ಕೋಚ್ ಬದಲಾವಣೆ ಸರಿಯಲ್ಲ: ಸಿಂಗ್

ಭಾರತ ಹಾಕಿ ತಂಡದಲ್ಲಿ ಪದೇ ಪದೇ ಕೋಚ್‍ಗಳನ್ನು ಬದಲಿಸುತ್ತಿದ್ದರೆ, ಅದು ಆಟಗಾರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ನಾಯಕ ಸರ್ದಾರ್...
ಸರ್ದಾರ್ ಸಿಂಗ್
ಸರ್ದಾರ್ ಸಿಂಗ್

ನವದೆಹಲಿ: ಭಾರತ ಹಾಕಿ ತಂಡದಲ್ಲಿ ಪದೇ ಪದೇ ಕೋಚ್‍ಗಳನ್ನು ಬದಲಿಸುತ್ತಿದ್ದರೆ, ಅದು ಆಟಗಾರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ನಾಯಕ ಸರ್ದಾರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ``ಪ್ರತಿ ಬಾರಿ ಹೊಸ ಕೋಚ್ ತಂಡಕ್ಕೆ ಬಂದಾಗಲೂ ಆಟಗಾರರು ಸಮಸ್ಯೆ ಗಳನ್ನು ಎದುರಿಸುತ್ತಾರೆ. ತಂಡದ ತಂತ್ರಗಾರಿಕೆಯೂ ಸಂಪೂರ್ಣವಾಗಿ ಬದಲಾಗುತ್ತದೆ. ಅಲ್ಲದೆ ಕೋಚ್ ಬದಲಾದ ನಂತರ ಮತ್ತೆ ತಂಡವನ್ನು ಕಟ್ಟಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆಯಲ್ಲದೇ ದೊಡ್ಡ ಸವಾಲಾಗಿರುತ್ತದೆ. ಆದರೆ, ಮುಂಬರುವ ವಿದೇಶಿ ಪ್ರವಾಸ ಹಾಗೂ ಒಲಿಂಪಿಕ್ಸ್ ನಲ್ಲಿ ತಂಡಕ್ಕೆ ಯಾವುದೇ ತೊಂದರೆಯಾಗದಿರುವ ವಿಶ್ವಾಸವಿದೆ'' ಎಂದು ಸರ್ದಾರ್ ಹೇಳಿದ್ದಾರೆ. ಪೌಲ್ ವಾನ್ ಆ್ಯಸ್ ಅವರನ್ನು ತೆಗೆದುಹಾಕಲಾದ ಹಿನ್ನೆಲೆಯಲ್ಲಿ ಕಳೆದ ಕೆಲವು ವರ್ಷಗಳಲ್ಲಿ ನಾಲ್ಕನೇ ಕೋಚ್ ಬದಲಾದಂತಾಗಿದೆ ಎಂದು ಎನ್‍ಡಿಟಿವಿ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com