ಏಷ್ಯನ್ ಅಥ್ಲೇಟಿಕ್ಸ್ ಚಾಂಪಿಯನ್ ಶಿಪ್: ಚಿನ್ನ ಗೆದ್ದ ವಿಕಾಸ್

ಕರ್ನಾಟಕದ ಖ್ಯಾತ ಡಿಸ್ಕಸ್ ಥ್ರೋ ಪಟು ವಿಕಾಸ್ ಗೌಡ 1 ನೇ ಏಷ್ಯನ್ ಅಥ್ಲೇಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
ವಿಕಾಸ್ ಗೌಡ
ವಿಕಾಸ್ ಗೌಡ

ಕರ್ನಾಟಕದ ಖ್ಯಾತ ಡಿಸ್ಕಸ್ ಥ್ರೋ ಪಟು ವಿಕಾಸ್ ಗೌಡ 1 ನೇ ಏಷ್ಯನ್ ಅಥ್ಲೇಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

ಪುರುಷರ ಡಿಸ್ಕಸ್ ಥ್ರೋ ಫೈನಲ್ಸ್ ನಲ್ಲಿ ವಿಕಾಸ್ ಗೌಡ 62 .03 ಮೀಟರ್ ದೂರ ಎಸೆಯುವ ಮೂಲಕ ಚಿನ್ನದ ಪದಕ ಪಡೆದಿದ್ದು 2013 ರಲ್ಲಿ ಪುಣೆಯಲ್ಲಿ ನಡೆದಿದ್ದ ಕಳೆದ ಆವೃತ್ತಿಯ ಕ್ರೀಡಾಕೂಟದಲ್ಲಿನ ಚಾಂಪಿಯನ್ ಪಟ್ಟವನ್ನು ಉಳಿಸಿಕೊಂಡಿದ್ದಾರೆ. ಈ ವರ್ಷ 65 ಮೀಟರ್ ಗೂ ಹೆಚ್ಚು ದೂರ ಎಸೆದಿರುವ ವಿಕಾಸ್ ಗೌಡ, ಮುಂದಿನ ವರ್ಷ ನಡೆಯಲಿರುವ ರಿಯೋ ಒಲಂಪಿಕ್ಸ್ ಗೆ ಇನ್ನಷ್ಟೇ ಅರ್ಹತೆ ಪಡೆಯಬೇಕಿದೆ.  

ಫೈನಲ್ಸ್ ಪಂದ್ಯದಲ್ಲಿ ಕುವೈತ್ ನ ಐಸಾ ಜಂಕಾವಿ ಮತ್ತು ಇರಾನ್ ನ ಮೊಹಮದ್ ಸಮಿಮಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಪಡೆದಿದ್ದಾರೆ. ಇನ್ನು ಸ್ಟೀಪಲ್ ಚೇಸ್ ಓಟಗಾರ್ತಿ ಲಲಿತಾ ಬಬರ್ ಸಹ ಸ್ವರ್ಣ ಗೆಲ್ಲುವುದರೊಂದಿಗೆ ಭಾರತ ಕ್ರೀಡಾಕೂಟದ ಮೂರನೆಯ ದಿನ ಮೂರು ಪದಕಗಳನ್ನು ಬಾಚಿಕೊಂಡಿದೆ. ಮಹಾರಾಷ್ಟ್ರ ಮೂಲದ ಓಟಗಾರ್ತಿ ಲಲಿತಾ ಬಬರ್ 3000 ಮೀಟರ್ ಸ್ಟೀಪಲ್ ಚೇಸ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದು ಸ್ವರ್ಣ ಪದಕ ಸಂಪಾದಿಸಿದ್ದಾರೆ.

ತಮ್ಮ ರಾಷ್ಟ್ರೀಯ ದಾಖಲೆಗಳನ್ನು ಉತ್ತಮಗೊಳಿಸಿರುವ ಲಲಿತಾ 9 :34 :೧೩ ನಿಮಿಷದಲ್ಲಿ ಗುರಿ ತಲುಪುವ ಮೂಲಕ ಅಗ್ರಸ್ಥಾನ ಪಡೆದಿದ್ದಾರೆ.   ಏಷ್ಯಾದ ಪ್ರಮುಖ  ಓಟಗಾರ್ತಿ ಬಹರೇನ್ ನ ಗುತ್ ಚೆಬೆಟ್ ಓಟದ ಅರ್ಧದಲ್ಲೇ ನಿರ್ಗಮಿಸಿದ್ದು ಲಲಿತಾ ಅವರಿಗೆ ಅಗ್ರ ಸ್ಥಾನ ಪಡೆಯಲು ನೆರವಾಯಿತು. ಇನ್ನು ತಮಿಳುನಾಡು ಮೂಲದ ಓಟಗಾರ ಜಿ. ಲಕ್ಷ್ಮಣನ್ ಕ್ರೀಡಾಕೂಟದಲ್ಲಿ ಎರಡನೇ ಪದಕ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com