ಸಚಿನ್ ಗುರುವಂದನೆ

ಸಾಧನೆಯ ತುಟ್ಟತುದಿಯನ್ನು ಮುಟ್ಟಿದ ಬಳಿಕ ತಾವು ಏರಿ ಬಂದ ಏಣಿಯನ್ನು ನೆನೆಯುವವರಿಗಿಂತ ಮರೆಯುವವರೇ ಹೆಚ್ಚು. ಕ್ರಿಕೆಟ್ ಲೋಕದ...
ರಮಾಕಾಂತ್ ಅಚ್ರೇಕರ್ ಅವರ ಮನೆಗೆ ತೆರಳಿದ ಸಚಿನ್, ಅವರಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಸಚಿನ್ (ಕೃಪೆ: ಫೇಸ್ ಬುಕ್ )
ರಮಾಕಾಂತ್ ಅಚ್ರೇಕರ್ ಅವರ ಮನೆಗೆ ತೆರಳಿದ ಸಚಿನ್, ಅವರಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಸಚಿನ್ (ಕೃಪೆ: ಫೇಸ್ ಬುಕ್ )

ಮುಂಬೈ: ಸಾಧನೆಯ ತುಟ್ಟತುದಿಯನ್ನು ಮುಟ್ಟಿದ ಬಳಿಕ ತಾವು ಏರಿ ಬಂದ ಏಣಿಯನ್ನು ನೆನೆಯುವವರಿಗಿಂತ ಮರೆಯುವವರೇ ಹೆಚ್ಚು. ಕ್ರಿಕೆಟ್ ಲೋಕದ ದಿಗ್ಗಜ ಸಚಿನ್ ತೆಂಡೂಲ್ಕರ್ ಅಂಥವರ ಪಟ್ಟಿಗೆ ತಾವು ಸೇರಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಶುಕ್ರವಾರ ಗುರುಪೌರ್ಣಿಮೆಯ ಶುಭದಿನದಂದು ತಮ್ಮ ಬಾಲ್ಯದ ಕ್ರಿಕೆಟ್ ಗುರುವಾದ ರಮಾಕಾಂತ್ ಅಚ್ರೇಕರ್ ಅವರ ಮನೆಗೆ ತೆರಳಿದ ಸಚಿನ್, ಅವರಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾರೆ. ತಮ್ಮ ಪ್ರಿಯ ಶಿಷ್ಯ ಮನೆಗೆ ಆಗಮಿಸಿದ್ದು 83 ವರ್ಷದ ಅಚ್ರೇಕರ್‍ಗೆ ಭಾರಿ ಸಂತಸ ತಂದಿತ್ತು. ತುಂಬು ಹೃದಯದಿಂದ ಸಚಿನ್ ಅವರನ್ನು ಅವರು ಆಶೀರ್ವದಿಸಿದರು. ನಂತರ, ಸಚಿನ್ ಅವರು, ತಮ್ಮ ಗುರುಗಳ ಸಹಿತ ಅವರ ಕುಟುಂಬ ಸದಸ್ಯರೊಡನೆ ಫೋಟೊ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com