ಬಾರ್ಸಿಲೋನಾ ಚಾಂಪಿಯನ್

ಯುರೋಪಿಯನ್ ಫುಟ್ಬಾಲ್ ನ ಪ್ರತಿಷ್ಠಿತ ಫುಟ್ಬಾಲ್ ಟೂರ್ನಿಯಾಗಿರುವ ಯುಇಎಫ್ಎ ಚ್ಯಾಂಪಿಯನ್ಸ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಸ್ಪೇನ್ ನ ಎಫ್ ಸಿ ಬಾರ್ಸಿಲೋನಾ ಪ್ರಶಸ್ತಿ ಎತ್ತಿ ಹಿಡಿದಿದೆ.
ವಿಜಯದ ಸಂಭ್ರಮದಲ್ಲಿ ಬಾರ್ಸಿಲೋನಾ ತಂಡ
ವಿಜಯದ ಸಂಭ್ರಮದಲ್ಲಿ ಬಾರ್ಸಿಲೋನಾ ತಂಡ

ಬರ್ಲಿನ್: ಯುರೋಪಿಯನ್ ಫುಟ್ಬಾಲ್ ನ ಪ್ರತಿಷ್ಠಿತ ಫುಟ್ಬಾಲ್ ಟೂರ್ನಿಯಾಗಿರುವ  ಯುಇಎಫ್ಎ ಚ್ಯಾಂಪಿಯನ್ಸ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಸ್ಪೇನ್ ನ ಎಫ್ ಸಿ ಬಾರ್ಸಿಲೋನಾ ಪ್ರಶಸ್ತಿ ಎತ್ತಿ ಹಿಡಿದಿದೆ. ಶನಿವಾರ ತಡರಾತ್ರಿ  ನಡೆದ ಪಂದ್ಯದಲ್ಲಿ  ಗೆಲುವಿನ ಫೇವರಿಟ್ ಎಂದೇ ಬಿಂಬಿತವಾಗಿದ್ದ ಬಾರ್ಸಿಲೋನಾ 3-1 ಗೋಲುಗಳ ಅಂತರದಲ್ಲಿ ಜುವೆಂಟಸ್ ವಿರುದ್ಧ ಗೆಲುವು ಸಾಧಿಸಿತು.  ಪ್ರಸಕ್ತ ಸಾಲಿನಲ್ಲಿ ಅತ್ಯುತ್ತಮ ಪಾರ್ಮ್ ನಲ್ಲಿರುವ ಬಾರ್ಸಿಲೋನಾ ನಿರೀಕ್ಷೆಯಂತೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಅಲ್ಲದೇ 5ನೇ ಬಾರಿಗೆ ಈ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ.

ಪಂದ್ಯದ ಆರಂಭದಲ್ಲಿ ರಕ್ಷಣಾತ್ಮಕ ವಿಭಾಗ ಪರದಾಡಿದ ಪರಿಾಮ ತಂಡ ಕೊಂಚ ಲಯ ಕಳೆದುಕೊಂಡಂತಾಯಿತು. ಆದರೆ, ನಾಲ್ಕನೇ ನಿಮಿಷದಲ್ಲಿ ಇವಾನ್ ರಾಕಿಟಿಕ್ ಗೋಲು ದಾಖಲಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ನಂತರ ನಿಯಂತ್ರಣ ಸಾಧಿಸಿದ ಬಾರ್ಸಿಲೋನಾ ಪಂದ್ಯದ ಮೊದಲ ಅವಧಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿತು. ಪಂದ್ಯದ ದ್ವಿತಿಯಾರ್ಧದಲ್ಲಿ ಹೋರಾಟ ನಡೆಸಿದ ಜುವೆಂಟಸ್ 55 ನೇ ನಿಮಿಷದಲ್ಲಿ ಅಲ್ವರೊ ಮೊರಾಟ ಅವರ ಗೋಲಿನಿಂದ ಪಂದ್ಯದಲ್ಲಿ ಸಮಬಲ ಸಾಧಿಸಿತು.

68ನೇ ನಿಮಿಷದಲ್ಲಿ ಎದುರಾಳಿ ಗೋಲ್ ಕೀಪರ್ ಕೈಯ್ಯಿಂದ ಜಾರಿದ ಚೆಂಡನ್ನು ಲೂಯಿಸ್ ಸೂರೆಜ್ ಗೋಲು ಪೆಟ್ಟಿಗೆಯೊಳಗೆ ಸೇರಿಸುವ ಮೂಲಕ ತಂಡಕ್ಕೆ ಮತ್ತೆ ಮುನ್ನಡೆ ತಂದುಕೊಟ್ಟರು.
ಇದಾದ ನಂತರ ಬ್ರೆಜಿಲ್ ತಾರೆ ನೇಮಾರ್ ಚೆಂಡನ್ನು ಗೋಲಿನೊಳಗೆ ಸೇರಿಸಿದರಾದರೂ ಈ ಪ್ರಕ್ರಿಯೆಯಲ್ಲಿ ಕೈಯ್ಯಿಂದ ಚೆಂಡನ್ನು ತಾಗಿಸಿದ್ದರಿಂದ ಗೋಲು ರದ್ದಾಯಿತು.  ನಂತರದ ಜುವೆಂಟಸ್ ಮೇಲೆ ನಿರಂತರವಾಗಿ ಒತ್ತಡಹಾಕಿದ ಬಾರ್ಸಿಲೋನಾ 97ನೇ ನಿಮಿಷದಲ್ಲಿ ನೇಮಾರ್ ಚುರುಕಿನ ಆಟದಿಂದ  ತಂಡದ 3ನೇ ಗೋಲು ದಾಖಲಿಸಿದರು.

ನೇಮಾರ್ ಗೋಲು ದಾಖಲಿಸುತ್ತಿದ್ದಂತೆ ಪಂದ್ಯ ಮುಕ್ತಾಯವಾಯಿತು. ಈ ಗೆಲುವಿನೊಂದಿಗೆ ಬಾರ್ಸಿಲೋನಾ ತಂಡ ಕಳೆದ 10 ವರ್ಷಗಳಲ್ಲಿ ನ್ಲಾಕನೇ ಬಾರಿಗೆ ಚಾಂಪಿಯನ್ಸ್ ಲೀಗ್ ಪ್ರಶಸ್ತಿ ಎತ್ತಿ ಹಿಡಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com