ಜಾಕ್ ವಾರ್ನರ್
ಕ್ರೀಡೆ
ಜೀವ ಭಯವಿದೆ, ಸತ್ಯ ಮುಚ್ಚಿಡಲ್ಲ
ಫಿಫಾ ಲಂಚ ಹಗರಣ ವಿವಾದದ ಕೇಂದ್ರ ಬಿಂದುವಾಗಿರುವ ಮಾಜಿ ಉಪಾಧ್ಯಕ್ಷ ಜಾನ್ ವಾರ್ನರ್, ತಮ್ಮ ಜೀವಕ್ಕೆ ಕುತ್ತು ಎದುರಾಗಿದೆ...
ಟ್ರಿನಿಡಾಡ್: ಫಿಫಾ ಲಂಚ ಹಗರಣ ವಿವಾದದ ಕೇಂದ್ರ ಬಿಂದುವಾಗಿರುವ ಮಾಜಿ ಉಪಾಧ್ಯಕ್ಷ ಜಾನ್ ವಾರ್ನರ್, ತಮ್ಮ ಜೀವಕ್ಕೆ ಕುತ್ತು ಎದುರಾಗಿದೆ ಎಂಬ ಭಯ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ತನಿಖೆಯಲ್ಲಿ ಪ್ರಕರಣದಲ್ಲಿ ತಮಗೆ ತಿಳಿದಿರುವ ಎಲ್ಲ ಮಾಹಿತಿಯನ್ನು ಹೇಳಲು ಒಪ್ಪಿಕೊಂಡಿದ್ದಾರೆ.
ಈ ದಿನ ಎದುರಾಗಲಿದೆ ಎಂಬುದು ಗೊತ್ತಿತ್ತು. ಹಾಗಾಗಿ ಇಷ್ಟು ದಿನ ಮೌನವಹಿಸಿದ್ದೆ. ಇನ್ನು ಮುಂದೆ ಯಾವುದೇ ವಿಷಯ ಮುಚ್ಚಿಡುವುದಿಲ್ಲ ಎಂದು ವಾರ್ನರ್ ತಿಳಿಸಿದ್ದಾರೆ.
ಮರಾಬೆಲ್ಲಾದಲ್ಲಿನ ರಾಜಕೀಯ ರ್ಯಾಲಿ ಸಂದರ್ಭದಲ್ಲಿ ಮಾತನಾಡಿದ ವಾರ್ನರ್, ವಿಶ್ವ ಫುಟ್ಬಾಲ್ ಸಂಸ್ಥೆ ಮತ್ತು 2010ರಲ್ಲಿ ತಮ್ಮ ದೇಶದ ಚುನಾವಣೆಯ ನಡುವಣ ಸಂಬಂಧವನ್ನು ಸಾಬೀತು ಮಾಡಲಾಗುವುದು. ಟ್ರಿನಿಡಾಡ್ ಅಂಡ್ ಟೊಬೋಗೊ ಚುನಾವಣೆ ಮತ್ತು ಫಿಫಾ ಮಾಜಿ ಅಧ್ಯಕ್ಷ ಸೆಪ್ ಬ್ಲಾಟರ್ ಸೇರಿದಂತೆ ಇತರೆ ಅಧಿಕಾರಿಗಳ ಸಂಪರ್ಕದ ಕುರಿತು ತಮ್ಮಲ್ಲಿ ದಾಖಲೆಗಳಿವೆ ಎಂದು ವಾರ್ನರ್ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ