ವ್ಹಾ! ವಾವ್ರಿಂಕಾ

ವಿಶ್ವದ ನಂಬರ್‍ಒನ್ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರ ಕೈಯ್ಯಿಂದ ಮತ್ತೊಮ್ಮೆ _ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಂ ಕಿರೀಟ ಜಾರಿದೆ....
ವಾವ್ರಿಂಕಾ
ವಾವ್ರಿಂಕಾ

ಪ್ಯಾರಿಸ್: ವಿಶ್ವದ ನಂಬರ್‍ಒನ್ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರ ಕೈಯ್ಯಿಂದ ಮತ್ತೊಮ್ಮೆ _ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಂ ಕಿರೀಟ ಜಾರಿದೆ.

 ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಪುರುಷರ ಸಿಂಗಲ್ಸ್ _ಫೈನಲ್ ಪಂದ್ಯದಲ್ಲಿ ಜೊಕೊವಿಚ್ ಅವರು, ಸ್ವಿಜರ್ಲೆಂಡ್‍ನ ಸ್ಟಾನಿಸ್ಲಾಸ್ ವಾವ್ರಿಂಕಾ ವಿರುದ್ಧ 6-4, 6-4, 6-3 ಹಾಗೂ 6-4 ಸೆಟ್‍ಗಳ ಅಂತರದಲ್ಲಿ ಸೋಲು ಕಂಡರು.

 2012 ಹಾಗೂ 2014ರಲ್ಲಿ _ಫೈನಲ್‍ಗೆ ಕಾಲಿಟ್ಟಿದ್ದ ಜೊಕೊವಿಚ್ ಆ ಎರಡೂ ಬಾರಿ ರಾಫೆಲ್ ನಡಾಲ್ ಅವರಿಗೆ ಶರಣಾಗಿದ್ದರು. ಇದೀಗ, 8ನೇ ಶ್ರೇಯಾಂಕದ ವಾವ್ರಿಂಕಾ ಅವರಿಗೆ ತಲೆಬಾಗಿದ್ದಾರೆ. ಈ ಮೂಲಕ, ಅವರ 28 ಪಂದ್ಯಗಳ ಸತತ ಗೆಲವಿನ ನಾಗಾಲೋಟಕ್ಕೂ ಬ್ರೇಕ್ ಬಿದ್ದಿದೆ. ಇದೇ ಪಂದ್ಯಾವಳಿಯಲ್ಲಿ ಒಂಭತ್ತು ಬಾರಿ ಚಾಂಪಿಯನ್ ಆದ ರಾಫೆಲ್ ನಡಾಲ್ ಹಾಗೂ ವಿಶ್ವದ 3ನೇ ಶ್ರೇಯಾಂಕಿತ ಆಟಗಾರ ಆಂಡಿ ಮರ್ರೆ ಅವರನ್ನು ಸೋಲಿಸಿ _ಫೈನಲ್ ಪ್ರವೇಶಿಸಿದ್ದ ಜೊಕೊವಿಚ್‍ಗೆ, ವಾವ್ರಿಂಕಾ ಸೋಲಿನ ಕಹಿ ನೀಡಿದರು.

ಇಲ್ಲಿನ ಫಿಲಿಪ್- ಚಾರ್ಟಿಯರ್ ಅಂಕಣದಲ್ಲಿ ಸುಮಾರು 3 ಗಂಟೆ 12 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ, ಇಬ್ಬರ ಹೋರಾಟ ಮದಗಜಗಳ ಕಾದಾಟದಂತೆ ಸಾಗಿತ್ತು. ವಾವ್ರಿಂಕಾ ಅವರ ಚುರುಕಿನ ಆಟದ ಮಧ್ಯೆಯೂ ಮೊದಲ ಸೆಟ್‍ನಲ್ಲಿ ಗೆಲವು ಪಡೆಯುವಲ್ಲಿ ಸಫಲರಾಗಿದ್ದ ಜೊಕೊವಿಚ್, ನಂತರ ಎರಡೂ ಸೆಟ್‍ಗಳಲ್ಲಿ ಸೋಲು ಕಂಡರು. ಮುಂದೆ ನಾಲ್ಕನೇ ಸೆಟ್‍ನಲ್ಲಿ ತಮ್ಮ ಬಿರುಸಿನ ಆಟದಿಂದಾಗಿ, ಅಗ್ರಮಾನ್ಯ ಆಟಗಾರ ಜೊಕೊವಿಚ್ ಅವರನ್ನು ಮಂಕುಗೊಳಿಸಿದ ವಾವ್ರಿಂಕಾ ನೋಡನೋಡುತ್ತಿದ್ದಂತೆ ಅಂಕಗಳನ್ನು ಪೇರಿಸುತ್ತಾ ಸಾಗಿದರು. ಈ ಸೆಟ್‍ನಲ್ಲಿ ಶಕ್ತಿಮೀರಿ ಹೋರಾಡಿದ ಜೊಕೊವಿಚ್ ಅವರು, ಶತಾಯಗತಾಯ ಗೆಲ್ಲಲು ಪ್ರಯತ್ನಿಸಿದರಾದರೂ ಅದು ಸಾಧ್ಯವಾಗಲಿಲ್ಲ. ಅಂತಿಮವಾಗಿ, ವಾವ್ರಿಂಕಾ ಅವರು ಇಲ್ಲಿ ಜಯಗಳಿಸಿ, ತಮ್ಮ ವೃತ್ತಿಜೀವನದಲ್ಲಿ ಎರಡನೇ ಬಾರಿಗೆ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com