
ನವದೆಹಲಿ: ಮೂರು ವರ್ಷಗಳ ಹಿಂದೆ ಉದ್ಯಮಿ ವಿಜಯ್ ಮಲ್ಯ ಅವರು, ತಮ್ಮ ಒಡೆತನದಲ್ಲಿದ್ದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್(ಯುಎಸ್ಎಲ್)ನ ಖಾತೆಯಲ್ಲಿದ್ದ ಸುಮಾರು ರು. 170 ಕೋಟಿಯಷ್ಟು ಹಣವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‍ಸಿಬಿ) ತಂಡದ ಖಾತೆಗೆ ವರ್ಗಾಯಿಸಿದ್ದರೆಂದು ಡಿಎನ್‍ಎ ವರದಿ ಮಾಡಿರುವುದಾಗಿ ಖಾಸಗಿ ಚಾನೆಲ್ ಒಂದು ಹೇಳಿದೆ.
ಯುಎಸ್‍ಎಲ್‍ನಲ್ಲಿದ್ದ ಆರ್‍ಸಿಬಿಯ ಷೇರುಗಳಿಗೆ ನೀಡಬೇಕಿದ್ದ ಲಾಭಾಂಶದ ರೂಪದಲ್ಲಿ ಈ ಹಣದ ವರ್ಗಾವಣೆ ನಡೆದಿತ್ತು. 2011ರ ಮಾ. 11ರಂದು ಯುಬಿಯ ಷೇರುಗಳನ್ನು ಆರ್‍ಸಿಬಿ ಪಡೆದಿತ್ತು. ಪ್ರತಿ ಷೇರಿನ ಬೆಲೆ ರು. 10ನಂತೆ ಷೇರುಗಳನ್ನು ಖರೀದಿಸಲಾಗಿತ್ತು.
ನಂತರ, ಯುಎಸ್ಎಲ್ ನ ಲಾಭಾಂಶದಲ್ಲಿ ಪ್ರತಿ ಷೇರ್ ಗೆ ರು. 3,62,240 ಲೆಕ್ಕಾಚಾರದಲ್ಲಿ ಆರ್‍ಸಿಬಿ ಖಾತೆಗೆ ರು.170 ಕೋಟಿ ವರ್ಗಾಯಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
Advertisement