಲ್ಲದವರನ್ನು ಕ್ರೀಡಾ ಲೋಕ ಹಿಂದೊಮ್ಮೆ ದೂರವಿಟ್ಟಿತ್ತು. ಆಸ್ಟ್ರೇಲಿಯಾದಲ್ಲಿ ಕಳೆದ ವರ್ಷ ನಡೆದಿದ್ದ ಏಷ್ಯಾ ಪೆಸಿಫಿಕ್ ಗೇಮ್ಸ್ ನಲ್ಲಿ ಪಾಲ್ಗೊಳ್ಳಲು ಈ ಮಕ್ಕಳಿಂದ ಕಳುಹಿಸಲಾಗಿದ್ದ ಅರ್ಜಿಗಳು ತಿರಸ್ಕರಿಸಲ್ಪಟ್ಟಿದ್ದವು. ಆದರೆ, 2014ರ ವಿಶೇಷ ಒಲಿಂಪಿಕ್ಸ್‍ಗೆ ಈ ಮಕ್ಕಳು ಆಯ್ಕೆಯಾದಾಗ ಮಿಕ್ಕೆಲ್ಲಾ ಕ್ರೀಡಾಸಂಸ್ಥೆಗಳು ಕಣ್ಣು ತೆರೆದವು. ಅದರ
ಫಲವೇ ಈಗ ಅಂತಾರಾಷ್ಟ್ರೀಯ  ಮಟ್ಟದಲ್ಲಿ ಭಾರತಕ್ಕೆ ಗೌರವ   ತರುತ್ತಿದ್ದಾರೆ.


ಗೊತ್ತಿಲ್ಲ ಎಂಬುದೊಂದೇ ಉತ್ತರ
ದೂರದ ಅಮೆರಿಕದಲ್ಲಿ ಇಂಥ ಸಾಧನೆ ಮಾಡಿರುವ ಈ ಮಕ್ಕಳು ವೀಸಾಕ್ಕಾಗಿ ಹಾಕಿದ ಅರ್ಜಿಯನ್ನು ಒಮ್ಮೆ ಕಣ್ಣಾಡಿಸಿದರೆ ಕಣ್ಣುಗಳು ತೇವವಾಗುವುದು ಖಂಡಿತ. ಅರ್ಜಿಯಲ್ಲಿ, ಹೆಸರಿಗಾಗಿ ಮೀಸಲಿರುವ ಖಾಲಿ ಸ್ಥಳದಲ್ಲಿ ತಮ್ಮ ಹೆಸರನ್ನು ದಾಖಲಿಸುವ ಇವರು, ತಂದೆತಾಯಿಯ ಹೆಸರಿನ ಕಡೆ `ಗೊತ್ತಿಲ್ಲ' ಎಂದು ನಮೂದಿಸಿದ್ದಾರೆ.


ಏನಿದು ವಿಶೇಷ ಒಲಿಂಪಿಕ್ಸ್?
ಇದು ಬುದ್ಧಿಮಾಂದ್ಯ ಮಕ್ಕಳು ಹಾಗೂ ವಯಸ್ಕರಿಗಾಗಿ ನಡೆಯುವ ವಿಶೇಷ ಒಲಿಂಪಿಕ್ಸ್ ಪಂದ್ಯಾವಳಿಯಿದು. ಅಂತಾರಾಷ್ಟ್ರೀಯ ಸ್ಪೆಷಲ್  ಒಲಿಂಪಿಕ್ಸ್ ಸಂಸ್ಥೆಯ ಆಶ್ರಯದಲ್ಲಿ ನಡೆಯುವ ಈ ಕ್ರೀಡಾಕೂಟಕ್ಕೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆಯ ಮಾನ್ಯತೆ ಯಿದೆ. ಪ್ರತಿ ಎರಡು ಅಥವಾ ನಾಲ್ಕು ವರ್ಷಗಳಿಗೊಮ್ಮೆ ನಡೆಯು ವ ಈ ಪಂದ್ಯಾವಳಿ ನಾನಾ ದೇಶಗಳಲ್ಲಿ ವರ್ಷ ಪೂರ್ತಿ ನಡೆಯು ತ್ತದೆ. ಸುಮಾರು 170 ದೇಶಗಳಿಂದ ಸರಾಸರಿ 40.4 ಲಕ್ಷ ಕ್ರೀಡಾ ಳುಗಳು ಸ್ಪರ್ಧಿಸುತ್ತಾರೆ. 1987ರಿಂದ ಈವರೆಗೆ 8 ವಿಶೇಷ ಒಲಿಂಪಿಕ್ಸ್‍ನಲ್ಲಿ ಭಾಗವಹಿಸಿರುವ ಭಾರತ, ಈವರೆಗೆ (ಪ್ರಸಕ್ತ ಟೂರ್ನಿ ಹೊರತು ಪಡಿಸಿ) 225 ಚಿನ್ನ, 241 ಬೆಳ್ಳಿ ಹಾಗೂ 256 ಕಂಚು ಪಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com