ಜೋಶ್ನಾ, ಮಹೇಶ್ ಸೆಮಿ ಫೈನಲ್‍ಗೆ

ವಿಕ್ಟೋರಿಯಾ ಓಪನ್ ಸ್ಕ್ವಾಶ್ ಚಾಂಪಿಯನ್‍ಶಿಪ್ ಪಂದ್ಯಾವಳಿಯಲ್ಲಿ ಭಾರತ ದ ಎರಡನೇ ಶ್ರೇಯಾಂಕಿತ ಆಟಗಾರ್ತಿ ಜೋಶ್ನಾ...
ಜೋಶ್ನಾ ಚಿನ್ನಪ್ಪ
ಜೋಶ್ನಾ ಚಿನ್ನಪ್ಪ

ಮೆಲ್ಬೋರ್ನ್: ವಿಕ್ಟೋರಿಯಾ ಓಪನ್  ಸ್ಕ್ವಾಶ್ ಚಾಂಪಿಯನ್‍ಶಿಪ್ ಪಂದ್ಯಾವಳಿಯಲ್ಲಿ ಭಾರತ ದ ಎರಡನೇ ಶ್ರೇಯಾಂಕಿತ ಆಟಗಾರ್ತಿ ಜೋಶ್ನಾ ಚಿನ್ನಪ್ಪ ಹಾಗೂ ಪುರುಷರ ವಿಭಾಗದಲ್ಲಿ ಮಹೇಶ್ ಮಂಗೋಂಕಾರ್ ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಿದ್ದಾರೆ.

ಆದರೆ  15,000 ಡಾಲರ್ ಮೊತ್ತದ ಟೂರ್ನಿಯಲ್ಲಿ ಕುಶ್ ಕುಮಾರ್ ಹೋರಾಟಕ್ಕೆ ತೆರೆ ಬಿದ್ದಿದೆ. ಮೊದಲೆರಡು ಸುತ್ತುಗಳಲ್ಲಿ ಆತ್ಮ ವಿಶ್ವಾಸದಿಂದ ಸೆಣಸಿದ್ದ ಕುಶ್ ಕುಮಾರ್  ಕ್ವಾರ್ಟರ್ ಫೈನಲ್ ನಲ್ಲಿ  ಎಡವಿದರು.ಆರನೇ ಶ್ರೇಯಾಂಕಿತ ಆಟಗಾರ ಹಾಗೂ ಆಸ್ಟ್ರೇಲಿಯಾದ ಸ್ಟೀವನ್ ಫಿನಿಸಿಸ್ ಎದುರು ಕಳಾಹೀನ ಪ್ರದರ್ಶನ ನೀಡಿದ ಕುಶ್, 5-11, 7-11, 9-11ರ ಮೂರು ನೇರ ಗೇಮ್ ಗಳ ಆಟದಲ್ಲಿ ಸೋಲನುಭವಿಸಿದರು.
ಪುರುಷರ ಸಿಂಗಲ್ಸ್ ವಿಭಾಗದ ಮತ್ತೊಂದು ಕ್ವಾರ್ಟರ್  ಫೈನಲ್‍ನಲ್ಲಿ ಇಂಗ್ಲೆಂಡ್‍ನ ಜೇಮಿ ಹೇಕಾಕ್ಸ್ ಎದುರು ಕಠಿಣ ಹೋರಾಟ ನಡೆಸಿದ ಮಹೇಶ್  ಅಂತಿಮ ನಾಲ್ಕರ ಘಟ್ಟಕ್ಕೆ  ಅರ್ಹತೆ ಪಡೆದರು. ನಾಲ್ಕು ಗೇಮ್ ಗಳ ಈ ಕಾದಾಟದಲ್ಲಿ ಮಹೇಶ್ 13 -15, 12- 10, 11-8 ಹಾಗೂ11-7ರಿಂದ ಜಯ ಪಡೆದರು. ಸೆಮಿಫೈನಲ್ ನಲ್ಲಿ ಅವರೀಗ ಆಸ್ಟ್ರೇಲಿಯಾದ ಅಗ್ರ ಶ್ರೇಯಾಂಕಿತ ಆಟಗಾರ ರಿಯಾನ್ ಕಸ್ಕೆಲಿ ವಿರುದ್ಧ ಕಾದಾಡಲಿದ್ದಾರೆ. ಏತನ್ಮಧ್ಯೆ ಮಹಿಳೆಯರರ ಸಿಂಗಲ್ಸ್ ವಿಭಾಗದಲ್ಲಿ ಜೋಶ್ನಾ ಚಿನ್ನಪ್ಪ  ಗೆಲುವಿನ ಓಟವನ್ನು ಮುಂದುವರಿಸಿದರು.  ಮೂರನೇ ಶ್ರೇಯಾಂಕಿತೆ ಜೋಶ್ನಾ ನ್ಯೂಜಿಲೆಂಡ್ ನ ಏಳನೇ ಶ್ರೇಯಾಂಕಿತ ಆಟಗಾರ ಮೇಗನ್ ಕ್ರೆಗ್ ವಿರುದ್ಧ ಗೆಲುವು ಪಡೆದರು. ಜೋಶ್ನಾಕೂಡಾ  ಕಿವೀಸ್ ಆಟಗಾರ್ತಿಯ ವಿರುದ್ಧ ಕಠಿಣ ಪ್ರತಿರೋಧ ಎದುರಿಸಬೇಕಾಯಿತು. ಜೋಶ್ನಾ  11-6, 11-4, 8-11 ಹಾಗೂ 11-9ರ ಅಂತರದಿಂದ ಗೆಲುವು ಸಾಧಿಸಿದರು. ಮುಂದಿನ ಹಂತದಲ್ಲಿ ಆಸ್ಟ್ರೇಲಿಯಾದ ಕ್ರಿಸ್ಟಿನಿ ನನ್ ವಿರುದ್ಧ ಜೋಶ್ನಾ ಸೆಣಸಲಿದ್ದಾರೆ.
ಬಾಲಕಿಯರ ಜಯಭೇರಿ ಇತ್ತ ಹಾಲೆಂಡ್‍ನ ಎಂಡ್‍ಹೊವೆನ್‍ನಲ್ಲಿ ನಡೆ ಯುತ್ತಿರುವ ವಿಶ್ವ ಜೂನಿಯರ್ ಸ್ಕ್ವಾಶ್ ಚಾಂಪಿಯನ್‍ಶಿಪ್‍ನಲ್ಲಿ ಭಾರತ ಬಾಲಕಿಯರ ತಂಡ ಶುಭಾರಂಭ ಮಾಡಿದೆ. ಟೂರ್ನಿಯ ಆರಂಭಿಕ ದಿನದಂದು ಆಕಾಂಕ್ಷಾ ಸಾಲುಂಖೆ, ಹರ್ಷಿತ್ ಜವಾಂಡ ಹಾಗೂಆದ್ಯಾ ಆಡ್ವಾಣಿ ಅವರಿದ್ದ ಭಾರತ ತಂಡ 30 ಅಂತರದಿಂದ ಫಿನ್ಲಾಂಡ್ ವಿರುದ್ಧ ಜಯಭೇರಿ ಬಾರಿಸಿತಲ್ಲದೆ, ಎರಡನೇ ಸುತ್ತಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಲು ಅರ್ಹತೆ ಪಡೆದುಕೊಂಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com